Advertisement

ಹಲವರ ಬಳಿ ನನ್ನ ಮೊಬೈಲ್ ನಂಬರ್ ಇದೆ, ಆದರೆ ಧೋನಿ ಮಾತ್ರ ಅಂದು ಮೆಸೇಜ್ ಮಾಡಿದ್ರು..: ಕೊಹ್ಲಿ

03:18 PM Sep 05, 2022 | Team Udayavani |

ದುಬೈ: ಸದ್ಯ ನಡೆಯುತ್ತಿರುವ ಏಷ್ಯಾಕಪ್ ಕೂಟದಲ್ಲಿ ಸತತ ಅರ್ಧ ಶತಕ ಸಿಡಿಸಿ ಫಾರ್ಮ್ ಗೆ ಮರಳುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ತಾನು ಅನುಭವಿಸುತ್ತಿದ್ದ ಮಾನಸಿಕ ಒತ್ತಡದ ಕುರಿತಾಗಿ ವಿರಾಟ್ ಹೇಳಿಕೊಂಡಿದ್ದಾರೆ.

Advertisement

ಕಳೆದ ಕೆಲವು ತಿಂಗಳಿನಿಂದ ತಾನನುಭವಿಸಿದ ಒತ್ತಡ, ರನ್ ಬರಗಾಲ, ಟೀಕೆಗಳು, ಸಲಹೆಗಳ ಕುರಿತಾಗಿ ವಿರಾಟ್ ಹೇಳಿಕೊಂಡಿದ್ದಾರೆ.

ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ್ದರು. ರೋಹಿತ್ ಶರ್ಮಾಗೆ ಸೀಮಿತ ಓವರ್ ಕ್ರಿಕೆಟ್ ನ ನಾಯಕತ್ವ ನೀಡಲಾಗಿತ್ತು. ಇದಾದ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ಬಳಿಕ ಅವರು ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದರು.

ರವಿವಾರದ ಪಾಕಿಸ್ಥಾನ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಅವರು, “ಒಂದು ವಿಚಾರ ಹೇಳಬೇಕು, ನಾನು ಟೆಸ್ಟ್ ನಾಯಕತ್ವ ಬಿಟ್ಟಾಗ ಈ ಹಿಂದೆ ನನ್ನ ಜೊತೆ ಆಡಿದವರ ಪೈಕಿ ಒಬ್ಬರು ಮಾತ್ರ ಮೆಸೇಜ್ ಮಾಡಿದ್ದರು. ಅದು ಮಹೇಂದ್ರ ಸಿಂಗ್ ಧೋನಿ. ತುಂಬಾ ಜನರ ಬಳಿ ನನ್ನ ಮೊಬೈಲ್ ನಂಬರ್ ಇದೆ. ತುಂಬಾ ಮಂದಿ ಟಿವಿ ಗಳಲ್ಲಿ ನನಗೆ ಸಲಹೆ ನೀಡುತ್ತಿದ್ದರು, ಆದರೆ ಧೋನಿ ಬಿಟ್ಟು ಯಾರೂ ಕಾಲ್ ಅಥವಾ ಮೆಸೇಜ್ ಮಾಡಿಲ್ಲ” ಎಂದಿದ್ದಾರೆ.

“ಒಬ್ಬರ ಬಗೆಗೆ ನಿಜವಾದ ಗೌರವ, ಒಲವು ಇದ್ದರೆ ಅದು ಈ ರೀತಿ ವ್ಯಕ್ತವಾಗುತ್ತದೆ. ನಮಗೆ ಯಾರ ಬಗೆಗಾದರೂ ಏನಾದರೂ ಹೇಳಲಿದ್ದರೆ ಅದನ್ನು ವೈಯಕ್ತಿಕವಾಗಿ ಹೇಳಬೇಕು. ನೀನು ಇಡೀ ಜಗತ್ತಿನ ಎದುರು ನಿಂತು ನಿಮ್ಮ ಸಲಹೆ ನೀಡಿದರೆ ಅದನ್ನು ನಾನು ಪರಿಗಣಿಸುವುದೇ ಇಲ್ಲ” ಎಂದು ಕೊಹ್ಲಿ ಹೇಳಿದ್ದಾರೆ.

Advertisement

ಇದನ್ನೂ ಓದಿ:ಸ್ಪೂಕಿ ಕಾಲೇಜ್‌ ನಲ್ಲಿ ಹೆಜ್ಜೆ ಹಾಕಿದ ರೀಷ್ಮಾ ನಾಣಯ್ಯ

ಜನರು ಅವರವರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅದು ಸರಿಯೇ, ಆದರೆ ಅದು ನನ್ನ ಮನಸ್ಥಿತಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾನು ಕೆಲವು ಸಮಯ ವಿಶ್ರಾಂತಿ ಪಡೆದಿದ್ದೆ. ಇದು ನನಗೆ ಒಂದು ರೀತಿಯ ರಿಲ್ಯಾಕ್ಸೇಶನ್ ಕೊಟ್ಟಿದೆ. ನಾನನು ಪಂದ್ಯವನ್ನು ಆನಂದಿಸಬೇಕು. ನನ್ನ ಮೇಲೆ ನಾನು ನಿರೀಕ್ಷೆಯ ಒತ್ತಡವನ್ನು ಹಾಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ವಿರಾಟ್, “ನಾನೀಗ ಮತ್ತೆ ಅದೇ ಉತ್ಸಾಹವನ್ನು ಕಂಡುಕೊಂಡಿದ್ದೇನೆ. ನಾನು ಬ್ರೇಕ್ ಮುಗಿಸಿ ಮರಳಿದಾಗ ತಂಡದ ಪರಿಸರ ಸ್ವಾಗತಾರ್ಹವಾಗಿತ್ತು. ಹುಡುಗರೊಂದಿಗಿನ ಸೌಹಾರ್ದತೆ ಚೆನ್ನಾಗಿದೆ. ಸದ್ಯದ ಮಟ್ಟಿಗೆ ಈ ತಂಡದಲ್ಲಿ ಆಡುವುದನ್ನು ಬಹಳಷ್ಟು ಇಷ್ಟ ಪಡುತ್ತಿದ್ದೇನೆ. ನನ್ನ ಬ್ಯಾಟಿಂಗ್ ಕುರಿತಾಗಿಯೂ ನನಗೆ ಖುಷಿಯಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next