Advertisement

ಆಕ್ಸಿಜನ್ ಕೊಡಲಾಗದವರು ಯೋಗ ಮಾಡಲು ಬಂದಿದ್ದಾರೆ: ಪ್ರಧಾನಿ ಭೇಟಿಗೆ ಸಿದ್ದು ವ್ಯಂಗ್ಯ

03:52 PM Jun 20, 2022 | Team Udayavani |

ಬೆಂಗಳೂರು : ರಾಜ್ಯದಲ್ಲಿ 2019 ಹಾಗೂ2020 ರಲ್ಲಿ ಭಾರಿ ಪ್ರವಾಹ ಬಂದಾಗ ಪ್ರಧಾನಿಯವರು ಇಲ್ಲಿಗೆ ಬರಲಿಲ್ಲ,ನೊಂದ ಜನರಿಗೆ ಸಾಂತ್ವನ ಹೇಳಲಿಲ್ಲ. ಆದರೆ ಈಗ ಅವರಿಗೆ ಕರ್ನಾಟಕದ ನೆನಪಾಗಿದೆ ಎಂದು ಪ್ರಧಾನಿ ಮೋದಿ ರಾಜ್ಯ ಪ್ರವಾಸದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್ ವೇಳೆ ಮೋದಿ ರಾಜ್ಯದ ಜನರಿಗೆ ಆಕ್ಸಿಜನ್ ಕೊಟ್ಟರಾ?ಹೈಕೋರ್ಟ್ ಹೇಳಿದರೂ ಆಕ್ಸಿಜನ್ ಕೊಟ್ಟಿರಲಿಲ್ಲ.ಸುಪ್ರೀಂಕೋರ್ಟ್ ಚಾಟಿಬೀಸಿದ ಮೇಲೆ ಕೊಟ್ಟರು. ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸತ್ತರು.ಚಾಮರಾಜನಗರದಲ್ಲಿ 36 ಜನ ಸಾವನ್ನಪ್ಪಿದರು.ರಾಜ್ಯದ ಬೇರೆಡೆಯೂ ಆಕ್ಸಿಜನ್ ಇಲ್ಲದೆ ಸತ್ತರು .ಇದಕ್ಕೆಲ್ಲ ಯಾರು ಕಾರಣ ?  ಇದೇ ಮೋದಿಯವರು ಎಂದು  ಆರೋಪಿಸಿದರು.

ತೆರಿಗೆ ಪಾಲು ರಾಜ್ಯಕ್ಕೆ ಕಡಿಮೆಯಾಗ್ತಿದೆ.ರಾಜ್ಯವೊಂದೇ 19 ಲಕ್ಷ ಕೋಟಿ ಹಣ ವನ್ನ ಕೊಟ್ಟಿದೆ.ತೆರಿಗೆ ಮೂಲಕ ಕಲೆಕ್ಟ್ ಮಾಡಿದ ಹಣ ನೀಡಿದೆ. ನಮಗೆ 45 ಸಾವಿರ ಕೋಟಿ ರೂ. ತೆರಿಗೆ ಬಾಕಿ ಬರಬೇಕು, ಬಂದಿಲ್ಲ.ಕೇಂದ್ರ ಹಣಕಾಸು ಸಚಿವರು ನಮ್ಮ ರಾಜ್ಯದವರೇ.15 ಪೇ ಕಮಿಷನ್ ಹಣ ವನ್ನೂ ನೀಡಲಿಲ್ಲ.ರಾಜ್ಯಕ್ಕೆ ಬರುವ ಶೇ 1.07 ಹಣ ಕಡಿಮೆಯಾಯಿತು ಎಂದು ಆಪಾದಿಸಿದರು.

ಆಕ್ಸಿಜನ್ ಕೊಡುವುದಕ್ಕೆ ಆಗದವರು ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ.ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಹೇಳಬೇಕು.40 % ಕಮಿಷನ್ ಬಗ್ಗೆ ದೂರು ಕೊಟ್ಟರು ಯಾಕೆ‌ ಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ ?ಸಬರ್ಬನ್ ಯೋಜನೆ ಹೇಳುತ್ತಲೇ ಬರುತ್ತಿದ್ದಾರೆ.ಅನಂತ್ ಕುಮಾರ್ ಕಾಲದಿಂದ ಹೇಳುತ್ತಿದ್ದಾರೆ. ಆದರೆ ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರ ಸರ್ಕಾರ ಕರ್ನಾಟಕದಲ್ಲಿದ್ದು, ಲೂಟಿ ಹೊಡೆಯುತ್ತಿದೆ,ಭ್ರಷ್ಟಾಚಾರ ಹೆಚ್ಚಾಗಿದೆ.ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ? ಈ ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next