Advertisement
ಎಷ್ಟು ಸಮಯ ಬೇಕು?ಈ ಕಾರಣ ತುರ್ತಾಗಿ ಔಷಧ ಕಂಡುಹಿಡಿಯಬೇಕಾದ ಒತ್ತಡ ದಲ್ಲಿ ಸಂಶೋಧಕ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಔಷಧ ಸಂಶೋಧಕರಿಗೆ ಸವಾ ಲಾಗಿರುವುದು ಅತಿ ಕಡಿಮೆ ಸಮಯದಲ್ಲಿ ಔಷಧ ಕಂಡುಹಿಡಿಯಬೇಕಿರುವುದು ಮತ್ತು ದೊಡ್ಡ ಜನಸಂಖ್ಯೆಯಲ್ಲಿ ಔಷಧ ಪ್ರಯೋಗಿಸಿದಾಗ ಅದರ ಪರಿಣಾಮವೇನೆಂದು ತಿಳಿಯುವುದು. ಕೋವಿಡ್ ಬಗ್ಗೆ ಈಗ ಹೆಚ್ಚಿನ ಸಂಶೋಧನೆಗಳು ನಡೆದರೂ ಅದರ ಪ್ರತಿಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ, ಪ್ರದೇಶವಾರು ಭಿನ್ನವಾಗಿದೆ. ಸಂಶೋಧಕರ ಪ್ರಕಾರ ಕೋವಿಡ್‌ಗೆ ಔಷಧ ಕಂಡುಹಿಡಿಯಲು 1 ವರ್ಷ ಅಥವಾ 18 ತಿಂಗಳು ಬೇಕಾಗುತ್ತದೆ. ಆದರೆ ನಿರ್ದಿಷ್ಟ ಸಾಂಕ್ರಾಮಿಕ ಕಾಯಿಲೆಯ ಸಮಯವಲ್ಲ ಎಂದಾದರೆ ಔಷಧ ಕಂಡುಹಿಡಿಯಲು 10 ವರ್ಷಗಳೇ ತಗುಲಬಹುದು. ಸದ್ಯ ಹಲವಾರು ತಂಡಗಳು ಕೋವಿಡ್‌ಗೆ ಔಷಧ ಕಂಡುಹಿಡಿಯುವತ್ತ ಕೆಲಸಗಳನ್ನು ಮಾಡುತ್ತಿವೆ. ಕೆಲವೊಂದು ಔಷಧಗಳನ್ನು ಪ್ರಯೋಗಿಸುವ ಹಂತದವರೆಗೆ ಬಂದಿವೆ. ಆದರೆ ಈ ವಿಚಾರದಲ್ಲಿ ಹೆಚ್ಚೆಚ್ಚು ಪ್ರಯೋಗಗಳನ್ನು ಮಾಡಬೇಕಿರುತ್ತದೆ. ಹಾಗಾದಾಗಲೇ ಔಷಧ ಪರಿಣಾಮ ಅಧ್ಯಯನ ಮತ್ತು ಕೋವಿಡ್ ವಿರುದ್ಧ ಕೆಲಸ ಮಾಡುವುದರ ಬಗ್ಗೆ ದತ್ತಾಂಶ ಸಂಗ್ರಹಿಸಲು ಸಾಧ್ಯ.
ಲ್ಯಾಬ್‌ನ ಹಂತದಲ್ಲಿ, ಜನ ಸಮೂಹದಲ್ಲಿ ಉಪಯೋಗಿಸುವ ವೇಳೆ ಅದರ ಸುರಕ್ಷತೆ, ಪರಿಣಾಮಕಾರಿ, ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡಬೇಕು. ಇದರೊಂದಿಗೆ ಸದ್ಯ ಕೋವಿಡ್‌ಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹೊಸ ತಲೆಮಾರಿನ ಎಮ್‌ಆರ್‌ಎನ ಔಷಧಗಳ ಸಂಶೋಧನೆಗಳೂ ಪ್ರಗತಿಯಲ್ಲಿವೆ. ವೈರಸ್‌ಗಳು ಜನ ಸಮೂಹದಲ್ಲಿ ತಿರುಗು ತ್ತಲೇ ಇದ್ದಾಗ ಔಷಧ ಶೋಧನೆ ಮಾರ್ಗವೂ ಸುಲಭ.
