Advertisement

ಎಲ್ಲಿ ಹೋದವು 2,000ರೂ. ನೋಟುಗಳು?

10:16 PM Nov 21, 2022 | Team Udayavani |

ಆರು ವರ್ಷಗಳ ಹಿಂದೆ ಇದೇ ತಿಂಗಳು ದೇಶದಲ್ಲಿ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಲಾಗಿತ್ತು. ಖೋಟಾ ನೋಟು ಹಾವಳಿ ಮತ್ತು ಕಪ್ಪುಹಣ ನಿಯಂತ್ರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಇತ್ತೀಚೆಗಷ್ಟೇ ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ.

Advertisement

ಈ ನೋಟುಗಳ ಅಮಾನ್ಯದ ಬಳಿಕ ಸರಕಾರ 2,000 ರೂ. ನೋಟುಗಳನ್ನು ಚಲಾವಣೆಗೆ ತಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ನೋಟುಗಳ ಚಲಾವಣೆ ತೀರಾ ಅನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿದೆ.

ಸದ್ಯ ಚಲಾವಣೆಯಲ್ಲಿರುವ ನೋಟುಗಳು ಯಾವುವು?: 2, 5, 10, 20, 50, 100, 200, 500 ಮತ್ತು 2,000 ರೂ.

2 ಸಾವಿರ ರೂ.  ನೋಟು ತಂದಿದ್ದು ಏಕೆ? : ನೋಟು ನಿಷೇಧ ಮಾಡುವವರೆಗೆ ದೇಶದಲ್ಲಿ 1,000 ರೂ. ಮುಖಬೆಲೆಯ ನೋಟೇ ಅತ್ಯಧಿಕ ಮೌಲ್ಯದ್ದಾಗಿತ್ತು. ಆದರೆ ಖೋಟಾನೋಟುಗಳ ಬಳಕೆ ಯಲ್ಲಿ 500 ಮತ್ತು 1,000 ರೂ. ಹೆಚ್ಚಿವೆ ಎಂಬ ಕಾರಣಕ್ಕಾಗಿ ಈ ಎರಡನ್ನು ನಿಷೇಧಿಸಲಾಗಿತ್ತು. ದೇಶದಲ್ಲಿ ಒಟ್ಟು ಶೇ.80ರಷ್ಟು ಇವೇ ನೋಟುಗಳು ಚಲಾ ವಣೆಯಲ್ಲಿದ್ದ ಕಾರಣ ನಿಷೇಧದಿಂದಾಗಿ ಜನ ಪರದಾ ಡುವಂತಾಗುತ್ತದೆ ಎಂಬ ಕಾರಣಕ್ಕಾಗಿ 2,000 ರೂ. ನೋಟು ತರಲಾಗಿತ್ತು.

ಈಗ ಎಷ್ಟು ನೋಟು ಚಲಾವಣೆಯಲ್ಲಿವೆ?: ಸದ್ಯ ಒಟ್ಟಾರೆ 21,420 ಲಕ್ಷ ಎರಡು ಸಾವಿರ ರೂ.ನೋಟುಗಳು ಚಲಾವಣೆಯ ಲ್ಲಿವೆ. ಇವುಗಳ ಒಟ್ಟಾರೆ ಮೌಲ್ಯ 4,28,394 ಕೋಟಿ  ರೂ.ಆಗಿದೆ. 2020ರಿಂದ ಇಲ್ಲಿವರೆಗೆ ಒಂದು ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳನ್ನು ಚಲಾವಣೆ ಯಿಂದ ವಾಪಸ್‌ ಪಡೆಯಲಾಗಿದೆ.

Advertisement

ನಿಲ್ಲಿಸಿದ್ದು ಏಕೆ? : 500 ಮತ್ತು 1,000 ರೂ. ಮೌಲ್ಯದ ನೋಟುಗಳಿಗೆ ಹೋಲಿಕೆ ಮಾಡಿದರೆ ಕಪ್ಪು ಹಣ ಸಂಗ್ರಹ ಮತ್ತು ಖೋಟಾ ನೋಟು ಚಲಾವಣೆಗೆ 2 ಸಾವಿರ ರೂ. ನೋಟು ಉತ್ತಮ ದಾರಿ. ಮೊದಲು ಜನರ ಬೇಡಿಕೆಗೆ ತಕ್ಕಂತೆ ನೋಟುಗಳನ್ನು ಪೂರೈಸುವ ಸಲುವಾಗಿ 2,000 ರೂ. ನೋಟು ಜಾರಿಗೆ ತರಲಾಗಿತ್ತು. ಈಗ ಕಡಿಮೆ ಮಾಡಲಾಗುತ್ತಿದೆ.

ಈಗ ಕಡಿಮೆ ಆಗುತ್ತಿರುವುದೇಕೆ?: 2016ರ ನ.8ರಂದು ನೋಟುಗಳು ನಿಷೇಧವಾಗಿದ್ದವು. ಆಗಿನಿಂದ 2019ರ ವರೆಗೆ 2,000 ರೂ. ನೋಟುಗಳನ್ನು ಮುದ್ರಣ ಮಾಡಲಾಗುತ್ತಿತ್ತು. ಆದರೆ ಇವುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಬರಲಾಗಿತ್ತು. 2020ರಿಂದ ಈಚೆಗೆ ಒಂದೇ ಒಂದು 2,000 ರೂ. ನೋಟನ್ನು ಆರ್‌ಬಿಐ ಮುದ್ರಣ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next