Advertisement

ಮೊಮ್ಮಕ್ಕಳನ್ನು ಸಾಹಿತಿ ಚಂಪಾ ಯಾವ ಶಾಲೆಗೆ ಕಳುಹಿಸುತ್ತಿದ್ದಾರೆ?

01:05 AM Jan 06, 2019 | Team Udayavani |

ಹುಬ್ಬಳ್ಳಿ: ಸಾಹಿತಿ ಚಂದ್ರಶೇಖರ ಪಾಟೀಲ ಅವರು ತಮ್ಮ ಮೊಮ್ಮಕ್ಕಳನ್ನು ಯಾವ ಶಾಲೆಗೆ ಕಳುಹಿಸುತ್ತಿದ್ದಾರೆಂಬುದನ್ನು ಜನರ ಮುಂದಿಡಲಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಏನು ಮಾತನಾಡಬೇಕೆಂದು ಅವರು ಅರಿತುಕೊಳ್ಳಲಿ. ಹಗುರವಾಗಿ ಮಾತನಾಡುವುದು, ಅನಗತ್ಯ ಪದ ಬಳಕೆ ಮಾಡುವುದರಲ್ಲಿ ಮಿತಿ ಮೀರಬಾರದು. ಅವರಿಗಿಂತಲೂ ಹೆಚ್ಚಿನ ಪದ ಬಳಸಲು ನನಗೂ ಬರುತ್ತದೆ. ಆದರೆ ಯಾರನ್ನೂ ಮುಜುಗರಕ್ಕೀಡು ಮಾಡಬಾರದೆನ್ನುವ ಕಾರಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಂಗ್ಲ ಮಾಧ್ಯಮ ಭಾಷೆ ಜಾರಿ ವಿಚಾರದಲ್ಲಿ ಅವರು ಚರ್ಚೆಗೆ ಬರಲಿ. ಯಾರನ್ನೂ ಹೊರಗಿಟ್ಟು ಸಭೆ ಮಾಡುತ್ತಿಲ್ಲ ಎಂದು ಸಿಎಂ ಹೇಳಿದರು.

ರಾಜ್ಯದಲ್ಲಿ ಕನ್ನಡ ಉಳಿಸಿ, ಬೆಳೆಸುವ ಹಾಗೂ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗದ ರೀತಿ ಸರಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ವಿಚಾರದಲ್ಲಿ ನಾನು ಮುಕ್ತ ಚರ್ಚೆಗೆ ಸಿದ್ಧನಿದ್ದೇನೆ. ಕನ್ನಡ ಭಾಷೆ ಉಳಿಸಬೇಕೆಂಬ ಕೂಗು ಎಬ್ಬಿಸಿಕೊಂಡು ಕೆಲವರು ಓಡಾಡುತ್ತಿರುವುದು ಸರಿಯಲ್ಲ. ನಮ್ಮ ಭಾಷೆ, ಕನ್ನಡ ಶಾಲೆಗಳಿಗೆ ಯಾವುದೇ ಧಕ್ಕೆಯಾಗಬಾರದೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next