Advertisement
ಬೀಳಗಿ ತಾಲೂಕಿನ ಸುನಗ ಗ್ರಾಮದ ಪೀರೂ ಪವಾರ್ ಹಾಗೂ ಸುಮಿತ್ರಾ ದಂಪತಿ ಒಂದು ವರ್ಷ ಕಾಲ ಕೊಣಾಜೆ ಹಾಗೂ ಉರ್ವ ಪೊಲೀಸ್ ಠಾಣೆ ಹಾಗೂ ನೆಲ್ಯಾಡಿಯ ಸರಕಾರಿ ವಸತಿ ಗೃಹ ಕಟ್ಟಡದ ಪಾಯ ತೆಗೆಯುವ ಕೆಲಸ ಮಾಡಿದ್ದರು. ಪೀರೂ ಪವಾರ ಅವರ ನಾಲ್ವರು ಮಕ್ಕಳಲ್ಲಿ ಇಬ್ಬರು ಪುತ್ರಿಯರು ಸುನಗದಲ್ಲೇ ಉಳಿದಿದ್ದರು. ಏಳನೇ ತರಗತಿ ಓದುತ್ತಿದ್ದ ರವಿ ಪವಾರ ಹಾಗೂ ನಾಲ್ಕನೇ ತರಗತಿಯಲ್ಲಿದ್ದ ಮೋಹನ್, ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ಪೋಷಕರೊಂದಿಗೆ ವಲಸೆ ಬಂದು ಬೈಕಂಪಾಡಿ ಕೈಗಾರಿಕ ಪ್ರದೇಶದ ಪಾಳುಬಿದ್ದ ಕಾರ್ಖಾನೆಯೊಂದರ ಕಟ್ಟಡದಲ್ಲಿ ವಾಸಿಸಲು ಆರಂಭಿಸಿದ್ದರು.
ಅಂಕಗಳೊಂದಿಗೆ ಶಾಲೆಗೆ ಮೊದಲಿಗರಾದರು. ಮಂಗಳೂರಿನ ವೈದ್ಯ ಡಾ| ಚಂದ್ರಶೇಖರ್ ಅವರ ಸಲಹೆಯಂತೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು, ಮಂಗಳೂರಿನ ಗೋಕರ್ಣನಾಥ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದರು. ಸಿಇಟಿ ಪರೀಕ್ಷೆಯಲ್ಲೂ ಉತ್ತಮ ಅಂಕಗಳಿಸಿದ್ದರಿಂದ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೈನ್ಸ್ ಓದಲು ಅವಕಾಶ ಸಿಕ್ಕಿತು. ಈ ಒಂಬತ್ತು ವರ್ಷ ಶುಕೂರು ಅವರ ಪಾಳುಬಿದ್ದ ಪ್ಲಾಸ್ಟಿಕ್ ಫ್ಯಾಕ್ಟರಿಯ ಕಟ್ಟಡದಲ್ಲೇ ವಾಸ. ಕಟ್ಟಡದ ಒಂದು ಸಣ್ಣ ಕೋಣೆಗೆ ಬಾಗಿಲೂ ಇರಲಿಲ್ಲ.ಚಿಮಣಿ ದೀಪವೇ ಈ ಮನೆ ಬೆಳಗಬೇಕಿತ್ತು. ಕೊನೆಯ ವರ್ಷ ಪಕ್ಕದ ಫ್ಯಾಕ್ಟರಿಯ ವಿದ್ಯುದ್ದೀಪದ ಬೆಳಕಿನಲ್ಲಿ ಓದಲು ಅವಕಾಶ ಸಿಕ್ಕಿತು ಎಂದು ರವಿ ಪವಾರ ನೆನಪಿಸಿಕೊಳ್ಳುತ್ತಾರೆ.
Related Articles
Advertisement
ಮಗನ ಕಲಿಕೆಗೆ ಗುಜರಿ ಹೆಕ್ಕಿದ ತಾಯಿ: ಎಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೊದಲಿಗೆ ಕೂಲಿ ಕೆಲಸ ಇರಲಿಲ್ಲ. ಸಹೋದರಿ ಹಾಗೂ ಪುತ್ರಿಯರ ಮದುವೆ ಮಾಡಿ ತಂದೆ ಪೀರೂ ಪವಾರ ಸಾಲದಲ್ಲಿದ್ದರು. ಹಣದ ಅಡಚಣೆಯಿಂದ ಶಿಕ್ಷಣ ಮೊಟಕಾಗಬಾರದೆಂದು ರವಿ ಕೂಲಿ ಕೆಲಸ ಮಾಡಿದರು. ತಾಯಿ ಸುಮಿತ್ರಾ ದಿನವಿಡೀ ಅಲೆದಾಡಿ ಗುಜರಿ ಹೆಕ್ಕಿ, ಮಗನ ಕಲಿಕೆಗೆ ಆಸರೆಯಾದರು. ರವಿ ಎಂಜಿನಿಯರಿಂಗ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿದರೆ, ಸಹೋದರ ಮೋಹನ್ ಎಸೆಸೆಲ್ಸಿಗೇ ಶಿಕ್ಷಣ ನಿಲ್ಲಿಸಿ ಕುಟುಂಬದ ನೆರವಿಗೆ ನಿಂತರು. ಬದುಕಿಗೆ ಗುರಿಯೇ ಇರಲಿಲ್ಲ. ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಿದಾಗಲೂ ಕೆಲಸ ಸಿಗುತ್ತೆ ಎನ್ನುವ ನಂಬಿಕೆ ಇರಲಿಲ್ಲ. ಆದರೆ, ಜನರಲ್ ಮೆರಿಟ್‌ನಲ್ಲಿ 22ನೇ ಸ್ಥಾನ ಪಡೆದಿದ್ದರಿಂದ ಸಬ್ ಇನ್‌ಸ್ಪೆಕ್ಟರ್ ಆಗಿದ್ದೇನೆ. ಅಸೈಗೋಳಿಯ ಪೊಲೀಸ್ ವಸತಿ ಗೃಹದಲ್ಲಿ ಹೆತ್ತವರೊಂದಿಗೆ ವಾಸವಿದ್ದೇನೆ. ಸಹೋದರ ಶಿವಮೊಗ್ಗದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರವಿ ವಿವರಿಸಿದರು.
