Advertisement
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, “ನಾನು ಎಲ್ಲಾ ಸಮುದಾಯದವರನ್ನು ಗೌರವವಾಗಿ ಕಾಣುತ್ತೇನೆ. ಯಾರ ಬಗ್ಗೆಯೂ ಕೇವಲವಾಗಿ ಮಾತನಾಡುವುದಿಲ್ಲ. ಕಲ್ಲಪ್ಪ ಹಂಡೀಬಾಗ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂಬುದನ್ನು ತಿಳಿದು ಅವರ ಮನೆಗೆ ಹೋಗಿ ಹಂಡೀಬಾಗ್ ಪತ್ನಿ ಯೊಂದಿಗೆ ಮಾತನಾಡಿದ್ದೆ. ಆ ಸಂದರ್ಭದಲ್ಲಿ ಕುಟುಂಬದ ಸಂಕಷ್ಟದ ಬಗ್ಗೆ ಮಾತನಾಡಿದ್ದೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಕುರುಬರ ಸಂಘದವರು ಪ್ರತಿಭಟನೆ ಮಾಡುತ್ತಿದ್ದಾರೆ’. “ನನ್ನ ವಿರುದ್ಧ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿರುವ ಸಮುದಾ ಯದ ಕೆಲವು ಮುಖಂಡರು ಕಲ್ಲಪ್ಪ ಹಂಡೀ ಬಾಗ್ ಆತ್ಮಹತ್ಯೆ ಮಾಡಿ ಕೊಂಡಾಗ ಎಲ್ಲಿ ಹೋಗಿದ್ದರು? ಅವರ ಕುಟುಂಬ ಸಂಕಷ್ಟದಲ್ಲಿದ್ದಾಗ ಏಕೆ ನೆರವಿಗೆ ಬರಲಿಲ್ಲ? ಅವರಿಗೆ ನಿಜ ವಾಗಿಯೂ ಆ ಕುಟುಂಬದ ಬಗ್ಗೆ ಗೌರವ ಇದ್ದರೆ ಕುಟುಂಬಕ್ಕೆ ನೆರವು ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಮಾಡಬೇಕು. ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡುವುದ ರಲ್ಲಿ ಅರ್ಥವಿಲ್ಲ. ಇಂತಹ ಕೆಲವು ಮುಖಂಡರಿಂದ ಸಮುದಾಯಕ್ಕೆ ಅಗೌರವ ಉಂಟಾಗುತ್ತದೆ’ ಎಂದರು.