Advertisement

ಈ ಮಗುವಿನ ದೇಹದಲ್ಲಿರುವುದು ಬಿಳಿ ರಕ್ತ…ಸ್ಯಾಂಪಲ್‌ ಕಂಡ ವೈದ್ಯರು ಶಾಕ್‌…

02:53 PM Sep 17, 2022 | Team Udayavani |

ಮಧ್ಯಪ್ರದೇಶ: ಶೀತ, ಕೆಮ್ಮು ಜ್ವರದಿಂದ ಬಳಲುತ್ತಿದ್ದ ಮಗುವೊಂದನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ವೈದ್ಯರು ರಕ್ತ ಪರೀಕ್ಷೆ ನಡೆಸಲು ಹೇಳಿದ್ದು, ಮಗುವಿನ ರಕ್ತದ ಸ್ಯಾಂಪಲ್‌ ತೆಗೆದಾಗ ವೈದ್ಯರು ದಂಗಾಗಿದ್ದಾರೆ.

Advertisement

ಇದನ್ನೂ ಓದಿ:ಸೋನಾಲಿ ಫೋಗಟ್ ಸಾವಿನ ಸಿಬಿಐ ತನಿಖೆ : ಹೋಟೆಲ್‌ ಕೊಠಡಿಗಳ ಶೋಧ

ಮಧ್ಯಪ್ರದೇಶದ ವರ್ವಾನಿ ಜಿಲ್ಲೆಯಲ್ಲಿ ಆನಾರೋಗ್ಯದಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಅನಾಯಾಳನ್ನುಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ರಕ್ತ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ವಿಚಿತ್ರ ಪ್ರಕರಣವೋಂದು ಬೆಳಕಿಗೆ ಬಂದಿದ್ದು, ಮಗುವಿನ ರಕ್ತನಾಳಗಳಲ್ಲಿ ಕೆಂಪು ರಕ್ತದ ಬದಲು ಬಿಳಿ ರಕ್ತ ಹರಿಯುತ್ತಿತ್ತು.

ಅನಾಯಾಳನ್ನು ಚಿಕಿತ್ಸೆಗೆಂದು ಮಹಾರಾಷ್ಟ್ರದ ಶಹದಾಗೆ ಕರೆದುಕೊಂಡು ಹೋಗಿದ್ದರು, ಆ ವೇಳೆ ಲ್ಯಾಬ್ ಪರೀಕ್ಷೆಗೆ ಎಂದು ತೆಗೆದ ರಕ್ತ ಬಿಳಿಯಾಗಿತ್ತು. ಬಿಳಿ ಬಣ್ಣದ ರಕ್ತವನ್ನು ಪರೀಕ್ಷಿಸಿದ ಲ್ಯಾಬ್ ತಂತ್ರಜ್ಞರೂ ಆಶ್ಚರ್ಯಚಕಿತರಾದರು. ಈವರೆಗೂ ಅಂತಹ ರಕ್ತದ ಮಾದರಿಯನ್ನು ನೋಡದಿರುವುದೂ ಈ ಅಚ್ಚರಿಗೆ ಕಾರಣವಾಗಿತ್ತು ಎಂದು ತಿಳಿಸಿದ್ದಾರೆ.

ಅಲ್ಲಿಂದ ಅನಾಯಾಳನ್ನು ಮಹಾರಾಷ್ಟ್ರದ ಧುಲಿಯಾಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಅಲ್ಲಿ ಕೂಡ ರಕ್ತ ಪರೀಕ್ಷೆ ನಡೆಸಿದ ವೇಳೆ ಬಿಳಿ ರಕ್ತ ಪತ್ತೆಯಾಗಿದೆ. ಬಳಿಕ ಅಲ್ಲಿನ ವೈದ್ಯರು ಚಿಕಿತ್ಸೆಗಾಗಿ ಮುಂಬೈನ ಕೆಇಎಂ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ ಎಂದು ಮಗುವಿನ ತಂದೆ ಇಮ್ರಾನ್ ಹೇಳಿದ್ದಾರೆ.

Advertisement

ಮುಂಬೈನ ಕೆಇಎಂ ಆಸ್ಪತ್ರೆ ತಲುಪಿದ ಇಮ್ರಾನ್, ಮಗಳ ರಕ್ತದ ಮಾದರಿಯನ್ನು ನೀಡಿದ್ದಾರೆ. ಇದನ್ನು ಗಮನಿಸಿದ ಆಸ್ಪತ್ರೆ ವೈದ್ಯಾಧಿಕಾರಿಗಳು ರಕ್ತವನ್ನು ಮುಂಬೈನಿಂದ ಯುಕೆಗೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ದುರಾದೃಷ್ಟವಶಾತ್ ಸರಿಯಾದ ಸಮಯಕ್ಕೆ ಮಾದರಿ ತಲುಪದ ಕಾರಣ ಅದನ್ನು ತಿರಸ್ಕರಿಸಲಾಗಿದೆ.

ಮುಂಬೈನಲ್ಲಿ ನಡೆಸಿದ ರಕ್ತ ಪರೀಕ್ಷೆಯ ವರದಿ ನೋಡಿದಾಗ ಮಗುವಿನ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಇದರ ಜೊತೆಗೆ ಹಿಮೋಗ್ಲೋಬಿನ್ ಅಧಿಕ ಪ್ರಮಾಣದಲ್ಲಿ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next