Advertisement

ವಿಭಜಿತ ಬಳ್ಳಾರಿ ಉಸ್ತುವಾರಿ ಯಾರಿಗೆ?

11:30 PM Mar 04, 2021 | Team Udayavani |

ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕವಾದ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.

Advertisement

ಅವಿಭಜಿತ ಬಳ್ಳಾರಿ ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿರುವ ಆನಂದ ಸಿಂಗ್‌ ಅವರೇ ಸದ್ಯ ಉಭಯ ಜಿಲ್ಲೆಗಳ ಉಸ್ತುವಾರಿಯಾಗಿದ್ದಾರೆ. ಆದರೆ ವಿಜಯ ನಗರ ಜಿಲ್ಲಾಭಿವೃದ್ಧಿ, ಅಧಿಕಾರಿಗಳ ನೇಮಕ ಸೇರಿ ಅಗತ್ಯ ಕೆಲಸಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಆನಂದ ಸಿಂಗ್‌ ಅವರು ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನಷ್ಟೇ ವಹಿಸಿಕೊಳ್ಳಲಿದ್ದಾರೆ. ವಿಭಜಿತ ಬಳ್ಳಾರಿ ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯ ಜಿ.ಸೋಮ ಶೇಖರ ರೆಡ್ಡಿ, ಸಿರುಗುಪ್ಪದ ಎಂ.ಎಸ್‌. ಸೋಮಲಿಂಗಪ್ಪ ಇಬ್ಬರು ಶಾಸಕರಿದ್ದಾರೆ. ಆದರೆ ಈ ಇಬ್ಬರನ್ನು ಹೊರತುಪಡಿಸಿ ಬಳ್ಳಾರಿ ಮೂಲದ ಮೊಳಕಾ ಲ್ಮೂರು ಶಾಸಕ, ಸಮಾಜ ಕಲ್ಯಾಣ ಸಚಿವ  ಶ್ರೀರಾಮುಲು ಹೆಸರು ಕೇಳಿಬರುತ್ತಿದೆ.

ಬಳ್ಳಾರಿ ಜಿಲ್ಲೆ ವಿಭಜನೆಗೆ ತೀವ್ರವಾಗಿ ವಿರೋಧಿಸಿದ್ದ ಶಾಸಕ ಜಿ. ಸೋಮಶೇಖರ ರೆಡ್ಡಿ ಸಚಿವ ಆನಂದ ಸಿಂಗ್‌ ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಯಾಗಿ ಮುಂದುವರಿಯಬಾರದು ಎಂದು ಈಗಾಗಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಯನ್ನು ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡಲಿ ಎಂದೂ ಸಹಮತ ವ್ಯಕ್ತಪಡಿಸಿ ದ್ದಾರೆ. ಇತ್ತ ಸಚಿವ ಆನಂದ ಸಿಂಗ್‌ ಸಹ ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿ ನಾನೇ ಇರಬೇಕು. ಇಲ್ಲದಿದ್ದರೆ ಸಚಿವ ಬಿ. ಶ್ರೀರಾಮುಲು ಆಗಬೇಕು. ಹೊರಗಿನವರಿಗೆ ಬಿಟ್ಟು ಕೊಡಲು ನಾನು ಒಪ್ಪಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ. ಹೀಗಾಗಿ ರಾಮುಲು ಅವರಿಗೇ ಜಿಲ್ಲೆಯ ಉಸ್ತುವಾರಿ ಲಭಿಸಲಿದೆಯೇ ಎಂಬ ಕುತೂಹಲ ಮೂಡಿದೆ.

ಉಸ್ತುವಾರಿಗಾಗಿ ರಾಮುಲು ಯತ್ನ: ಮೂಲಗಳ ಪ್ರಕಾರ ವಿಭಜಿತ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಲು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತೆರೆಮರೆಯ ಪ್ರಯತ್ನದಲ್ಲಿದ್ದಾರೆ. ಆದಷ್ಟು ಬೇಗ ರಾಮುಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕಮಲ ಪಕ್ಷದಲ್ಲಿ ಕೇಳಿ ಬರುತ್ತಿದೆ. ಮೇಲಾಗಿ ಆನಂದ ಸಿಂಗ್‌ ಮತ್ತು ಶ್ರೀರಾಮುಲು ಇಬ್ಬರೂ ಆಪ್ತ ರಾಗಿದ್ದಾರೆ. ಈ ಕಾರಣದಿಂದಲೇ ಬಳ್ಳಾರಿ ವಿಭಜನೆಗೆ ಸೋಮಶೇಖರ ರೆಡ್ಡಿ ವಿರೋಧಿ ಸಿದ್ದರೂ ರಾಮುಲು ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಸಹಮತ ವ್ಯಕ್ತಪಡಿಸಿದ್ದರು.

ಭವಿಷ್ಯದ ರಾಜಕೀಯ ದೃಷ್ಟಿಯಿಂದ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಬಿ.ಶ್ರೀರಾಮುಲು, ಸಹಮತ ವ್ಯಕ್ತಪಡಿಸಿ ದ್ದಾರೆ.2022ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಹ ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಸ್ಪರ್ಧಿಸಿದಲ್ಲಿ ಇದಕ್ಕೆ ಸಿಂಗ್‌ ಬೆಂಬಲವು ಸಹ ಸಿಗಲಿದೆ ಎನ್ನಲಾಗಿದೆ.

Advertisement

 

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next