ನವ ದೆಹಲಿ : ನಿಮ್ಮ ವಾಟ್ಸ್ಯಾಪ್ ನಲ್ಲಿ ಡಿಲೀಟ್ ಆಗಿರುವ ಮೆಸೆಜ್ ಅಥವಾ ಡಾಕ್ಯುಮೆಂಟ್ ಗಳನ್ನು ಮತ್ತೆ ತೆಗೆದು ಓದಬಹುದಾಗಿದೆ. ಅರೇ… ಏನ್ ಹೇಳ್ತಿದ್ದೀರಿ ಅಂತ ಆಶ್ಚರ್ಯವಾಗಬೇಡಿ. ಹೌದು, ನಾವು ಹೇಳುತ್ತಿರುವ ವಿಷಯ ಶೇಕಡಾ 100 ರಷ್ಟು ಸತ್ಯ.
ಹೊಸದೊಂದು ತಂತ್ರಗಾರಿಕೆಯ ಮೂಲಕ ಡಿಲೀಟ್ ಆಗಿರುವ ಮೆಸೆಜ್ ಅಥವಾ ಡಾಕ್ಯುಮೆಂಟ್ ಗಳನ್ನು ಮತ್ತೆ ತೆಗೆಯಬಹುದಾಗಿದೆ. ಆದರೇ, ಇದು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಾಧ್ಯವಾಗುತ್ತದೆ, ಆದರೇ, ಮತ್ತೊಂದು ಅಪ್ಲಿಕೇಶನ್ ನ ಸಹಾಯ ಕೂಡ ಇದಕ್ಕೆ ಬೇಕಾಗುತ್ತದೆ.
ಡಿಲೀಟ್ ಆದ ಮೆಸೇಜ್ ನ್ನು ಹೇಗೆ ಓದುವುದು..?
–ಗೂಗಲ್ ಪ್ಲೇ ಸ್ಟೋರ್ ನಿಂದ whatsapp Removed+ ಅಪ್ಲಿಕೇಶನನ್ನು ಡೌನ್ ಲೋಡ್ ಮಾಡಿ.
Related Articles
–ಅಪ್ಲಿಕೇಶನ್ ನ ಸೆಟ್ಟಿಂಗ್ಸ್ ನ್ನು ಪೂರ್ಣಗೊಳಿಸಿ ಅನುಮತಿ ನೀಡಿ.
–ಯಾವ ಅಪ್ಲಿಕೇಶನ್ ನೋಟಿಫಿಕೇಶನ್ ನನ್ನು ಸೇವ್ ಮಾಡಬೇಕೋ ಅದನ್ನು ಸೆಲೆಕ್ಟ್ ಮಾಡಿ. ಅಂದರೇ, ವಾಟ್ಸ್ಯಾಪ್ ನೋಟಿಫಿಕೇಶನ್ ಸೇವ್ ಮಾಡಬೇಕಎಮದಿದ್ದರೇ, ವಾಟ್ಸ್ಯಾಪ್ ಮೇಲೆ ಕ್ಲಿಕ್ ಮಾಡಿ.
–NEXT ಆಯ್ಕೆಯನ್ನು ಒತ್ತಿರಿ
–ಇದಾದ ನಂತರ ಹೊಸ ಸ್ಕ್ರೀನ್ ತೆರೆದುಕೊಳ್ಳುತ್ತದೆ.ಸೇವ್ ಒತ್ತಿರಿ. ಸೇವ್ ಫೈಲ್ ಗೆ ಅನುಮತಿಸಿ.
–ಇಷ್ಟಾದ ಮೇಲೆ ಅಪ್ಲಿಕೇಶನ್ ಬಳಸಲು ಯೋಗ್ಯವಾಗುತ್ತದೆ. ಹಾಗೆಯೇ ನಿಮ್ಮ ಡಿಲೀಟ್ ಆದ ಮೆಸೇಜ್ ಗಳು ಹಾಗೂ ಡಾಕ್ಯುಮೆಂಟ್ಸ್ ಗಳು ಸಿಗುತ್ತದೆ.
ಓದಿ : ಆದಾನಿ ಕಂಪನಿಯಿಂದ ವಿದ್ಯುತ್ ಖರೀದಿ ನಿಲ್ಲಿಸಿ : ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