Advertisement
ಸಚಿವರ ಮನೆ ಮೇಲೆ ಐಟಿ ದಾಳಿ ನಡೆಸಿದ ಬಳಿಕ ಅವರ ಸಂಬಂಧಿಕರು, ಆಪ್ತರು, ಕಚೇರಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯ. ಆದರೆ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ ಬಳಿಕ ಕೇಳಿ ಬಂದ ಮತ್ತೂಂದು ಹೆಸರು ಜೋತಿಷಿ ದ್ವಾರಕಾನಾಥ್. ದ್ವಾರಕಾನಾಥ್‌ಗೂ ಡಿ.ಕೆ. ಶಿವಕುಮಾರ್‌ಗೂ ಏನು ಸಂಬಂಧ? ಅವರು ಅಷ್ಟೊಂದು ಪ್ರಭಾವಿಯಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.
Related Articles
ದ್ವಾರಕಾನಾಥ್ ಅವರ ತಂದೆ ಹೆಸರಾಂತ ಜೋತಿಷಿ ಬೆಳ್ಳೂರು ಶಂಕರನಾರಾಯಣ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕುಟುಂಬ ವಾಸವಿತ್ತು. ದ್ವಾರಕಾನಾಥ್ ಬೆಂಗಳೂರಿನ ಆರ್.ಟಿ. ನಗರದಲ್ಲಿ ವಾಸವಾಗಿ¨ªಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಅವರಿಗೆ ಓರ್ವ ಪುತ್ರಿ, ಓರ್ವ ಪುತ್ರನಿದ್ದು, ಇವರಿಬ್ಬರೂ ವೈದ್ಯರನ್ನೇ ಮದುವೆಯಾಗಿ¨ªಾರೆ.
Advertisement
ತುರ್ತು ಪರಿಸ್ಥಿತಿ ಬಳಿಕ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಗೆಲುವಿನ ಭವಿಷ್ಯವನ್ನು ನಿಖರವಾಗಿ ನುಡಿದಿದ್ದ ಕಾರಣ ದ್ವಾರಕಾನಾಥ್ ಕಾಂಗ್ರೆಸ್ ಕೈ ನಾಯಕರಿಗೆ ಹತ್ತಿರವಾಗಿದ್ದರು. 2014ರ ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುತ್ತಾರೆ ಎಂದು ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೊದಲೇ ನುಡಿದಿದ್ದರು.
ಸಿಬಿಐ ಬಲೆಗೆಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿವಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆಗ ದ್ವಾರಕಾನಾಥ್ ತನ್ನ ಮಗಳಿಗೆ ಪಿಜಿ ಸೀಟ… ಕೊಡಿಸಿದ್ದು ದೊಡ್ಡ ವಿವಾದವಾಗಿ ಸಿಬಿಐ ತನಿಖೆಯೂ ನಡೆದಿತ್ತು. ರಾಜಕಾರಣಿಗಳು ಹಾಗೂ ದ್ವಾರಕಾನಾಥ್ ನಡುವಿನ ನಂಟು ಇತ್ತೀಚೆಗಿನದಲ್ಲ. ಇವರ ಮನೆಯÇÉೇ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ನಿಧನ ಹೊಂದಿದ್ದು. ಈ ಸಾವು ಸಹಜ ಸಾವಲ್ಲ, ಸಂಶಯಾಸ್ಪದ ಸಾವು. ಇದರ ಬಗ್ಗೆ ತನಿಖೆಯಾಗಬೇಕು ಎಂದು ಅರಸು ಕುಟುಂಬಸ್ಥರು ಆಗ್ರಹಿಸಿದ್ದರು. ಈ ಮೂಲಕ ಮೊದಲ ಬಾರಿಗೆ ದ್ವಾರಕಾನಾಥ್ ವಿವಾದದಲ್ಲಿ ಸಿಲುಕಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಕೇಂದ್ರ ಗೃಹ ಸಚಿವ ಸುಶೀಲ…ಕುಮಾರ್ ಶಿಂಧೆ, ಸೋನಿಯಾ ರಾಜಕೀಯ ಕಾರ್ಯದರ್ಶಿ ಪ್ರಸ್ತುತ ಗುಜರಾತ್‌ನಲ್ಲಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಹ್ಮದ್ ಪಟೇಲ…, ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಧರಂ ಸಿಂಗ್, ಎಸ್.ಎಂ. ಕೃಷ್ಣ ಅವರಿಗೂ ಆಪ್ತರು ದ್ವಾರಕಾನಾಥ್ ಎಂದು ಹೇಳಲಾಗಿದೆ. ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳಲ್ಲೂ ದ್ವಾರಕಾನಾಥ್‌ಗೆ ಸ್ನೇಹಿತರಿದ್ದು, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಅವರ ನಿವಾಸಕ್ಕೆ ಹೋಗಿ ಭವಿಷ್ಯ ಕೇಳುತ್ತಾರೆ.