Advertisement
ಆದರೆ, ನನ್ನ ಜೀವನದಲ್ಲಿ ಹಾಗೆ ಆಗಲಿಲ್ಲ. ನಾನು ಹುಟ್ಟಿದಾಗ ನನ್ನ ಅಪ್ಪ ನನ್ನನ್ನು ನೋಡಲೇ ಇಲ್ಲ. ನಾನು ಹುಟ್ಟಿ ನಾಲ್ಕು ದಿವಸವಾದರೂ ನನ್ನಪ್ಪ , “ಮಗು ಹೇಗಿದೆ? ಹೆಣ್ಣು ಮಗುವಾ? ಗಂಡು ಮಗುವಾ?’ ಅಂತಲೂ ಕೇಳಲೇ ಇಲ್ಲ. ಹೀಗೆ ಕೇಳದಿರಲೂ ಒಂದು ಕಾರಣವಿದೆ. ಅದೇನೆಂದರೆ, ನಾನು ಹುಟ್ಟುವ ಮೊದಲು ವೈದ್ಯರು ಹೇಳಿದ್ದರು, “ಒಂದೋ ಮಗು ಉಳಿಯುತ್ತೆ, ಇಲ್ಲಾಂದ್ರೆ ತಾಯಿ’ ಅಂತ. ಹೀಗಿರುವಾಗ ನಾನು ಹುಟ್ಟಿದಾಗ ನನ್ನನ್ನು ಮೊದಲು ವೈದ್ಯರು ಹೊರಗೆ ತಂದು ಮನೆಯವರಿಗೆ ತೋರಿಸಿ, ನನ್ನ ಅಮ್ಮನನ್ನು ಮಾತ್ರ ನೋಡಲು ಬಿಡಲಿಲ್ಲವಂತೆ. ಹಾಗಾಗಿ, ನನ್ನನ್ನು ಅಪ್ಪ ನೋಡಲಿಲ್ಲ ಅಂತ ಅನ್ನಿಸುತ್ತದೆ. ಅಮ್ಮನಿಗೆ ಹುಷಾರಿಲ್ಲದ ಕಾರಣ ಐಸಿಯುನಲ್ಲಿ ಇಟ್ಟಿದ್ದರಿಂದ ಅಮ್ಮನನ್ನು ತೋರಿಸಲಿಲ್ಲ. ಮತ್ತೆ ಅಮ್ಮ ಹುಷಾರಾದಾಗ ಎಲ್ಲವೂ ಸರಿ ಹೋಯಿತು. ಅಪ್ಪ ನನ್ನನ್ನು ನೋಡಿ ಖುಷಿ ಪಟ್ಟರು. ನನ್ನ ಅಪ್ಪನಿಗೆ ನಾನು ಮೂರನೆಯ ಮಗು. ನನಗೆ ಇಬ್ಬರು ಅಕ್ಕಂದಿರಿದ್ದಾರೆ. ನಾವು ಮೂವರೂ ಹೆಣ್ಣುಮಕ್ಕಳು. ಆದರೆ ಅಪ್ಪ ಎಂದೂ ಹೆಣ್ಣುಮಕ್ಕಳೆಂದು ಬೇಸರಿಸಿದವರಲ್ಲ. ನಮ್ಮನ್ನು ಗಂಡುಮಕ್ಕಳಂತೆಯೇ ಬೆಳೆಸಿದ್ದಾರೆ.
Advertisement
ಒಂದು ಮಗು ಹುಟ್ಟಿದಾಗ ಒಬ್ಬ ಅಪ್ಪ ಹುಟ್ಟುತ್ತಾನೆ !
06:00 AM Jul 27, 2018 | |
Advertisement
Udayavani is now on Telegram. Click here to join our channel and stay updated with the latest news.