ಮುಲ್ಲಾ ನಾಸಿರುದ್ದೀನನ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ತಮಾಶೆಯೊಳಗಿ ನಿಂದಲೇ ಅತ್ಯದ್ಭುತ ಪಾಠಗಳನ್ನು ಹೇಳುವ ಅವನ ಕಥೆಗಳನ್ನಾದರೂ. ಇದು ಅಂಥವುಗಳಲ್ಲಿ ಒಂದು.
Advertisement
ಸೂಫಿ ಸಂತನಾಗಿದ್ದರೂ ನಾಸಿರುದ್ದೀನನೂ ಮೃತ್ಯುವಿನ ಬಗ್ಗೆ ಅಪಾರ ಭಯ ಹೊಂದಿದ್ದ; ನಮ್ಮ ನಿಮ್ಮೆಲ್ಲರ ಹಾಗೆ.ಒಂದು ದಿನ ಅವನ ಊರಿನಲ್ಲಿ ಒಬ್ಬರು ಸತ್ತು ಹೋದರು. ಆ ಸುದ್ದಿ ನಾಸಿರುದ್ದೀನನ ಕಿವಿಗೆ ಬಿತ್ತು. ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಸಾವಿನ ಭೀತಿ ಎದ್ದೆದ್ದು ಕುಣಿಯಿತು. ಅವನು ಥರಗುಡುತ್ತ ಮನೆಗೆ ಬಂದು, “ನಾನು ಕೂಡ ಸಾಯುತ್ತೇನಲ್ಲ. ಆಗ ನನಗೆ ಅದು ತಿಳಿಯುವುದು ಹೇಗೆ? ಸಾವಿನ ಲಕ್ಷಣಗಳೇನು. ಅದು ಬಂದಿದೆ ಎಂಬುದು ಹೇಗೆ ಗೊತ್ತಾಗುತ್ತದೆ, ಹೇಳು’ ಎಂದೆಲ್ಲ ಬಡಬಡಿಸಿದ.
ತುಂಬ ಹೊತ್ತಾಯಿತು. ಮಧ್ಯಾಹ್ನ ವಾಯಿತು. ಅಷ್ಟು ಹೊತ್ತಿಗೆ ಅದೇ ದಾರಿಯಾಗಿ ಕೆಲವು ದಾರಿಹೋಕರು ಬಂದರು.
Related Articles
Advertisement
ನಾಸಿರುದ್ದೀನ ತನ್ನ ಷ್ಟಕ್ಕೇ ಯೋಚಿಸಿದ, “ಶ್ಮಶಾನ ಎಲ್ಲಿದೆ ಎಂದು ನನಗೆ ಗೊತ್ತಿದೆ. ಆದರೆ ಸತ್ತವರು ಮಾತನಾಡು ವುದಿಲ್ಲ. ಅದು ನಿಯಮಕ್ಕೆ ವಿರುದ್ಧ. ಹಾಗಾಗಿ ಸುಮ್ಮನೆ ಇರುತ್ತೇನೆ.’
ದಾರಿಹೋಕರು ಸಾಕಷ್ಟು ದೂರ ನಡೆದರೂ ಶ್ಮಶಾನ ಸಿಗಲಿಲ್ಲ. ನಾಸಿರು ದ್ದೀನ ಮೌನವಾಗಿ ಅವರ ಹೆಗಲ ಮೇಲೆ ಮಲಗಿದ್ದ. ಮುಸ್ಸಂಜೆಯಾಯಿತು. ರಾತ್ರಿಯೂ ಕಾಲಿರಿಸಿತು. “ಇನ್ನೇನು ಮಾಡುವುದಪ್ಪ’ ಎಂದು ದಾರಿಹೋಕರು ಮಾತಾಡಿಕೊಂಡರು. ಒಂದು ಕಡೆ ನಾಸಿರುದ್ದೀನನ್ನು ಇಳಿಸಿ ಸುಮ್ಮನೆ ಆಲೋಚಿಸುತ್ತ ನಿಂತುಕೊಂಡರು.
“ಛೆ, ಇವರು ಕಳವಳಕ್ಕೀಡಾಗಿದ್ದಾರಲ್ಲ. ನಾನು ಇವರಿಗೆ ಸಹಾಯ ಮಾಡ ಬಹುದು’ -ನಾಸಿರುದ್ದೀನ ಆಲೋಚಿ ಸಿದ. ಆದರೆ ಸತ್ತವರು ಸಹಾಯ ಮಾಡುವುದಿಲ್ಲವಲ್ಲ!
ರಾತ್ರಿ ಏರುತ್ತ ಬರುತ್ತಿತ್ತು. “ಈ ದೇಹವನ್ನು ಏನು ಮಾಡುವುದು? ಇವನ ಮನೆ ಎಲ್ಲಿ ಎಂಬುದೂ ತಿಳಿದಿಲ್ಲ. ಶ್ಮಶಾನವೂ ಸಿಗುತ್ತಿಲ್ಲ’ ಎಂದು ದಾರಿ ಹೋಕರು ಮಾತಾಡಿಕೊಂಡರು.
ನಾಸಿರುದ್ದೀನ ಮೆಲ್ಲಗೆ ಎದ್ದು ಕುಳಿತ. “ನಿಮಗೇನೂ ಅಭ್ಯಂತರ ಇಲ್ಲದಿದ್ದರೆ ಶ್ಮಶಾನದ ದಾರಿಯನ್ನು ನಾನು ತಿಳಿಸು ತ್ತೇನೆ. ಆದರೆ ನಿಯಮ ಪ್ರಕಾರ ಸತ್ತವರು ಮಾತಾಡಕೂಡದು. ನೀವು ನನಗೆ ಅವಕಾಶ ಕೊಟ್ಟರೆ ದಾರಿಯನ್ನು ನಾನು ಹೇಳುತ್ತೇನೆ, ಆ ಬಳಿಕ ಬಾಯಿ ಮುಚ್ಚಿ ಸುಮ್ಮನೆ ಇರುತ್ತೇನೆ’ ಎಂದ.
ನಿಜವಾಗಿಯೂ “ನಾನು’ ಇಲ್ಲ. ಇದೆ ಎಂದು ತಿಳಿದುಕೊಂಡು, ಅದಕ್ಕೆ ತಕ್ಕ ಚರ್ಯೆಗಳನ್ನು ರೂಢಿಸಿಕೊಂಡು ನಟಿಸುತ್ತಿದ್ದೇವೆ ಅಷ್ಟೆ.( ಸಾರ ಸಂಗ್ರಹ)