Advertisement

ಬಿಜೆಪಿ ಶಾಸಕರಿಗೆ ವಿಪ್‌ ಜಾರಿ ! ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೆಲ್ಲಿಸಲು ಪಣ

09:57 AM Feb 18, 2020 | sudhir |

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಿಗೆ ವಿಪ್‌ ಜಾರಿ ಮಾಡಲಾಗಿದೆ. ಸೋಮವಾರ ಬೆಳಗ್ಗೆ ಮತದಾನ ಮಾಡಿ, ಬಳಿಕ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಸೂಚನೆ ನೀಡಲಾಗಿದೆ.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ರವಿವಾರ ರಾತ್ರಿ ನಡೆದ ಸಭೆಯಲ್ಲಿ ಸಿಎಂ ಬಿಎಸ್‌ವೈ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಶಾಸಕರಿಗೆ ನಿರ್ದಿಷ್ಟ ಸೂಚನೆ ನೀಡಿದರು. ಮುಖ್ಯವಾಗಿ, ಪರಿಷತ್‌ ಸ್ಥಾನಕ್ಕೆ ಸ್ಪರ್ಧಿಸಿ ರುವ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಗೆಲ್ಲಿಸಬೇಕಿದ್ದು, ಎಲ್ಲರೂ ಬೆಳಗ್ಗೆಯೇ ಮತದಾನ ಮಾಡಿ ಬಳಿಕ ಅಧಿವೇಶನಕ್ಕೆ ಹಾಜರಾಗಬೇಕು ಎಂದಿದ್ದಾರೆ.

ಸದಸ್ಯರೆಲ್ಲ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕು. ನೂತನ ಸಚಿವರು ತಮ್ಮ ಇಲಾಖೆಗೆ ಸಂಬಂಧಪಟ್ಟ ಅಂಕಿ ಸಂಖ್ಯೆಗಳೊಂದಿಗೆ ಸಜ್ಜಾಗಿ ಬರಬೇಕು. ವಿಪಕ್ಷ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕು. ಶಾಸಕರು ದನಿಗೂಡಿಸಬೇಕು. ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಲು, ಪ್ರತಿರೋಧ ತೋರಲು ವಿಪಕ್ಷಗಳು ಮುಂದಾದರೆ ತಿರುಗೇಟು ನೀಡಬೇಕು ಎಂದು ಹಿರಿಯ ನಾಯಕರು ಸೂಚಿಸಿದ್ದಾರೆ. ಶಾಸಕಾಂಗ ಸಭೆಯಲ್ಲಿ ನೂತನ ಸಚಿವರ ಸಹಿತ 98 ಶಾಸಕರು ಪಾಲ್ಗೊಂಡಿದ್ದರು. ಕೆಲವರು ಪೂರ್ವಾನುಮತಿ ಪಡೆದು ಗೈರಾಗಿದ್ದರು ಎನ್ನಲಾಗಿದೆ.

ಮತ ಹಾಕಿ ಅಧಿವೇಶನಕ್ಕೆ ಬನ್ನಿ
ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ವಿಪ್‌ ಜಾರಿ ಮಾಡಲಾಗಿದೆ. ಬೆಳಗ್ಗೆಯೇ ಮತದಾನ ಮಾಡಿ ಬಳಿಕ ಸದನಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ವಿಧಾನ ಸಭೆ ಮುಖ್ಯ ಸಚೇತಕ ವಿ. ಸುನೀಲ್‌ ಕುಮಾರ್‌ ತಿಳಿಸಿದರು.

“ಬಜೆಟ್‌ಗೆ ಸಲಹೆ ಕೊಡಿ’
ಮಾ. 5ರಂದು ಬಜೆಟ್‌ ಮಂಡನೆಯಾಗಲಿದ್ದು, ಈ ಜನಪರ ಬಜೆಟ್‌ಗೆ ಸೂಕ್ತ ಸಲಹೆ ನೀಡುವಂತೆ ಶಾಸಕರಿಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next