Advertisement

“ಬಿಳಿಯರ ಪ್ರಾಬಲ್ಯವು ಅಕ್ಷರಶಃ ನಮ್ಮನ್ನು ಕೊಲ್ಲುತ್ತಿದೆ” : ಸ್ಟೆಫನಿ ಚೋ ಆಕ್ರೋಶ

12:27 PM Mar 18, 2021 | Team Udayavani |

ಅಟ್ಲಾಂಟಾ /ಅಮೆರಿಕಾ  : ಅಟ್ಲಾಂಟಾ ಪ್ರದೇಶದಲ್ಲಿ ಸ್ಪಾಗಳ ಮೇಲೆ ಬಂದೂಕುಧಾರಿ ನಡೆಸಿದ ದಾಳಿಯ ಕಾರಣದಿಂದು ಎಂಟು ಮಂದಿ ಸಾವನ್ನಪ್ಪಿದ ಘಟನೆಯ ಹಿನ್ನಲೆಯಲ್ಲಿ, ನಟಿ, ನಿರ್ಮಾಪಕಿ ಸ್ಟೆಫನಿ ಚೋ ಆತಂಕ ಮತ್ತು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

Advertisement

ಇದು ಜನಾಂಗೀಯ ದ್ವೇಷದ ಕಾರಣದಿಂದ ನಡೆದ ಘಟನೆ. ಈ ದಾಲಿಯಿಂದ ಮೃತ ಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರಿದ್ದಾರೆ. ಏಷ್ಯನ್ ಅಮೇರಿಕನ್ ಅವರ ಮೇಲೆ ನಿರಂತರವಾಗಿ ಈ ರೀತಿಯ ದಾಳಿ ನಡೆಯುತ್ತಿದೆ ಇದು ಖಂಡನೀಯ ಎಂದು ಅವರು ಆರೋಪಿಸಿದ್ದಾರೆ

ನಡೆದ ಮೂರು ಗುಂಡಿನ ದಾಳಿಗಳಿಗೆ ಸಂಬಂಧಿಸಿದಂತೆ 21 ವರ್ಷದ ಶ್ವೇತವರ್ಣೀಯ ಶಂಕಿತ ರಾಬರ್ಟ್ ಆರನ್ ಲಾಂಗ್ ಜನಾಂಗೀಯ ದ್ವೇಷದ ಉದ್ದೇಶವಲ್ಲವೆಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ :  ಶಿವಮೊಗ್ಗ ಚಲೋ ಹಿಂದೆ ‘ಕೆಪಿಸಿಸಿ ಅಘೋಷಿತ ಅಧ್ಯಕ್ಷೆ ಮಹಾನಾಯಕಿ’ಯ ಕೈವಾಡ: ಬಿಜೆಪಿ

ಆದರೇ, ಏಷ್ಯನ್ ಅಮೇರಿಕನ್ ಅಡ್ವಾನ್ಸಿಂಗ್ ಜಸ್ಟೀಸ್ ಅಟ್ಲಂಟಾದ ಕಾರ್ಯಕಾರಿ ನಿರ್ದೇಶಕಿ ಸ್ಟೆಫನಿ ಚೋ ಅದನ್ನು ನಿರಾಕರಿಸಿದ್ದಾರೆ.

Advertisement

ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಏಷ್ಯನ್-ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಹಿಂಸಾಚಾರದ ಹೆಚ್ಚಾಳವಾಗುತ್ತಿರುವ ನಡುವೆ “ಬಿಳಿಯರ ಪ್ರಾಬಲ್ಯವು ಅಕ್ಷರಶಃ ನಮ್ಮನ್ನು ಕೊಲ್ಲುತ್ತಿದೆ” ಎಂದು ಅವರು ಹೇಳಿದ್ದಾರೆ.

