Advertisement
ಟ್ರಸ್ಟ್‌ನ ವತಿಯಿಂದ ಆಯೋಜಿಸಿದ್ದ ಮಾಜಿ ಮೇಯರ್ ಕುಳಾಯಿ ದೇವಣ್ಣ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯ ಬದುಕನ್ನು ಅಳವಡಿಸಿಕೊಂಡಿದ್ದ ದೇವಣ್ಣ ಶೆಟ್ಟಿ ಅವರು ಮೇಯರ್ ಆಗಿ, ಗ್ರಾ.ಪಂ. ಅಧ್ಯಕ್ಷರಾಗಿ ಮಾಡಿರುವ ಜನಪರ ಕೆಲಸ ಜನಮನದಲ್ಲಿ ಇಂದು ಶಾಶ್ವತವಾಗಿ ಉಳಿದಿದೆ ಎಂದರು.
ಜು. 14ರಂದು ಪಡು ಚಿತ್ತರಂಜನ್ ರೈ ನೇತೃತ್ವದಲ್ಲಿ ಪಡು ಬೊಂಡಂತಿಲದಲ್ಲಿ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಮರಿಯಲದ ಮಿನದನ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳ ಅಂತಿಮ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು. ಕದ್ರಿ ನವನೀತ ಶೆಟ್ಟಿ, ಕಮಲಾಕ್ಷ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಸಿತಾರಾಮ ಶೆಟ್ಟಿ, ಆನಂದ ಶೆಟ್ಟಿ, ರೂಪಶ್ರೀ ಶೆಟ್ಟಿ, ಸೌಮ್ಯಾ ಶೆಟ್ಟಿ, ಸುನೀತಾ ಶೆಟ್ಟಿ, ವತ್ಸಲಾ ಮಲ್ಲಿ, ಆರತಿ ಆಳ್ವ, ಶಿವರಾಮ ಶೆಟ್ಟಿ, ರಾಕೇಶ್ ಪೂಂಜ, ಸುನೀಲ್ ಶೆಟ್ಟಿ, ರಾಮಚಂದ್ರ ಆಳ್ವ, ಹರೀಶ್ ಶೆಟ್ಟಿ, ದೇವಿಪ್ರಸಾದ್ ಅಜಿಲ, ನಾಗೇಶ್ ಶೆಟ್ಟಿ, ಜೀತೇಂದ್ರ ಶೆಟ್ಟಿ, ಎಂ.ಸಿ. ಶೆಟ್ಟಿ, ಪ್ರಸಾದ್ ರೈ ಕಲ್ಲಿಮಾರ್, ಶ್ರೀನಾಥ್ ರೈ, ರತನ್ ಶೆಟ್ಟಿ, ನಿತಿಶ್ ಎಕ್ಕಾರ್, ಸತ್ಯ ಪ್ರಕಾಶ್ ಶೆಟ್ಟಿ, ಮೂಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಸಂಘಟನ ಕಾರ್ಯದರ್ಶಿ ರಾಜ ಗೋಪಾಲ ರೈ ಅವರು ಸ್ವಾಗತಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯ ಲಕ್ಷ್ಮೀ ಬಿ. ಶೆಟ್ಟಿ ಅವರು ವಂದಿಸಿದರು. ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಅವರು ಕಾರ್ಯ ಕ್ರಮ ನಿರ್ವಹಿಸಿದರು.