Advertisement

ದ್ವಿಚಕ್ರ ವಾಹನ ಸುಲಭವಾಗಿ ಸ್ಮಾರ್ಟ್‌ ಆಗಬೇಕೆ? 

03:07 PM Jun 08, 2018 | |

ಮಳೆಗಾಲ ಶುರುವಾಗಿದೆ. ಈ ಹೊತ್ತಿಗೆ ದ್ವಿಚಕ್ರ ವಾಹನಗಳ ಬ್ಯಾಟರಿ ಬಗ್ಗೆಯೂ ಕೇರ್‌ ತೆಗೆದುಕೊಳ್ಳೋದು ಒಳ್ಳೆಯದು.
ಇಲ್ಲದಿದ್ದರೆ, ವೃಥಾ ಸ್ಟಾರ್ಟಿಂಗ್‌ ಟ್ರಬಲ್‌ಗೆ ಕಾರಣವಾಗುತ್ತದೆ. ಇದಕ್ಕಾಗಿ ನಿಗದಿತ ಸಮಯಕ್ಕೆ ಪರಿಶೀಲನೆ ಮಾಡಿದರೆ ಒಳ್ಳೆಯದು.

Advertisement

ಡಿಸ್ಟಿಲ್‌ ವಾಟರ್‌ ಲೆವೆಲ್‌ ಪರೀಕ್ಷಿಸಿ
ಬ್ಯಾಟರಿ ಡಿಸ್ಟಿಲ್‌ ವಾಟರ್‌ ಹಾಕುವ ಮಾದರಿಯದ್ದಾದರೆ, ಕನಿಷ್ಠ ತಿಂಗಳಿಗೊಮ್ಮೆಯಾದರೂ ಅದರಲ್ಲಿ ಡಿಸ್ಟಿಲ್‌ ವಾಟರ್‌ ಲೆವೆಲ್‌ ಸರಿಯಾದ ಪ್ರಮಾಣದಲ್ಲಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ಕಡಿಮೆ ಇದ್ದರೆ ಡಿಸ್ಟಿಲ್‌ ವಾಟರ್‌ ಅನ್ನೇ ಹಾಕಿರಿ. ಸರಿಯಾದ ಪ್ರಮಾಣದ ಡಿಸ್ಟಿಲ್‌ ವಾಟರ್‌ ಇರುವುದರಿಂದ ಬ್ಯಾಟರಿ ದೀರ್ಘ‌ಕಾಲ ಬಾಳಿಕೆ ಬರುತ್ತದೆ.

ಟರ್ಮಿನಲ್‌ ಶುಚಿಗೊಳಿಸಿ
ಬ್ಯಾಟರಿಯಲ್ಲಿ ಪ್ಲಸ್‌ ಮತ್ತು ಮೈನಸ್‌ ಸಂಪರ್ಕದ ಎರಡು ಟರ್ಮಿನಲ್‌ ಗಳಿರುತ್ತವೆ. ಈ ಟರ್ಮಿನಲ್‌ಗ‌ಳಲ್ಲಿ ಕಾಲ ಕ್ರಮೇಣ ಸವೆತ ಮತ್ತು ತುಕ್ಕು ಹಿಡಿದಂತೆ ಆಗುವುದರಿಂದ ವಿದ್ಯುತ್‌ ಸರಿಯಾಗಿ ಪ್ರವಹಿಸುವುದಿಲ್ಲ. ಇದಕ್ಕಾಗಿ ಅದನ್ನು ಶುಚಿಗೊಳಿಸುತ್ತಿರಬೇಕು. ಜತೆಗೆ ಅಲ್ಪ ಪ್ರಮಾಣದಲ್ಲಿ ಗುಣಮಟ್ಟದ ಗ್ರೀಸ್‌ ಅನ್ನು ಆ ಭಾಗಕ್ಕೆ ಲೇಪಿಸಬಹುದು

ಫ್ಯೂಸ್‌ ಪರಿಶೀಲಿಸಿ
ಕೆಟ್ಟು ಹೋದ ಫ್ಯೂಸ್‌ ಇದ್ದರೆ ಬೈಕ್‌/ಸ್ಕೂಟರ್‌ ಸ್ಟಾಟ್‌ ಆಗದು. ಅಥವಾ ಸ್ಟಾರ್ಟಿಂಗ್‌ ಸಮಸ್ಯೆಗೆ ಕಾರಣವಾಗಬಹುದು. ಇದಕ್ಕಾಗಿ ಫ್ಯೂಸ್‌ ಪರಿಶೀಲಿಸಿ ಅಗತ್ಯವಿದ್ದರೆ ಹೊಸದು ಹಾಕಿಕೊಳ್ಳಿ.

