Advertisement

ಯಾರು ಬರುವರು ನನ್ನ ಹಿಂದೆ?

12:44 AM Oct 07, 2022 | Team Udayavani |

ಜಗತ್ತಿನ ಎಲ್ಲ ಜೀವ ವೈವಿಧ್ಯಗಳಲ್ಲಿ ಒಂದಲ್ಲ ಒಂದು ರೀತಿ ಸ್ಪರ್ಧೆ ಎರ್ಪಟ್ಟಂತೆ ತಾ ಮುಂದು ನಾ ಮುಂದು ಎಂದು ತನಗಿಂತ ಕಿರಿದಾದ, ತನಗಿಂತ ಬಲಹೀನವಾದ ಜೀವಿಗಳ ಮೇಲೆ ತನ್ನ ಅಧಿಪಥ್ಯ ಸ್ಥಾಪಿಸಲು ಎಲ್ಲ ಜೀವಿಗಳು ಹವಣಿಸುತ್ತಿರುತ್ತವೆ. ಯಾವಾಗಲು ತಾನೇ ಬಲಶಾಲಿಯಾಗಿರಬೇಕು, ತಾನು ನೆನೆದಂತೆ ನಡೆಯಬೇಕು ಎಂದು ಹವಣಿಸುತ್ತ ಪ್ರಕೃತಿಗೆ ವಿರುದ್ಧವಾಗಿ ತನ್ನ ಶಕ್ತಿ ಪ್ರದರ್ಶನ ಮಾಡುತ್ತ ಪ್ರಕೃತಿಯಲ್ಲೇ ಹುಟ್ಟಿ ಬೆಳೆದು ಇದೇ ಪ್ರಕೃತಿಯಲ್ಲಿ ಲೀನವಾಗುತ್ತವೆ.

Advertisement

ಪ್ರಕೃತಿಯಲ್ಲಿನ ಇಂಥ ಜೀವ ವೈವಿಧ್ಯದಲ್ಲಿನ ಒಂದು ಮಹಾನ್‌ ಜೀವಿಯೇ ಮಾನವ ಜೀವಿ, ಆದಿಮಾನವರಿಂದ ಹಿಡಿದು ಇತ್ತೀಚಿನ ಮಹಾ ಬುದ್ದಿವಂತರೆಲ್ಲ ಒಂದೇ ವರ್ಗಕ್ಕೆ ಸೇರಿದವರು.
ತಾನಾಯಿತು ತನ್ನ ಕೆಲಸವಾಯಿತು ಅಂತ ಇರುವವರ ಮಧ್ಯೆ ತಾನು ಕೂಡ ಒಬ್ಬ ಅಂತ ತಿಳಿದೂ ಇತರ ಜೀವಿಗಳಿಗೆ ಉಪಕಾರ-ಅಪಕಾರ ಮಾಡುತ್ತಾ ತಾನು ಹುಟ್ಟಿ ಬೆಳೆದ ಪ್ರಕೃತಿಯಲ್ಲಿನ ಎಲ್ಲ ಸವಲತ್ತುಗಳನ್ನು ಅನುಭವಿಸಿ ಕೊನೆಗೊಂದು ದಿನ ಇನ್ನಿಲ್ಲವಾಗುತ್ತಾನೆ. ಹೀಗಿರುವಾಗ ತನ್ನಂತೆ ಇರುವ ಇತರ ಜೀವಿಗಳೊಂದಿಗೆ ಸಂತೋಷದಿಂದ ಬದುಕುವುದನ್ನು ಬಿಟ್ಟು ತಾನೇ ಮೇಲು, ತಾನು ಹೇಳಿದಂತೆ ಇತರರು ನಡೆಯಬೇಕೆಂಬ ಹಂಬಲ, ತಾನೇ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೆ ಇರಬೇಕು, ತಾನೇ ಶ್ರೇಷ್ಠ ಅಂತ ಜಂಬ ಕೊಚ್ಚಿಕೋಳ್ಳುತ್ತಲೆ ಇರುತ್ತಾನೆ.

ಅದಕ್ಕೆ ಇಂಬು ನೀಡುವಂತೆ ತನ್ನ ಗ್ರಹಬಲದಿಂಲೋ ತನ್ನ ಪೂರ್ವ ಜನ್ಮದ ಫ‌ಲದಿಂದಲೊ ಎತ್ತರೆತ್ತರಕ್ಕೆ ಬೆಳೆಯುತ್ತಾ ಹೋದ ಹಾಗೆ ತನ್ನ ಜತೆ ಕಷ್ಟ ಕಾಲದಲ್ಲಿ ಇದ್ದವರನ್ನು ಮರೆತು ಬೇರೆಯೇ ಲೋಕದಲ್ಲಿ ವಿಹರಿಸುತ್ತಿರುತ್ತಾನೆ. ಅತ್ಯಂತ ಬಲಶಾಲಿ(ಬುದ್ಧಿಯಲ್ಲಿ)ಯಾದವರು ತನ್ನ ಬಲವನ್ನು ಬಲಹೀನರ ಮೇಲೆ ಪ್ರಯೋಗಿಸುತ್ತಾನೆ. ಪ್ರಕೃತಿಯೊಡನೆ ಚೆಲ್ಲಾಟವಾಡಿ ತನಗೂ ತನ್ನ ಮುಂದಿನ ಪೀಳಿಗೆಗೂ ಅಪಾಯ ತಂದೊಡುªವ ಕೆಲಸ ಕಾರ್ಯಗಳಿಗೆ ಕೈ ಹಾಕುತ್ತಾನೆ. ಒಮ್ಮೆ ಯೋಚಿಸಿ ನೋಡಿ ಸಣ್ಣವರಿದ್ದಾಗ ವಿದ್ಯಾರ್ಥಿ ಜೀವನದಲ್ಲಿ ಎಲ್ಲ ವಿಷಯಗಳಲ್ಲದಿದ್ದರೂ ಯಾವುದರ ಲ್ಲಾದರೂ ಸರಿ ತಾನು ಎಲ್ಲರಿಗಿಂತ ಮುಂದಿರಬೇಕೆಂಬ ಹಂಬಲ, ವೃತ್ತಿ ಕ್ಷೇತ್ರಕ್ಕೆ ಬಂದಾಗಲೂ ಅದೇ ತುಡಿತ ಮತ್ತೆ ಸಾಂಸಾರಿಕ ಜೀವನಕ್ಕೆ ಬಂದಾಗಲಂತು ಕೇಳುವುದುಂಟೆ ಮತ್ತದೇ ಪ್ರವೃತ್ತಿ, ನೀವು ಯಾವ ಕ್ಷೇತ್ರವನ್ನಾದರು ಬೇಕಾದರೆ ಆಯ್ಕೆ ಮಾಡಿಕೊಳ್ಳಿ ಅದೇ ಚಾಳಿ ಹಾಂಗೆಂದು ಹಿಂದೆ ಹೋಗುವುದೇ ಇಲ್ಲವೇನೆಂದಿಲ್ಲ.

