ಹೊಸದಿಲ್ಲಿ: ವಿವಾದಿತ ದೇವಮಾನವ ನಿತ್ಯಾನಂದ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಂಡಿದ್ದ ಅವರ ದೇಶ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ (ಯುಎಸ್‌ಕೆ) ಭಾರತದ ಬಗ್ಗೆ ಹೇಳಿಕೆ ನೀಡಿದ ಬಗ್ಗೆ ಹಲವು ಕುತೂಹಲಹಗಳು ಎದ್ದಿವೆ. ಹಾಗಾದರೆ ಈ ನಿತ್ಯಾನಂದನ ಸ್ವಘೋಷಿತ ದೇಶ ಕೈಲಾಸ ಎಲ್ಲಿದೆ ಎಂದು ಜನರು ಗೂಗಲ್ ಮಾಡತೊಡಗಿದ್ದಾರೆ.
ಈ ಕಾಲ್ಪನಿಕ ದೇಶ ಎಲ್ಲಿದೆ ಎಂದು ನಿಖರವಾಗಿ ತಿಳಿದಿಲ್ಲವಾದರೂ, ಅವರ ಅನುಯಾಯಿಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಅವರು ತಮ್ಮ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಆಗಾಗ ಪೋಸ್ಟ್ ಮಾಡುತ್ತಾರೆ. ಬಿಬಿಸಿ ವರದಿಯ ಪ್ರಕಾರ, ನಿತ್ಯಾನಂದ ಅವರು ಈಕ್ವೆಡಾರ್ ಕರಾವಳಿಯ ದ್ವೀಪವನ್ನು ಖರೀದಿಸಿ ಅಲ್ಲಿ ಅವರು ‘ಕೈಲಾಸ’ವನ್ನು ಸ್ಥಾಪಿಸಿದ್ದಾರೆ. ಆದರೆ ಇದರ ಬಗ್ಗೆ ಸ್ಪಷ್ಟತೆಯಿಲ್ಲ.
ಇದನ್ನೂ ಓದಿ:ಪಲಾಯನಗೈದ ಆರ್ಥಿಕ ಅಪರಾಧಿ: ವಿಜಯ್ ಮಲ್ಯ ಅರ್ಜಿ ವಜಾಗೊಳಿಸಿದ ಸುಪ್ರೀಂ
ಈಕ್ವೆಡಾರ್ ಸಮೀಪದ ದ್ವೀಪವೊಂದರಲ್ಲಿ ನಿತ್ಯಾನಂದನ ದೇಶವನ್ನು ಸ್ಥಾಪಿಸಲಾಗಿದೆ ಎಂದು ಹಲವಾರು ವರದಿಗಳು ಹೇಳಿವೆ. ಆದರೆ, ನಿತ್ಯಾನಂದ ದೇಶದಲ್ಲಿ ಇಲ್ಲಿ ಇಲ್ಲ ಎಂದು ಈಕ್ವೆಡಾರ್ ಸರ್ಕಾರ ಅಂದು ಬಿಬಿಸಿಗೆ ತಿಳಿಸಿತ್ತು.
Related Articles
ಕಾಲ್ಪನಿಕ ದೇಶದ ವೆಬ್ ಸೈಟ್ ನ ಪ್ರಕಾರ, ‘ಕೈಲಾಸ’ ಎಂಬುದು ಕೆನಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳ ಹಿಂದೂ ಆದಿ ಶೈವ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಂದ ಸ್ಥಾಪಿಸಲ್ಪಟ್ಟ ಮತ್ತು ಮುನ್ನಡೆಸಲ್ಪಟ್ಟ ಒಂದು ಚಳುವಳಿಯಾಗಿದೆ. ಇದು ಎಲ್ಲರಿಗೂ ಸುರಕ್ಷಿತ ಧಾಮವನ್ನು ನೀಡುತ್ತದೆ. ಜನಾಂಗ, ಲಿಂಗ, ಪಂಗಡ, ಜಾತಿ, ಅಥವಾ ಪಂಥವನ್ನು ಲೆಕ್ಕಿಸದೆ ವಿಶ್ವದ ಮಹತ್ವಾಕಾಂಕ್ಷೆಯ ಅಥವಾ ಕಿರುಕುಳಕ್ಕೊಳಗಾದ ಹಿಂದೂಗಳು, ಅಲ್ಲಿ ಅವರು ಶಾಂತಿಯುತವಾಗಿ ಬದುಕಬಹುದು ಎಂದಿದೆ.
ಟ್ವಿಟರ್ ಹ್ಯಾಂಡಲ್ ನಲ್ಲಿ ಕೈಲಾಸ ದೇಶದ ಇ-ಪೌರತ್ವಕ್ಕಾಗಿ ಇ-ವೀಸಾಕ್ಕಾಗಿ ಅರ್ಜಿಗಳನ್ನು ಕರೆದಿದೆ. ಕೈಲಾಸವು ಧ್ವಜ, ಸಂವಿಧಾನ, ಆರ್ಥಿಕ ವ್ಯವಸ್ಥೆ, ಪಾಸ್ ಪೋರ್ಟ್ ಮತ್ತು ಲಾಂಛನವನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತದೆ. ಪ್ರತಿಯೊಂದು ದೇಶದಂತೆ, ‘ಕೈಲಾಸ’ ಕೂಡ ತನ್ನ ವೆಬ್ ಸೈಟ್ ನಲ್ಲಿ ಉಲ್ಲೇಖಿಸಿರುವಂತೆ ಖಜಾನೆ, ವಾಣಿಜ್ಯ, ವಸತಿ, ಮಾನವ ಸೇವೆಗಳು ಮತ್ತು ಹೆಚ್ಚಿನವುಗಳಂತಹ ವಿವಿಧ ಇಲಾಖೆಗಳನ್ನು ಹೊಂದಿದೆ.
ಮಾನ್ಯತೆ ಇದೆಯೆ?
ಈ ಒಂದು ವಿಚಾರದಲ್ಲಿ ನಿತ್ಯಾನಂದ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. ಅವರು ಮತ್ತು ಅವರ ಪ್ರತಿನಿಧಿಗಳು ಈ ಕಾಲ್ಪನಿಕ ದೇಶವು ಭಾಗವಹಿಸಿದ ಘಟನೆಗಳ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆದರೆ ವಿಶ್ವಸಂಸ್ಥೆಯು ಇದುವರೆಗೂ ಮಾನ್ಯತೆ ನೀಡಿಲ್ಲ.
ಯಾವುದೇ ಒಂದು ಪ್ರದೇಶವು ದೇಶದ ಸ್ಥಾನಮಾನವನ್ನು ಪಡೆಯದಿದ್ದರೆ, ಅದನ್ನು ಮೈಕ್ರೊನೇಷನ್ ಎಂದು ಕರೆಯಬಹುದು. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ, ಮೈಕ್ರೊನೇಷನ್ ಗಳು ಸ್ವತಂತ್ರ ಸಾರ್ವಭೌಮ ರಾಜ್ಯಗಳೆಂದು ಹೇಳಿಕೊಳ್ಳುವ ಸ್ವಯಂ-ಘೋಷಿತ ಘಟಕಗಳಾಗಿವೆ.