ಹೊಸದಿಲ್ಲಿ: ಎಲ್‌ಐಸಿ ತನ್ನ ಪಾಲಿಸಿದಾರರಿಗೆ 24 ಗಂಟೆ ಕಾಲ ಸೇವೆ ಒದಗಿಸುವ ನಿಟ್ಟಿನಲ್ಲಿ ಚಾಟ್‌ಬೋಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇನ್ನು ಮುಂದೆ ವಾಟ್ಸ್‌ಆ್ಯಪ್ ಮೂಲಕ ಪಾಲಿಸಿದಾರರು ಎಲ್‌ಐಸಿ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.
ಬಳಕೆದಾರರು ತಾವು ಎಲ್‌ಐಸಿಯಲ್ಲಿ ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಯಿಂದ 89768 62090ಗೆ ಹಾಯ್ ಎನ್ನುವ ಸಂದೇಶ ಕಳಿಸುವ ಮೂಲಕ ಚಾಟ್‌ಬೋಟ್ ಅನ್ನು ಸಕ್ರಿಯಗೊಳಿಸಿಕೊಳ್ಳಬಹುದು.
ಆ ಬಳಿಕ ವಿಮೆಗೆ ಸಂಬಂಧಿಸಿದ ವಿವರ, ಪ್ರೀಮಿಯಂ ಬಾಕಿ ದಿನಾಂಕ, ಸಾಲದ ಬಡ್ಡಿ ಅಂತಿಮ ದಿನಾಂಕದ ಸೂಚನೆಗಳು, ಪಾವತಿಸಿರುವ ಪ್ರೀಮಿಯಂಗಳ ವರದಿ ಸಹಿತ ವಿವಿಧ ಸೇವಾ ವಿವರಗಳನ್ನು ಚಾಟ್‌ಬೋಟ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ. ಈ ಆಯ್ಕೆ ಸರಳ ಹಾಗೂ ಸುರಕ್ಷಿತವಾಗಿದೆ ಎಂದು ಎಲ್‌ಐಸಿ ಹೇಳಿದೆ.