Advertisement

ಇಂದಿನಿಂದ ವನಿತಾ ಪ್ರೀಮಿಯರ್ ಲೀಗ್ ಕಲರವ; ಕನ್ನಡದಲ್ಲೂ ಇದೆ ನೇರಪ್ರಸಾರ

04:42 PM Mar 04, 2023 | Team Udayavani |

ಮುಂಬೈ: ವನಿತಾ ಕ್ರಿಕೆಟ್ ನ ಬಹುಕಾಲದ ಕನಸಾದ ವನಿತಾ ಪ್ರೀಮಿಯರ್ ಲೀಗ್ ಗೆ ಕ್ಷಣಗಣನೆ ಆರಂಭವಾಗಿದೆ. ಮುಂಬೈನಲ್ಲಿ ಇಂದು ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

Advertisement

ಕೂಟದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಹೊರತುಪಡಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಫ್ರಾಂಚೈಸಿಗಳು ಪಾಲ್ಗೊಳ್ಳುತ್ತಿವೆ.

ಪ್ರತಿ ರಾತ್ರಿಯ ಪಂದ್ಯವು 7.30ಕ್ಕೆ ಆರಂಭವಾಗಲಿದೆ. ಮಧ್ಯಾಹ್ನದ ಪಂದ್ಯ 3.30ಕ್ಕೆ ಆರಂಭವಾಗುತ್ತಿದೆ. ಆದರೆ ಇಂದು ಉದ್ಘಾಟನಾ ಸಮಾರಂಭ ಇರುವ ಕಾರಣದಿಂದ ಮೊದಲ ಪಂದ್ಯ 8 ಗಂಟೆಗೆ ಆರಂಭವಾಗಲಿದೆ.

ನೇರಪ್ರಸಾರ ಎಲ್ಲಿ?

ವಾಯಿಕಮ್ 18 ಐದು ವರ್ಷಗಳ ಅವಧಿಗೆ ಡಬ್ಲ್ಯೂಪಿಎಲ್ ಗಾಗಿ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದೆ. ಕಂಪನಿಯು 2023 ರಿಂದ 2027 ರ ಅವಧಿಗೆ 951 ಕೋಟಿ ರೂ. ಪಾವತಿಸುತ್ತದೆ. ಅದರಂತೆ, ಡಬ್ಲ್ಯೂಪಿಎಲ್ 2023 ರ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್ 18 ನೆಟ್‌ ವರ್ಕ್‌ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

Advertisement

ಮಹಿಳಾ ಪ್ರೀಮಿಯರ್ ಲೀಗ್ 2023 ಗೇಮ್‌ ಗಳು ಕನ್ನಡದಲ್ಲೂ ನೇರಪ್ರಸಾರ ಲಭ್ಯವಿದ್ದು, ಕಲರ್ಸ್ ಕನ್ನಡ ಸಿನಿಮಾ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ ನಲ್ಲಿಯೂ ಲಭ್ಯವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next