Advertisement

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

11:52 AM May 27, 2024 | Team Udayavani |

ನೆಲಮಂಗಲ: ನಗರ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಬೆಂಗಳೂರು ಯುವಕರು ವ್ಹೀಲಿಂಗ್‌ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದು ಸವಾರರು ಹೆದರುವ ಪರಿಸ್ಥಿತಿಯಿದೆ. ನಗರ ಸಮೀಪದ ಬೆಂಗಳೂರು-ತುಮಕೂರು ಹಾಗೂ ನೆಲಮಂಗಲ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್‌ ಮಾಡುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ.

Advertisement

ಕೆಲವರು ಹಗಲಿನಲ್ಲಿಯೇ ವ್ಹೀಲಿಂಗ್‌ ಮಾಡಿದರೆ, ಇನ್ನೂ ಕೆಲವರು ರಾತ್ರಿ 11ಗಂಟೆಯ ನಂತರ ವ್ಹೀಲಿಂಗ್‌ ಮಾಡುತ್ತಿದ್ದಾರೆ. ಇದರಿಂದ ಬೈಕ್‌, ಕಾರು, ಲಾರಿ, ಬಸ್‌ಗಳು ಸಂಚಾರ ಮಾಡಲು ಬಹಳಷ್ಟು ಸಂಕಷ್ಟ ಎದುರಾಗುತ್ತಿದೆ. ವ್ಹೀಲಿಂಗ್‌ ಮಾಡಿ ವಿಡಿಯೋ ಮಾಡುತ್ತಾರೆ: ವಿಡಿಯೋ ಮಾಡುವ ಸಾರ್ವಜನಿಕರಿಗೆ ಹೆದರಿಸುವ ಹಾಗೂ ವಿಕ್ಟರಿ ಸಿಂಬಲ್‌ ತೋರಿಸುವುದು, ಮಾರಕಾಸ್ತ್ರಗಳನ್ನು ಕೈನಲ್ಲಿ ಹಿಡಿದು ಬರುವುದು ಸೇರಿದಂತೆ ಅನೇಕ ಕಾನೂನು ಬಾಹಿರ ಕೆಲಸಗಳನ್ನು ವ್ಹೀಲಿಂಗ್‌ ಮಾಡುವ ಪುಂಡರು ಮಾಡುತ್ತಿದ್ದಾರೆ. ಮೇ 25ರ ರಾತ್ರಿ ಬೆಂಗಳೂರಿನ ನಂದಿನಿ ಲೇಔಟ್‌ನ ಲಕ್ಷ್ಮೀದೇವಿನಗರದ ವ್ಹೀಲಿಂಗ್‌ ಪುಂಡರು ನೆಲಮಂಗಲ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್‌ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪೊಲೀಸರ ಭಯವಿಲ್ಲ: ವ್ಹೀಲಿಂಗ್‌ ಮಾಡಿದ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ವೈರಲ್‌ ಮಾಡುತ್ತಿದ್ದು ಪೊಲೀಸರು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬಂತೆ ವರ್ತನೆ ತೋರುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಾಹನದ ನಂಬರ್‌ ಪ್ಲೇಟ್‌ಗಳಿಲ್ಲದೇ ತಪ್ಪಿಸಿಕೊಳ್ಳುತ್ತಿದ್ದಾರೆ: ಬೈಕ್‌ನಲ್ಲಿ ನಂಬರ್‌ ಪ್ಲೇಟ್‌ಗಳಿಲ್ಲದ ಕಾರಣ ಕೆಲವರು ತಪ್ಪಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅನೇಕರನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದೆರಡು ದಿನ ಪೊಲೀಸರು ಹೆದ್ದಾರಿ ಗಸ್ತು ಕಡಿಮೆ ಮಾಡಿದ ಹಿನ್ನೆಲೆ ವ್ಹೀಲಿಂಗ್‌ ಹೆಚ್ಚಾಗಿದೆ. ಈಗಾಗಾಲೇ ಕ್ರಮವಹಿಸಿದ್ದು ಸಂಪೂರ್ಣ ಬಂದ್‌ ಮಾಡಲು ತಯಾರಿ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಸ್ಪೆಕ್ಟರ್‌ ಕುಮಾರ್‌ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next