Advertisement
ಸಾಮಾನ್ಯವಾಗಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಮೊಬೈಲ್ ಅಥವಾ ಇನ್ನಿತರ ಗ್ಯಾಜೆಟ್‌ಗಳನ್ನು ಕೊಳ್ಳಬೇಕಾದಾಗ ಅನೇಕರಿಗೆ ಯಾವ ಆನ್‌ಲೈನ್ ಸ್ಟೋರ್ ಸೂಕ್ತ? ಎಂಬ ಪ್ರಶ್ನೆ ಏಳದೇ ಇರದು. ಅಮೆಜಾನ್, ಫ್ಲಿಪ್‌ಕಾರ್ಟ್, ಪೇ ಟಿಎಂ, ಟಾಟಾ ಕ್ಲಿಕ್, ಸ್ನಾಪ್‌ಡೀಲ್ ಅಲ್ಲದೇ ಆಯಾ ಮೊಬೈಲ್ ಕಂಪೆನಿಗಳ ಪ್ರತ್ಯೇಕ ಆನ್‌ಲೈನ್ ಸ್ಟೋರ್‌ಗಳೂ ಇವೆ. ಉದಾಹರಣೆಗೆ ಶಿಯೋಮಿ ಉತ್ಪನ್ನಗಳ ಮಾರಾಟಕ್ಕೆ ಮಿ.ಸ್ಟೋರ್ ಇದೆ.
Related Articles
Advertisement
ಅಮೆಜಾನ್ ಚಾಮರಾಜನಗರದಂಥ ಮಧ್ಯಮ ಪಟ್ಟಣಗಳಿಗೂ ತನ್ನ ಸ್ವಂತ ಕೊರಿಯರ್ (ಅಮೆಜಾನ್ ಟ್ರಾನ್ಸ್‌ಪೊàರ್ಟ್ ಸರ್ವೀಸ್) ವ್ಯವಸ್ಥೆ ಹೊಂದಿದೆ. ಹೀಗಾಗಿ ಬೇಗ ಗ್ರಾಹಕರಿಗೆ ತಲುಪುತ್ತವೆ. ನಾವು ಖರೀದಿಸಿದ ವಸ್ತುವೇನಾದರೂ ಅಮೆಜಾನ್‌ನ ಬೆಂಗಳೂರು ಗೋದಾಮಿನಲ್ಲಿದ್ದರೆ, ಚಾಮರಾಜನಗರದಂಥ ಊರಿನಿಂದ ಇಂದು ಬುಕ್ ಮಾಡಿದರೆ ನಾಳೆಗೆ ತಪ್ಪಿದರೆ ನಾಡಿದ್ದು ತಲುಪುತ್ತದೆ! ಮೊಬೈಲ್‌ಗಳಂಥ ಬೆಲೆ ಬಾಳುವ ವಸ್ತುಗಳಿಗೆ ಸೆಕ್ಯೂರ್ ಪ್ಯಾಕ್ ವ್ಯವಸ್ಥೆ ಇರುತ್ತದೆ.
ಸಾಮಾನ್ಯವಾಗಿ ಗ್ಯಾಜೆಟ್‌ಗಳನ್ನು ಕೊಂಡ ಬಳಿಕ ಅವುಗಳಲ್ಲಿ ದೋಷವಿದ್ದರೆ ಅದನ್ನು ಬದಲಾಯಿಸುವ (ಎಕ್ಸ್‌ಚೇಂಜ್) ಅಥವಾ ಹಿಂದಿರುಗಿಸುವ (ರಿಟರ್ನ್) ಸೌಲಭ್ಯವನ್ನು ಎಲ್ಲ ಆನ್‌ಲೈನ್ ಸ್ಟೋರ್‌ಗಳೂ ಕಲ್ಪಿಸಿವೆ. ಆ ಸೌಲಭ್ಯ ಎಲ್ಲಕ್ಕಿಂತ ಅಮೆಜಾನ್‌ನಲ್ಲಿ ಚೆನ್ನಾಗಿದೆ. ಗ್ಯಾಜೆಟ್‌ಗಳಲ್ಲಿ ದೋಷವಿದ್ದರೆ ಡೆಲಿವರಿ ತೆಗೆದುಕೊಂಡ 10 ದಿನಗಳ ಒಳಗೆ ಬದಲಾಯಿಸಿಕೊಡಲು ಅಮೆಜಾನ್‌ನಲ್ಲಿ ಕಣಿ ಮಾಡುವುದಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಕಣಿ ಜಾಸ್ತಿ! ಕೆಲವೊಂದು