ಲಕ್ನೋ : ಬಿಹಾರದ ವಾಂಟೆಡ್ ಗಳು, ಪಾಟ್ನಾದ ಜೈಲಿನಿಂದ ಪರಾರಿಯಾದ ಇಬ್ಬರು ಸಹೋದರನ್ನು ವಾರಾಣಸಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ವಾರಣಾಸಿ ಪೊಲೀಸ್ ಕಮಿಷನರ್ ಎ. ಸತೀಶ್ ಗಣೇಶ್ ಮಾತನಾಡಿ, ಬಡಗಾಂವ್ ಪ್ರದೇಶದಲ್ಲಿ ಸಬ್ ಇನ್ಸ್‌ಪೆಕ್ಟರ್ ಅವರ ಸರ್ವಿಸ್ ಪಿಸ್ತೂಲ್ ಲೂಟಿ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶ ಪೊಲೀಸ್ ತಂಡದ ಕಾರ್ಯಾಚರಣೆ ವೇಳೆ ಎನ್‌ಕೌಂಟರ್ ನಡೆದಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಬಿಹಾರದ ಸಮಸ್ತಿಪುರದ ರಜನೀಶ್ ಅಲಿಯಾಸ್ ಬರುವಾ ಮತ್ತು ಮನೀಶ್ ಎಂದು ಗುರುತಿಸಲಾಗಿದೆ,ಜತೆಯಲ್ಲಿ ಇದ್ದ ಅವರ ಸಹೋದರ ಲಲ್ಲನ್ ಸ್ಥಳದಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾದ ಎಂದು ಅವರು ಹೇಳಿದರು.
ಬಿಹಾರ ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ಮೂವರು ಕುಖ್ಯಾತರಾಗಿದ್ದು, ಇತ್ತೀಚೆಗೆ ಪಾಟ್ನಾ ಜೈಲಿನಿಂದ ಪರಾರಿಯಾಗಿದ್ದರು ಮತ್ತು ಅಲ್ಲಿನ ಪೊಲೀಸರಿಗೆ ಬೇಕಾಗಿದ್ದರು ಎಂದು ಅಧಿಕಾರಿ ಹೇಳಿದರು.
Related Articles
ಘಟನೆ ಕುರಿತು ಆಳವಾದ ತನಿಖೆ ನಡೆಯುತ್ತಿದೆ.