Advertisement

ಸ್ಟೇಟಸ್‌ನಲ್ಲಿ ಧ್ವನಿ ಸಂದೇಶ; ವಾಟ್ಸ್‌ಆ್ಯಪ್‌ನಿಂದ ಹೊಸ ಫೀಚರ್‌ ಅಭಿವೃದ್ಧಿ

05:37 PM Nov 26, 2022 | Team Udayavani |

ಬಳಕೆದಾರರ ಅನುಕೂಲಕ್ಕಾಗಿ ಹಲವು ಹೊಚ್ಚ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿರುವ ವಾಟ್ಸ್‌ಆ್ಯಪ್‌ ಈಗ ಮತ್ತೊಂದು ಫೀಚರ್‌ ಹೊರತರಲು ಸಿದ್ಧತೆ ನಡೆಸಿದೆ.

Advertisement

ಈಗ ಬಳಕೆದಾರರು ತಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಮಾತ್ರ ಶೇರ್‌ ಮಾಡಲು ಅವಕಾಶವಿದೆ.

ಇನ್ನು ಮುಂದೆ, ನಿಮ್ಮ ವಾಯ್ಸ ನೋಟ್‌(ಧ್ವನಿ ಸಂದೇಶ)ಗಳನ್ನೂ ಸ್ಟೇಟಸ್‌ಗೆ ಅಪ್‌ಲೋಡ್‌ ಮಾಡಲು ಸಾಧ್ಯವಾಗುವಂಥ ಫೀಚರ್‌ವೊಂದನ್ನು ಕಂಪನಿ ಅಭಿವೃದ್ಧಿಪಡಿಸುತ್ತಿದೆ.

ಇದು ಯಶಸ್ವಿಯಾದರೆ, ಒಟ್ಟಾರೆ 30 ಸೆಕೆಂಡುಗಳ ಅವಧಿಯ ಧ್ವನಿ ಸಂದೇಶಗಳನ್ನು ನೀವು ಸ್ಟೇಟಸ್‌ಗೆ ಹಾಕಬಹುದು. ಸಂದೇಶ ಬರೆಯುವಂಥ ಸ್ಥಳದಲ್ಲಿರುವ ಮೈಕ್ರೋಫೋನ್‌ ಐಕಾನ್‌ ಅನ್ನು ಟ್ಯಾಪ್‌ ಮಾಡುವ ಮೂಲಕ ಧ್ವನಿ ಸಂದೇಶವನ್ನು ಸ್ಟೇಟಸ್‌ಗೆ ಅಪ್‌ಲೋಡ್‌ ಮಾಡಬಹುದು ಎಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next