ಗ್ಯಾಜೆಟ್‌ಗಳಿಗೆ ಅಮೆಜಾನ್‌ನಲ್ಲಿ ಎಕ್ಸ್‌ಚೇಂಜ್ ಬೇಡವಂದರೆ ಪೂರ್ಣ ಹಣವನ್ನೇ ಗ್ರಾಹಕರ ವಾಲೆಟ್‌ಗೆ ಅಥವಾ ಬ್ಯಾಂಕ್ ಖಾತೆಗೆ ಅತಿಶೀಘ್ರ ಹಾಕಲಾಗುತ್ತದೆ. ಕೌÉಡ್‌ಟೇಲ್, ಅಪಾರಿಯೋ ರಿಟೇಲ್ ಇವೆಲ್ಲ ಅಮೆಜಾನ್‌ನ ಪಾಲುದಾರಿಕೆಯುಳ್ಳ ಸೆಲ್ಲರ್‌ಗಳಾಗಿದ್ದು ಅತ್ಯಂತ ಕಡಿಮೆ ದರ, ಅತಿ ಶೀಘ್ರ ಡೆಲಿವರಿ, ನೆಪ ಹೇಳದೇ ಬದಲಿಸಿಕೊಡುವ, ಹಣ ರಿಟರ್ನ್ ಮಾಡುವ ಮೂಲಕ ಉತ್ತಮ ಸೇವೆ ನೀಡುತ್ತಿವೆ.
ಮುಂಚೆ ಅಮೆಜಾನ್‌ನಲ್ಲಿ ಚಾಮರಾಜನಗರದಂಥ ಊರುಗಳಿಗೆ ಕೊರಿಯರ್ ಬಾಯ್‌ಗಳೇ ಬಂದು, ರಿಟರ್ನ್ ಮಾಡಿದ ವಸ್ತುಗಳನ್ನು ತೆಗೆದುಕೊಂಡು ಹೋಗುವ ಸೌಲಭ್ಯ ಇರಲಿಲ್ಲ. ಗ್ರಾಹಕರು ರಿಟರ್ನ್ ಮಾಡಬೇಕಾದರೆ ತಾವೇ ಕೊರಿಯರ್ ಮಾಡಬೇಕಾಗುತ್ತಿತ್ತು. ಅದರ ವೆಚ್ಚವನ್ನು ಆನಂತರ ಅಮೆಜಾನ್ ಭರಿಸುತ್ತಿತ್ತು. ಆದರೆ ಈಗ ಅಮೆಜಾನ್‌ನವರದೇ ಕೊರಿಯರ್ ಇರುವುದರಿಂದ ಅವರೇ ಮನೆಬಾಗಿಲಿಗೆ ಬಂದು ನಾವು ಬದಲಿಸಬೇಕಾದ ಅಥವಾ ಹಿಂದಿರುಗಿಸಿದ ವಸ್ತುಗಳನ್ನು ಕೊಂಡೊಯ್ಯುತ್ತಾರೆ. ನಾವು ಪ್ಯಾಕಿಂಗ್ ಕೂಡ ಮಾಡಬೇಕಾಗಿಲ್ಲ.
ಅಮೆಜಾನ್‌ನಲ್ಲಿ ನನಗೆ ಇಷ್ಟವಾಗುವ ಇನ್ನೊಂದು ವಿಷಯವೆಂದರೆ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುವ ಸೌಲಭ್ಯ. ಅಮೆಜಾನ್ ಮೂಲತಃ ಅಮೆರಿಕಾ ಕಂಪೆನಿ. ಗ್ರಾಹಕರ ಅನುಕೂÇಕ್ಕಾಗಿ ಸ್ಥಳೀಯ ಭಾಷೆಗಳಲ್ಲೂ ಕಸ್ಟಮರ್ ಕೇರ್‌ನಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿ ಹೊಂದಿದೆ. ನಾವು ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಮಾತನಾಡಬಹುದು. ನಾವು ತರಿಸಿದ ಪದಾರ್ಥಗಳ ಹಿಂದಿರುಗಿಸುವಿಕೆ, ಬದಲಾಯಿಸುವಿಕೆ ಬಗ್ಗೆ ಕನ್ನಡದಲ್ಲೇ ಮಾತನಾಡಿ ದೂರು ನೀಡಬಹುದು.