ವಿದ್ಯಾರ್ಥಿಗಳು ಗಲಾಟೆ ಮಾಡಿಕೋಂಡು ಅಧ್ಯಾಪಕರ ಹತ್ತಿರ ಪೆಟ್ಟು ತಿನ್ನುವಾಗ ಹಿಂದೆಯೆ ಹೋಗುವುದು, ಸಿನೆಮಾ ನೋಡಲು ಹಿಂದೆಯೇ ಕುಳಿತುಕೊಳ್ಳುವುದು, ಯಾರಿಗಾದರು ಸಹಾಯ ಮಾಡ ಬೇಕಾಗಿ ಬಂದಾಗ ಹಿಂದೆಯೇ ಸರಿಯುವುದು, ಯಾವಾಗಲೂ ಹಣ ವಂತರ ಹಿಂದೆ ತಿರುಗು ವುದು ಹೀಗೆ ಹತ್ತು ಹಲವು ಬಗೆಯ ಜೀವಿಗಳನ್ನು ಕಾಣಬಹುದು. ಇರಲಿ ಬಿಡಿ ಮೂಕ ಪ್ರಾಣಿ ಪಕ್ಷಿಗಳ ಲ್ಲಿರುವ ಭಾತೃತ್ವ, ಪ್ರೀತಿ, ಕರುಣೆ ಮಾನವ ಜೀವಿಗಳಲ್ಲಿ ಕ್ಷೀಣಿಸು ತ್ತಿರು ವುದು ಕಂಡುಬರುತ್ತಿದೆ. ಜೀವಿಗಳ ಉಗಮ ಸ್ಥಾನವಾಗಿರುವ, ಗ್ರಹಗಳಲ್ಲಿ ಒಂದಾಗಿರುವ ಭೂಮಂಡಲದಲ್ಲಿನ ಪ್ರಕೃತಿಯ ನಾಶಕ್ಕೆ ಮಾನವನೆಂಬ ಮಹಾನ್‌ ಜೀವಿ ಕಾರಣನಾಗುತ್ತಿದ್ದಾನೆ.ತನ್ನ ಅಗತ್ಯಕ್ಕಿಂತ ಹೆಚ್ಚಿನದನ್ನು ಕೂಡಿಡು ವುದರಲ್ಲೇ ಕಾಲಕಳೆಯುತ್ತ ತನ್ನ ಅಗತ್ಯ ಇರುವಲ್ಲಿ ತನ್ನ ಕರ್ತವ್ಯಗಳನ್ನು ಮರೆತು ಬಿಡುತ್ತಿದ್ದಾನೆ. ತನ್ನ ಬಂಧುಗಳನ್ನು, ತನ್ನ ಇಷ್ಟ ಮಿತ್ರರನ್ನು, ಕಲಿಸಿದ ಗುರುಗಳನ್ನು, ತನ್ನೊಡನೆ ಆಡಿ ಬೆಳೆದವರನ್ನು, ಅಷ್ಟೇ ಯಾಕೆ ತನ್ನನ್ನು ಕಷ್ಟಪಟ್ಟು ಹೆತ್ತು ಹೊತ್ತು ಆಡಿಸಿ ಬೆಳೆಸಿದ ತನ್ನದೇ ತಾಯಿ ತಂದೆಯವರನ್ನು ಕೂಡ ಅವಗಣಿಸಿ ತಾನು ನಡೆದ ಬಂದ ಹಾದಿಯನ್ನು ಮರೆತು ಇನ್ನೇನು ನಾನೆ ಎಲ್ಲ ಎಂದು ಮೈಮರೆಯುವಾಗ ಪ್ರಕೃತಿ ತನ್ನ ಕೆಲಸವನ್ನು ಮಾಡುತ್ತದೆ. ಆ ಕೊನೆ ಕ್ಷಣದಲ್ಲಿ ಮಾನವನಿಗೆ ತನ್ನ ತಪ್ಪಿನ ಅರಿವಾಗಿ ಕಡೆಗೊಮ್ಮೆ ಹಿಂದಿರುಗಿ ನೋಡಿದಾಗ ತನ್ನ ಹಿಂದೆ ಯಾರು ಬರಲಿಲ್ಲವೆಂಬ ಕಟುಸತ್ಯ ತಿಳಿ ಯುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next