Advertisement

LTC ಕ್ಯಾಶ್ ವೋಚರ್ ಸ್ಕೀಮ್ ಪ್ರಯೋಜನವನ್ನು ಪಡೆಯಲು ಯಾರು ಅರ್ಹರು..? ಇಲ್ಲಿದೆ ಮಾಹಿತಿ

10:21 AM Mar 22, 2021 | Team Udayavani |

ನವ ದೆಹಲಿ : ಪ್ರಯಾಣ ವೆಚ್ಚಗಳಿಗೆ ಬದಲಾಗಿ ಖರೀದಿಸಿದ ಅಥವಾ ಪಡೆದ ಸರಕು ಮತ್ತು ಸೇವೆಗಳ ಬಿಲ್ ಗಳ ವಿರುದ್ಧ ತೆರಿಗೆ ಲಾಭ ಪಡೆಯಲು ಉದ್ಯೋಗಿಗಳಿಗೆ ಅವಕಾಶ ನೀಡುವ ಮೂಲಕ ಬಳಕೆಯನ್ನು ಹೆಚ್ಚಿಸಲು ಸರ್ಕಾರವು ಅಕ್ಟೋಬರ್ ನಲ್ಲಿ ರಜೆ ಪ್ರಯಾಣ ರಿಯಾಯಿತಿ(Leave Travel Concession (LTC)) ಕ್ಯಾಶ್ ವೋಚರ್  ಸ್ಕೀಮ್ ಅಥವಾ ಯೋಜನೆಯನ್ನು ಘೋಷಿಸಿದೆ.

Advertisement

31 ಮಾರ್ಚ್ 2021 ರೊಳಗಾಗಿ ಈ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದರೆ ಯಾರು ಲಾಭವನ್ನು ಪಡೆಯಬಹುದು ಎಂಬುದಕ್ಕೆ ಷರತ್ತುಗಳಿವೆ.

ಓದಿ : ಜಾತ್ರೆಯಿಂದ ಬರುತ್ತಿದ್ದವನಿಗೆ ಎದುರಾಯಿತು ಮೃತ್ಯು: ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು

ನೀವು ಯೋಜನೆಗೆ ಅರ್ಹರಾಗಿದ್ದೀರಾ ಎಂದು ಗಮನಿಸೋಣ :

ಹೊಸ ತೆರಿಗೆ ಕಾನೂನು ಅಥವಾ ವ್ಯವಸ್ತೆಯನ್ನು ಆರಿಸಿಕೊಂಡ ಉದ್ಯೋಗಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ,

Advertisement

ಪ್ರತಿ ತೆರಿಗೆದಾರರು ನಾಲ್ಕು ವರ್ಷಗಳ ಬ್ಲಾಕ್‌ ನಲ್ಲಿ ಎರಡು ಪ್ರಯಾಣಗಳಿಗೆ ರಜೆ ಪ್ರಯಾಣ ಭತ್ಯೆ (ಎಲ್‌ಟಿಎ) ವಿನಾಯಿತಿ ಪಡೆಯಬಹುದಾಗಿದೆ.

ಈ ಯೋಜನೆಯನ್ನು ಆರಂಭದಲ್ಲಿ ಸರ್ಕಾರಿ ನೌಕರರಿಗಾಗಿ/ ಉದ್ಯೋಗಿಗಳಿಗಾಗಿ ಮಾತ್ರ ಪ್ರಾರಂಭಿಸಲಾಯಿತು ಆದರೆ ನಂತರ ಅದನ್ನು ಖಾಸಗಿ ವಲಯದ ಉದ್ಯೋಗಿಗಳಿಗೂ ವಿಸ್ತರಿಸಲಾಯಿತು. ಈ ಯೋಜನೆಯಡಿ ಲಾಭ ಪಡೆಯಲು, ನೌಕರರು ಅಕ್ಟೋಬರ್ 12 ಮತ್ತು ಮಾರ್ಚ್ 31 ರ ನಡುವೆ ಮಾಡಿದ ಖರೀದಿಗಳಿಗೆ ಬಿಲ್‌ ಗಳನ್ನು ಸಲ್ಲಿಸಬೇಕಾಗುತ್ತದೆ.

ಓದಿ : ‘ಕಣ್ಣು ಹೊಡೆಯಾಕ ಹಾಡು’ 2 ಕೋಟಿ ವೀಕ್ಷಣೆ: ಶ್ರೇಯಾ ಘೋಷಾಲ್‌ ಫುಲ್ ಖುಷ್‌

Advertisement

Udayavani is now on Telegram. Click here to join our channel and stay updated with the latest news.

Next