Advertisement
ನ್ಯಾಯಾಲಯ ಆರಂಭಕ್ಕೆ ಹಸಿರು ನಿಶಾನೆ ದೊರೆಯಬಹುದೇ ಎಂಬ ನಿರೀಕ್ಷೆ ಹೆಚ್ಚಾಗಿದೆ. ತಾಲೂಕು ನೆಲಮಹಡಿಯಲ್ಲಿ ಕಳೆದ 6-7 ವರ್ಷದಿಂದ ಕೋರ್ಟ್ ಕಾಮಗಾರಿ ನಡೆಯುತ್ತಲೇ ಇದೆ. ಇನ್ನೂ ಪೂರ್ಣವಾಗಿಲ್ಲ.
ಗಳನ್ನು ಒಳಗೊಂಡ ಕೃಷ್ಣರಾಜಪುರದಲ್ಲಿ ನ್ಯಾಯಲಯವು ಸ್ಥಾಪಿಸುವಂತೆ 2003 ರಲ್ಲೇ ಸರ್ಕಾರ ಸೂಚನೆ ಹೊರಡಿಸಿತ್ತು.ಬಳಿಕ ನ್ಯಾಯಾಲಯ
ಸ್ಥಾಪನೆಗೆ 2004 ಫೆ.27ಕ್ಕೆ ಸರ್ಕಾರ ಅಂತಿಮ ಸೂಚನೆಯನ್ನು ಹೊರಡಿಸಿತ್ತು, ಉಚ್ಚನ್ಯಾಯಾಲಯವು ಕೃಷ್ಣರಾಜಪುರದಲ್ಲಿ ನ್ಯಾಯಾಲಯ
ಕಾರ್ಯಾರಂಭಕ್ಕೆ ಸಮ್ಮತಿ ಸೂಚಿಸಿದೆ. ಆದಾಗ್ಯೂಕೆಆರ್ ಪುರದಲ್ಲಿ ಇನ್ನೂ ನ್ಯಾಯಾಲಯ ಕಾರ್ಯಾಚರಣೆ ಆರಂಭಿಸಿಲ್ಲ. ಇದರಿಂದಾಗಿ ಪೂರ್ವ ತಾಲೂಕಿನ ಪ್ರಕರಣಗಳು ಇತ್ಯರ್ಥವೇ ಆಗಿಲ್ಲ. ಕೆ.ಆರ್.ಪುರದಲ್ಲಿ ಕೋರ್ಟ್‌ಗೆ ಒತ್ತಾಯ:
ನ್ಯಾಯಕ್ಕಾಗಿ ನಾಗರಿಕರು ಬೆಂಗಳೂರು ಹೃದಯ ಭಾಗಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಆರ್ ಪುರ ಭಾಗದಿಂದ ನಗರಕ್ಕೆ ಆಗಮಿಸಲು ಸಂಚಾರದಟ್ಟಣೆಯಲ್ಲಿ ಅರ್ಧ ದಿನ ಕಳೆದು ಹೋಗುತ್ತದೆ ನಿಗದಿತ ಸಮಯಕ್ಕೆ ಸರಿಯಾಗಿ ನ್ಯಾಯಾಲಯಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಕಕ್ಷಿದಾರರರ ಜತೆಗೆ ತಾಲೂಕಿನ ವಕೀಲರಿಗೂ ಕಾರ್ಯನಿರ್ವಹಿಸಲು ವಿಪರೀತ ತೊಂದರೆಯಾಗುತ್ತಿದ್ದು, ಕೃಷ್ಣರಾಜಪುರಲ್ಲಿ ಶೀಘ್ರವಾಗಿ ನ್ಯಾಯಾಲಯ ಕಾರ್ಯಾರಂಭಿಸುವಂತೆ ಪೂರ್ವ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Related Articles
Advertisement
2001ರಲ್ಲಿ ಬೆಂಗಳೂರು ಪೂರ್ವ ತಾಲೂಕು ರಚನೆಯಾದ ಬಳಿಕ ದಕ್ಷಿಣ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಕೆ.ಆರ್. ಪುರಕ್ಕೆ ಸ್ಥಳಾಂತರಗೊಂಡಿವೆ. ಆಗಲೇ ನ್ಯಾಯಾಲಯ ಸ್ಥಾಪನೆಗೆ ಬೆಂಗಳೂರು ಪೂರ್ವ ತಾಲೂಕು ವಕೀಲರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. 