ಆದರೆ ಫ್ಲಿಪ್‌ಕಾರ್ಟ್ ಇದಕ್ಕೆ ವ್ಯತಿರಿಕ್ತ. ಕೆಲವು ತಿಂಗಳವರೆಗೂ ಫ್ಲಿಪ್‌ಕಾರ್ಟ್ ಭಾರತೀಯ ಮೂಲದ ಕಂಪೆನಿಯಾಗಿತ್ತು. ಅದರಲ್ಲೂ ಬೆಂಗಳೂರು ಅದರ ಮೂಲ. ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಎಂಬ ಸಹೋದರರು 15 ವರ್ಷಗಳ ಮುಂಚೆ ಬೆಂಗಳೂರಿನಲ್ಲಿ ಸಣ್ಣದಾಗಿ ಒಂದು ಕಟ್ಟಡದಲ್ಲಿ ಫ್ಲಿಪ್‌ಕಾರ್ಟ್ ಶುರು ಮಾಡಿದರು. ಗ್ರಾಹಕರಿಗೆ ಆನ್‌ಲೈನ್ ಸ್ಟೋರ್ ಎಂದರೇನು ಎಂದು ಗೊತ್ತಿರಲಿಲ್ಲ. ಈ ಸೋದರರು ಬೆಂಗಳೂರಿನ ಮನೆಮನೆಗಳಿಗೆ ತೆರಳಿ ಕರಪತ್ರಗಳನ್ನು ಹಂಚಿ ತಮ್ಮ ಫ್ಲಿಪ್‌ಕಾರ್ಟ್ ಬಗ್ಗೆ ಪ್ರಚಾರ ಮಾಡಿದರು. ತಮಿಳುನಾಡಿನ ಓರ್ವ ಸಿಬ್ಬಂದಿ, ಗ್ರಾಹಕರು ಆರ್ಡರ್ ಮಾಡಿದ ವಸ್ತುಗಳನ್ನು ಮನೆಮನೆಗಳಿಗೆ ಹೋಗಿ ತಲುಪಿಸಿಬರುತ್ತಿದ್ದ. ಈಗಾತ ಕೊÂàಟ್ಯಧೀಶ!
ಹೀಗೆ ಬೆಂಗಳೂರು ಮೂಲವಾದ ಫ್ಲಿಪ್‌ಕಾರ್ಟ್ ಕಂಪೆನಿ ಆಗಿಂದಲೂ ಕನ್ನಡದಲ್ಲಿ ಗ್ರಾಹಕ ಸೇವಾ ಕೇಂದ್ರದ ಸೌಲಭ್ಯ ನೀಡಲಿಲ್ಲ. ನಾವು ಇಂಗ್ಲಿಷ್ ಅಥವಾ ಹಿಂದಿಮೇ ಬೋಲಬೇಕು. ಕನ್ನಡವೇ ಬೇಕು ಅಂದರೆ ಕಾಲ್ ಬ್ಯಾಕ್ ಅರೆಂಜ್ ಮಾಡುವುದಾಗಿ ಹೇಳುತ್ತಾರೆ. ಅದು ಬಂದರೆ ಬಂತು ಬಾರದಿದ್ದರೆ ಇಲ್ಲ. ಈಗ ಫ್ಲಿಪ್‌ಕಾರ್ಟ್ ಅನ್ನು ಅಮೆರಿಕಾ ಮೂಲದ ವಾಲ್‌ಮಾರ್ಟ್ ಖರೀದಿಸಿದೆ. ಭಾರತೀಯರಿದ್ದಾಗ ಕನ್ನಡ ಸೇವೆ ಇರಲಿಲ್ಲ, ಬಹುರಾಷ್ಟ್ರೀಯರ ತೆಕ್ಕೆಗೆ ಬಂದ ಬಳಿಕವಾದರೂ ಕನ್ನಡ ಸೇವೆ ದೊರಕುತ್ತದೇನೋ ನೋಡಬೇಕು!
