Advertisement

ಮೋದಿ ಸ್ವಾತಂತ್ರ್ಯ ಭಾಷಣದ ವೇಳೆ ತೇಲಿ ಬಂದ ಕರಿ ಗಾಳಿಪಟ

04:23 PM Aug 15, 2017 | udayavani editorial |

ಹೊಸದಿಲ್ಲಿ : ಇಲ್ಲಿನ ಐತಿಹಾಸಿಕ ಕೆಂಪು ಕೋಟೆಯ ಮೇಲಿನಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದು ಸ್ವಾತಂತ್ರ್ಯ ದಿನದ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕಪ್ಪು ಗಾಳಿಪಟವೊಂದು ಹಾರಿ ಬಂದು ವೇದಿಕೆಯ ಕೆಳಭಾಗದಲ್ಲಿ ಬಿತ್ತು. ಪರಿಣಾಮವಾಗಿ ಮೋದಿ ಅವರ ಭಾಷಣಕ್ಕೆ ಕೊಂಚ ಕಾಲ ತಡೆ ಉಂಟಾಯಿತು. 

Advertisement

ಕಪ್ಪು ಗಾಳಿಪಟ ನಿಧಾನವಾಗಿ ತೇಲಿಕೊಂಡು ಬಂದು ವೇದಿಕೆಯ ಕೆಳಭಾಗದಲ್ಲಿ ಬಿತ್ತು; ಅದರಿಂದ ಏನೂ ತೊಂದರೆ, ಅಡಚಣೆ ಉಂಟಾಗಲಿಲ್ಲ; ಪ್ರಧಾನಿ ಮೋದಿ  ಒಂದಿನಿತೂ ವಿಚಲಿತರಾಗದೆ ನಿರಾತಂಕವಾಗಿ ತಮ್ಮ ಭಾಷಣವನ್ನು ಮುಂದುವರಿಸಿದರು ಎಂದು ಪಿಟಿಐ ವರದಿ ಮಾಡಿದೆ. 

ಪ್ರಧಾನಿ ಮೋದಿ ಅವರು ಸುಮಾರು 54 ನಿಮಿಷಗಳ ಕಾಲ ನಿರರ್ಗಳ ಭಾಷಣ ಮಾಡಿದರು. ಆದರೆ 2014ರ ಬಳಿಕದಲ್ಲಿ ಅವರು ಮಾಡಿರುವ ಕಡಿಮೆ ಅವಧಿಯ ಭಾಷಣವೆಂದು ಇದು ದಾಖಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next