ವಾಷಿಂಗ್ಟನ್: ವಾಟ್ಸ್‌ಆ್ಯಪ್ ಸಂಸ್ಥೆಯು ತನ್ನ ಗ್ರೂಪ್‌ಗ್ಳ ಸದಸ್ಯರ ಸಂಖ್ಯೆಯನ್ನು ದುಪ್ಪಟ್ಟು ಮಾಡುವುದಾಗಿ ಹೇಳಿದ ಬೆನ್ನಲ್ಲೇ ಅದಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪ್‌ಡೇಟ್ ಹೊರತರಲು ಸಿದ್ಧತೆ ನಡೆಸಿಕೊಳ್ಳುತ್ತದೆ.
Advertisement
ಗುಂಪಿನ ಸದಸ್ಯರ ಸಂಖ್ಯೆ ಒಂದು ನಿರ್ದಿಷ್ಟ ಮಿತಿಯನ್ನು ದಾಟಿದ ನಂತರ ಆ ಗ್ರೂಪ್‌ನ ಸದಸ್ಯರಿಗೆ ಗ್ರೂಪ್ ಸ್ವಯಂಚಾಲಿತವಾಗಿ ಮ್ಯೂಟ್ ಆಗಲಿದೆ.
ದೊಡ್ಡ ಗುಂಪಿನ ಸದಸ್ಯರಿಂದ ಬರುವ ನೂರಾರು ಸಂದೇಶಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡದಿರಲಿ ಎನ್ನುವ ಕಾರಣಕ್ಕೆ ಸಂಸ್ಥೆ ಈ ರೀತಿ ತಾನೇ ಮ್ಯೂಟ್ ಮಾಡುವುದಕ್ಕೆ ಮುಂದಾಗಿದೆ.
ಇದನ್ನೂ ಪರೀಕ್ಷಾ ಹಂತದಲ್ಲಿದ್ದು, ಕೆಲ ದಿನಗಳಲ್ಲಿ ಬಳಕೆಗೆ ಬರುವ ಸಾಧ್ಯತೆಯಿದೆ.