2004ರಲ್ಲಿ ನ್ಯಾಯಾಲಯ ಹಾಗೂ ತಾಲೂಕು ಕಚೇರಿ ಸ್ಥಾಪನೆಗಾಗಿ ಸರ್ಕಾರ ಅಧಿಕೃತ ಅದೇಶ ಹೊರಡಿಸಿದೆ. ಜತೆಗೆ 3 ಎಕರೆ ಜಾಗವನ್ನು ಸರ್ಕಾರಿ ಕಚೇರಿ ಸ್ಥಾಪನೆಗಾಗಿ 99 ವರ್ಷಗಳ ಕಾಲಗುತ್ತಿಗೆ ಪಡೆದುಕೊಂಡು ಒಂದೂವರೆ ಎಕರೆ ಜಾಗ ತಾಲೂಕು ಕಚೇರಿ ಮತ್ತು ಉಳಿದ ಜಾಗ ಕೋರ್ಟ್ ಸ್ಥಾಪನೆಗೆ ಮೀಸಲಿಡಲಾಗಿದೆ. ತಾಲೂಕು ಕಚೇರಿ ಕಟ್ಟಡ ನಿರ್ಮಾಣವಾಗಿ ಹಲವು ವರ್ಷ ಕಳೆದರೂ ಕೋರ್ಟ್ ಸ್ಥಾಪನೆಯಾಗಿಲ್ಲ ಸಂತೆ ಮೈದಾನದಲ್ಲಿದ್ದ ಉಪ ನೋಂದಣಾ ಧಿಕಾರಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಆ ಹಳೆಯ ಕಟ್ಟಡವನ್ನು 60 ಲಕ್ಷ ವೆಚ್ಚದಲ್ಲಿ ನ್ಯಾಯಾಲಯಕ್ಕಾಗಿ ಅಭಿವೃದ್ಧಿ
ಪಡಿಸಲಾಗಿತ್ತು ಅಲ್ಲೂ ನ್ಯಾಯಾಲಯ ಕಾರ್ಯಾಚರಣೆ ನಡೆಸಲಿಲ್ಲ. ಈಗ ಮತ್ತೆ ಪೂರ್ವ ತಾಲೂಕು ಕಚೇರಿಯ ನೆಲಮಹಡಿಯಲ್ಲಿ ನ್ಯಾಯಾಲಯ ಆರಂಭಕ್ಕೆ ಸುಮಾರು 60ಲಕ್ಷ ಖರ್ಚು ಮಾಡಿ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಸರ್ಕಾರ ತಕ್ಷಣ ಸೂಕ್ತ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡು ಶೀಘ್ರ ಕೋರ್ಟ್ ಕಾರ್ಯಾರಂಭಕ್ಕೆ ಕ್ರಮಕೈಗೊಳ್ಳ ಬೇಕು ಎಂದು ನಾಗರಿಕರು ಮನವಿ ಮಾಡಿದರು. ಶೀಘ್ರ ನ್ಯಾಯಾಲಯ ಪ್ರಾರಂಭಕ್ಕೆ ಒತ್ತಾಯ ಹಲವು ವರ್ಷಗಳ ಹಿಂದೆಯೇ ಕೋರ್ಟ್ ಕಾರ್ಯರಂಭ ಮಾಡಬೇಕಿತ್ತು. ಬೆಂಗಳೂರು ವಕೀಲರ ಸಂಘದ ತಕರಾರಿನಿಂದ ನ್ಯಾಯಾಲಯ ಆರಂಭ ವಿಳಂಬವಾಗುತ್ತಿದೆ. ಅನೇಕ ವರ್ಷಗಳಿಂದ ಕೆ.ಆರ್.ಪುರದಲ್ಲಿ ನ್ಯಾಯಾಲಯ ಆರಂಭಿಸುವಂತೆ ಹೋರಾಟ ಮಾಡುತ್ತಿದ್ದೇವೆ. ತಾಲೂಕು ಕಚೇರಿಯ ನೆಲಮಹಡಿಯಲ್ಲಿ ಜಿಲ್ಲಾ ನ್ಯಾಯದೀಶರ ಆದೇಶದಂತೆ ಅಗತ್ಯ ಮೂಲ ಸೌಕರ್ಯಗಳ ಒದಗಿಸುವ ಕೆಲಸ ನಡೆಯುತ್ತಿದೆ ಆದಷ್ಟು ಬೇಗ ನ್ಯಾಯಾಲಯ ಆರಂಭಿಸುವಂತೆ ಪೂರ್ವ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಒತ್ತಾಯಿಸಿದರು. -ಗಿರೀಶ್ ಕೆ.ಆರ್