Advertisement

ಉಪ್ಪಾರರಿಗೆ ಸಹಾಯ ಮಾಡಿದ ತೃಪ್ತಿಯಿದೆ

12:49 PM Mar 18, 2017 | |

ನಂಜನಗೂಡು: ತಮ್ಮ ರಾಜಕೀಯ ಜೀವನದಲ್ಲಿ ಸಮಾಜದಲ್ಲಿರುವ ಎಲ್ಲಾ ವರ್ಗಗಳಿಗೂ ಕೈಲಾದ ಸಹಾಯ ಮಾಡಿದ್ದು ಅದರಲ್ಲಿ ಉಪ್ಪಾರರಿಗೆ ಮಾಡಿದ ಸಹಾಯವೇ ಹೆಚ್ಚಾಗಿದ್ದು ಅತೃಪ್ತಿ ತಮಗಿದೆ. ಉಳಿದವರಿಗೂ ತಾವು ಸಾಮಾಜಿಕ ನ್ಯಾಯದಂತೆ ಕೈಲಾದ ಸಹಕಾರ ನೀಡಿರುವುದಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್‌ ಪ್ರಸಾದ್‌ ತಿಳಿಸಿದರು.

Advertisement

ಅವರು ನಗರಸಭಾ ವ್ಯಾಪ್ತಿಯ ಚಾಮಲಾಪುರಹುಂಡಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದª ಸಭೆಯಲ್ಲಿ ಮಾತನಾಡಿ, ನಂಜನಗೂಡು ನಗರ ಸೇರಿದಂತೆ ಅತಿ ಹೆಚ್ಚು ಉಪ್ಪಾರರು ವಾಸಿಸುವ ಗ್ರಾಮಗಳಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಟ್ಟಿದ್ದು ಈ ಸಮಾಜದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳ ಕಾರ್ಯಗತ ಮಾಡಿರುವುದಾಗಿ ಅವರು ತಿಳಿಸಿದರು.

ಉಜ್ವಲ ಭವಿಷ್ಯಕ್ಕೆ ಮತನೀಡಿ: ಬಿಜೆಪಿ ಮುಖಂಡ ಎಸ್‌ ರಾಮದಾಸ ಪಟ್ಟಣದ 456 ನೇ ವಾರ್ಡ್‌ ಭೇಟಿ ಕಾಲದಲ್ಲಿ ಪ್ರತಿ ಮತದಾರರನ್ನು ಕಂಡು  ದೇಶದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು ಮೈಸೂರು ಜಿಲ್ಲಾ ಉಫಾಧ್ಯಕ್ಷರುಗಳಾದ ಎಸ್‌.ಮಹದೇವಯ್ಯ, ಕೆ.ಕೆ, ಜಯದೇವ್‌, ನಗರಸಭಾ ಉಫಾದ್ಯಕ್ಷ ಪ್ರದೀಪ್‌, ನಗರಾಧ್ಯಕ್ಷ ವಿನಯ್‌ಕುಮಾರ್‌,

ಮಾಜಿ ಮುಡಾ ಅಧ್ಯಕ್ಷ ಕೆ.ಆರ್‌.ಮೋಹನಕುಮಾರ್‌, ಬಿಜೆಪಿ ಮುಖಂಡರಾದ ಯು,ಎನ್‌. ಪದ್ಮನಾಭರಾವ್‌, ಹರ್ಷವರ್ದನ್‌, ಕುಂಬ್ರಳ್ಳಿ ಸುಬ್ಬಣ್ಣ ಆಶ್ರಯ ಸಮಿತಿ ಅಧ್ಯಕ್ಷ ಬಾಲಚಂದ್ರು, ನಗರಸಭಾ ಸದಸ್ಯ ದೋರೆಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ಆರ್‌.ಶಂಕರಪ್ಪ, ಸ್ವಾಮಿ, ಸ್ಲಂ, ಉಪಾಧ್ಯಕ್ಷ ಚಂದ್ರಶೇಖರ್‌, ಪ್ರಧಾನ ಕಾರ್ಯದರ್ಶಿ ಸಿ. ಕೃಷ್ಣ, ಮೈಕ್‌ ಮಹದೇವು ಎಲ್ಲಾ ಬಡಾವಣೆ ಯುವಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next