“ಹಲವು ವರ್ಷಗಳಿಂದ ಏಷ್ಯಾದ ಸಮುದಾಯಗಳ ವಿರುದ್ಧ ಹಿಂಸಾಚಾರವು ಅಪಾಯದ ಅಡಿಯಲ್ಲಿದೆ. ಗುಂಡಿನ ದಾಲಿಯಿಂದ ಆದ ನೋವು ಇದ್ದರೂ ಸಹ,  ಮೌನ ತಾಳಿದ್ದೇವೆ ಎಂದು ಚೋ ಹೇಳಿದ್ದಾರೆ.

‘ಏಷ್ಯನ್ ಅಮೆರಿಕನ್ನರ ವಿರುದ್ಧ ದ್ವೇಷದ ಕೃತ್ಯ’

ಗೋಲ್ಡ್ ಮತ್ತು ಅರೋಮಾಥೆರಪಿ ಸ್ಪಾಗಳ ಸಮೀಪವಿರುವ ಮಂಗಳವಾರ ರಾತ್ರಿ ಸಂಭವಿಸಿದ ಹಿಂಸಾಚಾರವನ್ನು ನೋಡಿಲ್ಲ. ಆ ಬಗ್ಗೆ ಏನೂ ಮಾಹಿತಿ ಇಲ್ಲ ಎಂದು ಸ್ಟುಡಿಯೋ 219 ಇಂಕ್ ಟ್ಯಾಟೂ ಶಾಪ್ ನ ವ್ಯವಸ್ಥಾಪಕ ಆಂಥೋನಿ ಸ್ಮಿತ್ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎಫ್ ಪಿ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಶಂಕಿತ ಲಾಂಗ್, ಲೈಂಗಿಕ ಚಟವನ್ನು ಹೊಂದಿದವನಾಗಿದ್ದು, ಲೈಂಗಿಕ ತೃಷೆ ತಿರಿಸಿಕೊಳ್ಳಲು ಬಯಸಿದ್ದ. ಆದರೆ ದಾಳಿಗಳು ಜನಾಂಗೀಯ ದ್ವೇಷ ಅಲ್ಲ ಎಂದು ನಿರಾಕರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸೊಂಕಿನ ಆರಂಭದಿಂದಲೂ ಏಷ್ಯನ್ ಅಮೆರಿಕನ್ನರ ವಿರುದ್ಧದ ದಾಳಿಗಳು ಮತ್ತು ದ್ವೇಷದ ಕೃತ್ಯಗಳು ಹೆಚ್ಚಳವಾಗುತ್ತಿವೆ ಎಂದು ಉಗ್ರ ವಿರೋಧಿ ಗುಂಪುಗಳು ಅಭಿಪ್ರಾಯ ಪಟ್ಟಿವೆ.

ಕೋವಿಡ್ 19 ನನ್ನು “ಚೀನಾ ವೈರಸ್” ಎಂದು ಪದೇ ಪದೇ ಉಲ್ಲೇಖಿಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೂ ಘಟನಾ ಸಂಬಂಧಿಸಿದ ಕೆಲವು ಆಪಾದನೆಗಳನ್ನು ಪ್ರತಿಭಟನಾಕಾರರು ಹಾಕಿದ್ದಾರೆ ಎಂದು ವರದಿಯಾಗಿದೆ.

ಸ್ಮೂಥಿ ಬಾರ್ ನಲ್ಲಿ ಕೆಲಸ ಮಾಡುತ್ತಿರುವ ತನ್ನ ಹೆಸರನ್ನು ಪುರ್ಣವಾಗಿ ಹೇಳಲು ಇಚ್ಚಿಸದ ಚಿನೀ ಮೂಲದ ಸ್ಯಾಮ್, ಇದು ಅತ್ಯಂತ ಅಪಾಯಕಾರಿ ಹಾಗೂ ಭಯಾನಕವಾಗಿದೆ ಎಂದು ಅ ಎಫ್ ಪಿ ಗೆ ತಿಳಿಸಿದ್ದಾರೆ.