ಇದೊಂದೇ ಅಲ್ಲ ಅಮೆಜಾನ್‌ನಂತೆ ಫ್ಲಿಪ್‌ಕಾರ್ಟ್‌ನಲ್ಲಿ ಅಷ್ಟೊಂದು ಸುಲಭವಾಗಿ ಬದಲಿಸುವ ಅಥವಾ ಹಿಂದಿರುಗಿಸುವ ಸೌಲಭ್ಯ ಇಲ್ಲ. ಉದಾಹರಣೆಗೆ ನೀವು ಕೊಂಡ ಮೊಬೈಲ್‌ನಲ್ಲಿ ಕೊಂಡ ನಾಳೆಗೇ ಬ್ಯಾಟರಿ ಬೇಗ ಖಾಲಿಯಾಗುತ್ತಿರುತ್ತದೆ ಎಂದಿಟ್ಟುಕೊಳ್ಳಿ. ನೀವು ಎಕ್ಸ್‌ಚೇಂಜ್ ಆಥವಾ ರಿಟರ್ನ್ ಕೇಳಿದರೆ, ಫ್ಲಿಪ್‌ಕಾರ್ಟ್‌ನವರು ಬಡಪೆಟ್ಟಿಗೆ ಒಪ್ಪಿಕೊಳ್ಳುವುದಿಲ್ಲ. ಅವರದ್ದೊಂದು ಆ್ಯಪ್ ಸ್ಥಾಪಿಸಿಕೊಳ್ಳಲು ಹೇಳುತ್ತಾರೆ. ಅದರ ಮೂಲಕ ನಿಮ್ಮ ಮೊಬೈಲ್ ಪರೀಕ್ಷೆ ಮಾಡುತ್ತಾರೆ. ಎಲ್ಲ ಸರಿಯಿದೆ. ಏನೂ ಸಮಸ್ಯೆಯಿಲ್ಲ ಎಂದು ವಾದ ಮಾಡುತ್ತಾರೆ. ರಾತ್ರಿ ಮಲಗುವ ಮೊದಲು ಶೇ. 90 ಇದ್ದ ಬ್ಯಾಟರಿ ಬೆಳಿಗ್ಗೆ ಎದ್ದಾಗ ಶೇ. 50ಕ್ಕೆ ಬಂದಿರುತ್ತದೆ ಎಂದರೆ, ನಮ್ಮ ಮೊಬೈಲ್ ಅನ್ನು ಕಾಲು ಗಂಟೆ ಆ್ಯಪ್‌ಮೂಲಕವೇ ಈಗ ಇಷ್ಟು ಪರ್ಸೆಂಟ್ ಇದೆ. 15 ನಿಮಿಷಕ್ಕೆ ಇಷ್ಟು ಪರ್ಸೆಂಟ್ ಬ್ಯಾಟರಿ ಖಾಲಿಯಾದರೆ ಮಾತ್ರ ಬದಲಿಸಿಕೊಡಬಹುದು ಎನ್ನುತ್ತಾರೆ! ಹೀಗೆ ವಿತಂಡವಾದಗಳನ್ನು ಮುಂದಿಡಲಾಗುತ್ತದೆ. ಈ ಗೋಳಿಗೇ ನಾನು ಅಮೆಜಾನ್‌ನಲ್ಲೇ ಕೊಳ್ಳಲು ಹೆಚ್ಚು ಆದ್ಯತೆ ನೀಡುತ್ತೇನೆ. ಇವೆರಡನ್ನೂ ಹೊರತುಪಡಿಸಿದರೆ, ಪೇ ಟಿಎಂನಲ್ಲಿ ಕೆಲ ವಸ್ತುಗಳು ಕಡಿಮೆ ದರದಲ್ಲಿ ದೊರಕುತ್ತವೆ. ಹೆಚ್ಚು ಕ್ಯಾಷ್‌ಬ್ಯಾಕ್ ಸಿಗುತ್ತದೆ. ಮಿಕ್ಸಿಗಳು, ವಾಚುಗಳು, ಪಾದರಕ್ಷೆ, ಶೂ ಇತ್ಯಾದಿಗಳಿಗೆ ಪೇಟಿಎಂನಲ್ಲಿ ಹೆಚ್ಚು ಕ್ಯಾಷ್‌ಬ್ಯಾಕ್ ದೊರಕುತ್ತದೆ.
ಒಟ್ಟಾರೆ, ನೀವು ಕೊಳ್ಳುವ ಪದಾರ್ಥಯಾವುದರಲ್ಲಿ ಅತಿ ಕಡಿಮೆಗೆ ದೊರಕುತ್ತದೆ ಪರಿಶೀಲಿಸಿ, ಅದರಲ್ಲಿ ಕೊಳ್ಳುವ ಆಯ್ಕೆ ಮಾಡಿ.
ಕೆ.ಎಸ್. ಬನಶಂಕರ ಆರಾಧ್ಯ