ಕೆಎಎಸ್ ಪರೀಕ್ಷೆ ತಯಾರಿಯಲ್ಲಿ: ಕೆಎಎಸ್ ಪರೀಕ್ಷೆ ತಯಾರಿಯಲ್ಲಿರುವ ರವಿ, ಅರ್ಹತಾ ಪರೀಕ್ಷೆ ತೇರ್ಗಡೆಯಾಗಿದ್ದು, ಡಿ. 16ರಂದು ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲಿದ್ದಾರೆ. ಎರಡು ವರ್ಷಗಳ ಕಾಲ ಪ್ರೊಬೆಷನರಿ ಮುಗಿಸಿ ಈಗ ಪೂರ್ಣ ಪ್ರಮಾಣದ ಎಸ್‌ಐ ಆಗಿರುವ ಕಾರಣ, ಓದಿಗೆ ಸಮಯ ಸಾಲುತ್ತಿಲ್ಲ. ಆದರೂ ಕೆಎಎಸ್ ಉತ್ತೀರ್ಣರಾಗುವ ಭರವಸೆ ಹೊಂದಿದ್ದಾರೆ.
ವರದಿ: ವಸಂತ ಕೊಣಾಜೆ
ಕೂಲಿ ಕೆಲಸಕ್ಕೆ 50ರಿಂದ 60 ರೂ. ಕೊಡುತ್ತಿದ್ದರು. ಗುಜರಿ ಆರಿಸಿದರೆ 300ರಿಂದ 400 ರೂ. ವರೆಗೆ ಸಿಗುತ್ತಿತ್ತು. ಎಷ್ಟು ಕಷ್ಟವಾದರೂ ಮಕ್ಕಳನ್ನು ಓದಿಸಬೇಕು ಎನ್ನುವ ಹಂಬಲ ಇತ್ತು. ಹಣದ ಸಮಸ್ಯೆ ಆದಾಗ ಅಪ್ಪ ಶಾಲೆ ಬಿಡಿಸಲು ಹೇಳಿದ್ದರು. ಆದರೆ ನಾನು ಬೇರೆಯವರ ಮನೆಯಲ್ಲಿ ಜೀತ ಮಾಡಿಯಾದರೂ ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಶಿಕ್ಷಣ ನೀಡುತ್ತೇನೆ ಎಂದಿದ್ದೆ. ಈಗ ದೇವರು ಕಣ್ಣು ಬಿಟ್ಟಿದ್ದಾರೆ. ನಾವು ಪಟ್ಟ ಶ್ರಮಕ್ಕೆ ಫಲ ಸಿಕ್ಕಿದೆ.– ಸುಮಿತ್ರಾ ಪವಾರ, ರವಿ ಪವಾರ ತಾಯಿ ಇಪ್ಪತ್ತು ವರ್ಷಗಳಿಂದ ಅಪ್ಪ, ಅಮ್ಮ ಕಷ್ಟ ಪಟ್ಟದನ್ನು ಕಂಡಿದ್ದೇನೆ. ಅವರೊಂದಿಗೆ ನಾನೂ ದುಡಿದಿದ್ದೇನೆ. ಪೊಲೀಸ್ ಇಲಾಖೆಗೆ ಸೇರಿದ ದಿನವೇ ಅಪ್ಪ, ಅಮ್ಮನನ್ನು ಕೆಲಸಕ್ಕೆ ಕಳುಹಿಸುವುದನ್ನು ನಿಲ್ಲಿಸಿದ್ದೇನೆ. ಅವರಿಗೆ ನೆಮ್ಮದಿಯ ಜೀವನ ನೀಡುವುದೇ ನನ್ನ ಆದ್ಯ ಕರ್ತವ್ಯ.
– ರವಿ ಪವಾರ ಪಿಎಸ್‌ಐ,ಕೊಣಾಜೆ ಪೊಲೀಸ್ ಠಾಣೆ