ಓದಿ : ಬೆಳಗಾವಿ ಉಪಚುನಾವಣೆ: ಹೈಕಮಾಂಡ್ ಹೇಳಿದರೆ ಸ್ಪರ್ಧೆಗೆ ಸಿದ್ದ ಎಂದ ಸತೀಶ್ ಜಾರಕಿಹೊಳಿ

“ಮೊದಲು ನನಗೆ ಈ ಬಗ್ಗೆ ಅಷ್ಟು ಗೊತ್ತಿರಲಿಲ್ಲ, ನನ್ನ ಮೇಲೆ ಅಷ್ಟಾಗಿ ಈ ವಿಚಾರ ಪರಿಣಾಮ ಬಿದ್ದಿರಲಿಲ್ಲ. ಆದರೆ ಈಗ ಅವರು ಏಷ್ಯನ್ನರನ್ನು ಗುರಿಯಾಗಿಸಿಕೊಂಡಿದ್ದಾರೆ, ಇದು ನಿಜಕ್ಕೂ ಭಯಾನಕವಾಗಿದೆ” “ನಾವು ಆತ್ಮರಕ್ಷಣೆಗಾಗಿ ಭದ್ರತಾ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಸ್ಯಾಮ್ ಹೇಳಿಕೊಂಡಿದ್ದಾರೆ.

ಏಷ್ಯಾದ ಮೂಲದ ಜಾರ್ಜಿಯಾ ನಿವಾಸಿಗಳು ಅಮೆರಿಕಾದ ಜನಸಂಖ್ಯೆಯ ಸುಮಾರು 4.1 ಪ್ರತಿಶತದಷ್ಟಿದ್ದು, ಅವರಲ್ಲಿ ಹೆಚ್ಚಿನವರು ಕೊರಿಯನ್ ಅಥವಾ ಕೊರಿಯನ್ ಮೂಲದವರಾಗಿದ್ದಾರೆ.

ಮೆಟ್ರೋ ಅಟ್ಲಾಂಟಾದ ಸ್ಪಾ ಮೇಲೆ ನಡೆದ ದಾಳಿಯಲ್ಲಿ ಜನಾಂಗೀಯ ದ್ವೇಷ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. “ಇದು ಏಷ್ಯನ್ ಅಮೆರಿಕನ್ನರ ವಿರುದ್ಧದ ದ್ವೇಷದ ಕೃತ್ಯ”. ಅಧಿಕಾರಿಗಳು ಕೂಡ ಕಡಿಮೆ ವೇತನಕ್ಕಾಗಿ ಕೆಲಸ ಮಾಡುವ ಮಹಿಳೆಯರನ್ನು ಗುರಿಯಾಗಿಸುವ ಮತ್ತು ಹೆಚ್ಚಾಗಿ ಇಂಗ್ಲಿಷ್ ಮಾತನಾಡದ ಮಹಿಳೆಯರನ್ನು ಗುರಿಯಾಗಿಸುವುದನ್ನು ಅವರು ಟೀಕಿಸಿದ್ದಾರೆ.

“ನಮ್ಮ ಸಮುದಾಯವನ್ನು ರಕ್ಷಿಸುವ ಹಕ್ಕು ನಮಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಪ್ರಯತ್ನವನ್ನು ಮಾಡಿದರೆ ಮಾಡಿದರೆ ಅವರು ರಕ್ಷಿಸುತ್ತಾರೆ” ಎಂದು ಕೊರಿಯಾದ ಅಮೆರಿಕನ್ ಒಕ್ಕೂಟದ ಅಧ್ಯಕ್ಷೆ ಸಾರಾ ಪಾರ್ಕ್‌ ಹೇಳಿದ್ದಾರೆ.

ಓದಿ :  OYO ಭಾರತದ ವ್ಯವಹಾರವು ಈಗ EBITDA ಸಕಾರಾತ್ಮಕವಾಗಿದೆ : ರಿತೇಶ್ ಅಗರ್ವಾಲ್

Advertisement

Udayavani is now on Telegram. Click here to join our channel and stay updated with the latest news.

Next