ಬ್ಯಾಟರಿ ಸೋರುತ್ತಿದೆಯೇ?
ಬ್ಯಾಟರಿಯಲ್ಲಿ ಡಿಸ್ಟಿಲ್‌ವಾಟರ್‌ ಸೋರುತ್ತಿದೆಯೇ ಎಂದು ಪರಿಶೀಲಿಸಿ. ಇದರಿಂದ ಬ್ಯಾಟರಿ ಆಯುಷ್ಯ ಕಡಿಮೆಯಾಗುತ್ತದೆ. ಮತ್ತು ವಿದ್ಯುತ್‌ ಚಾರ್ಜ್‌ ಕೂಡ ನಿಲ್ಲುವುದಿಲ್ಲ.

Advertisement

ವಾರಕ್ಕೆರಡು ಬಾರಿ ಸ್ಟಾರ್ಟ್‌ ಮಾಡಿ
ಒಂದು ವೇಳೆ ನೀವು ದ್ವಿಚಕ್ರ ವಾಹನ ಬಳುಸುವುದು ಕಡಿಮೆ, ಹೆಚ್ಚಾಗಿ ನಿಂತೇ ಇರುತ್ತದೆ ಎಂದಾದರೆ ವಾರಕ್ಕೆರಡು ಬಾರಿಯಾದರೂ ಅದನ್ನು ಸ್ಟಾರ್ಟ್‌ ಮಾಡಿ 15 ನಿಮಿಷವಾದರೂ ವಾಹನ ಚಾಲೂ ಸ್ಥಿತಿಯಲ್ಲಿಡಬೇಕು. ಇದರಿಂದ ಬ್ಯಾಟರಿ ಆರೋಗ್ಯ ಸರಿಯಾಗಿರುತ್ತದೆ. ಒಂದು ವೇಳೆ ತಿಂಗಳಾನುಗಟ್ಟಲೆ ವಾಹನ ಇಟ್ಟಿರುತ್ತೀರಿ ಎಂದಾದರೆ ಟರ್ಮಿನಲ್‌ ಸಂಪರ್ಕವನ್ನು ಕಡಿತಗೊಳಿಸಬೇಕು. ಈಗ ಹೆಚ್ಚಿನ ಬೈಕ್‌ಗಳಲ್ಲಿ, ಸ್ಕೂಟರ್‌ಗಳಲ್ಲಿ ನಿರ್ವಹಣೆ ಅಗತ್ಯವಿಲ್ಲದ ಬ್ಯಾಟರಿಗಳು ಇರುವುದಾದರೂ, ಬ್ಯಾಟರಿ ಆಗಾಗ್ಗೆ ಚಾರ್ಜ್‌ ಆಗುತ್ತಿರಬೇಕು ಮತ್ತು ಬಳಕೆಯಲ್ಲಿಲ್ಲದಿದ್ದರೆ ಅವುಗಳ ಸಂಪರ್ಕ ಕಿತ್ತು ಹಾಕಬೇಕು. 

ಸಂಪರ್ಕ ಸರಿಯಿದೆಯೇ?
ಟರ್ಮಿನಲ್‌ ಮತ್ತು ಬೈಕ್‌ನ ಇಗ್ನಿಷನ್‌ಗೆ ಇರುವ ಸಂಪರ್ಕ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ಈ ಸಂಪರ್ಕ ಕ್ಕಿರುವ ಬೋಲ್ಟ್ ಸಡಿಲವಾಗಿದ್ದರೆ, ವಿದ್ಯುತ್‌ ಪ್ರವಹಿಸಲು ಸಮಸ್ಯೆಯಾಗುತ್ತದೆ ಮತ್ತು ಇಗ್ನಿಷನ್‌ ಆಗಾಗ್ಗೆ ಆಫ್ ಆಗುವ ಸಮಸ್ಯೆಗಳು ಕಾಡಬಹುದು. 

ಈಶ
 

Advertisement

Udayavani is now on Telegram. Click here to join our channel and stay updated with the latest news.

Next