ಇದರೊಂದಿಗೆ ಔಷಧ ಪ್ರಯೋಗದ ವೇಳೆ ಆರೋಗ್ಯವಂತ ವ್ಯಕ್ತಿಗೆ ಅದು ಬೀರುವ ಪರಿಣಾಮ ಮತ್ತು ರೋಗ ಪೀಡಿತ ವ್ಯಕ್ತಿಯ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ದತ್ತಾಂಶ ಸಂಗ್ರಹಿಸಬೇಕಿರುತ್ತದೆ. ಇಂತಹ ಪ್ರಯೋಗಗಳು ಹಲವು ಹಂತಗಳು ಮತ್ತು ವ್ಯತ್ಯಾಸಗಳನ್ನು ಹೊಂದಿವೆ. ಹೊಸ ತಲೆಮಾರಿನ ಔಷಧಗಳನ್ನು ರೋಗ ತಡೆಗಾಗಿ ಬಳಸುವುದೂ ಇದ್ದು, ಈ ಹಿನ್ನೆಲೆಯಲ್ಲೂ ಔಷಧ ಎಷ್ಟು ಪರಿಣಾಮಕಾರಿ ಎಂದು ನೋಡಬೇಕಾಗಿರುತ್ತದೆ. ಸದ್ಯದ ಹೊಸ ಔಷಧ ತಯಾರಾದರೂ ಎಲ್ಲರ ಮೇಲೆ ಪ್ರಯೋಗ ಮಾಡಲು, ಪರಿಣಾಮ ದಾಖಲಿಸಿ ಕೊಳ್ಳಲು ಕಷ್ಟವಾಗು ತ್ತದೆ. ಆದ್ದರಿಂದ ವಿಶ್ವದ ವಿವಿಧೆಡೆ ನಡೆಯುತ್ತಿರುವ ಸಂಶೋಧನೆ ಗಳು ಫಲ ನೀಡಲಿ ಎಂದೇ ಆಶಿಸಬೇಕಾಗುತ್ತದೆ. ಇದರಿಂದ ಆಯಾ ಭಾಗದ ಮನುಷ್ಯರ ಮೇಲೆ ಪರಿಣಾಮ ಬೀರುವ ವಿವಿಧ ಔಷಧಗಳು ತಯಾರಾಗಿ, ವರ್ಷ ಅಥವಾ ತಿಂಗಳ ಬಳಿಕ ಹೊಸ ಔಷಧ ಅಥವಾ ತಡೆ ಔಷಧ ಹುಟ್ಟಲು ಕಾರಣವಾಗಬಹುದು ಎನ್ನುತ್ತಾರೆ ಸಂಶೋಧಕರು.
Related Articles
ಇತ್ತ ಭಾರತದಲ್ಲೂ ಕೋವಿಡ್ ವಿರುದ್ಧ ಔಷಧ ಕಂಡುಹಿಡಿಯುವ ಹಲವು ಪ್ರಯತ್ನಗಳು ನಡೆದಿವೆ. ಆಯುರ್ವೇದದಲ್ಲಿ ಹೇಳುವ ಅಶ್ವಗಂಧ ಕೋವಿಡ್‌ನಂತಹ ವೈರಸ್‌ಗಳಿಗೆ ಪರಿಣಾಮಕಾರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ದಿಲ್ಲಿ ಐಐಟಿಯ ದೈಲ್ಯಾಬ್ ಮತ್ತು ಜಪಾನ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಇಂಡಸ್ಟ್ರಿಯಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಸಂಶೋ ಧಕರು ಹೇಳುತ್ತಾರೆ. ಇದರಲ್ಲಿರುವ ಜೈವಿಕ ರಾಸಾಯನಿಕವು ಕೋವಿಡ್ ವೈರಾಣು ವಿರುದ್ಧ ಹೋರಾಡಬಲ್ಲ ಶಕ್ತಿ ಹೊಂದಿದೆ. ಇದನ್ನು ಬಳಸಿಕೊಂಡು ಹೊಸ ಮಾದರಿಯ ಔಷಧ ಕಂಡುಹಿಡಿಲು ಯತ್ನಿಸಬಹುದು ಎಂದು ಹೇಳುತ್ತಾರೆ. ಇದರೊಂದಿಗೆ ಭಾರತದ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್‌ನ ತಂಡವೂ, ಅಶ್ವಗಂಧ ಪರಿಣಾಮಕಾರಿ ಔಷಧ ಆಗಬಲ್ಲದು ಎಂದು ಹೇಳುತ್ತದೆ. ಜತೆಗೆ ಆಯುರ್ವೇದದಲ್ಲಿ ಹೇಳುವ ಹಲವು ಗಿಡಮೂಲಿಕೆಗಳಲ್ಲಿ ಕೋವಿಡ್ ವೈರಾಣು ಮಣಿಸುವ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಂಗತಿಗಳಿದ್ದು, ಇವುಗಳು ಮಾನವನ ಜೀವಕೋಶ ವ್ಯವಸ್ಥೆಯನ್ನು ಬಲಯುತವಾಗಿಸುತ್ತದೆ ಎನ್ನುತ್ತಾರೆ.
Advertisement