ನವದೆಹಲಿ: ಮಾರ್ಕ್ ಜುಕರ್‌ಬರ್ಗ್ ಒಡೆತನದ ಮೆಟಾ ಕಂಪನಿಯು ತನ್ನ ವಾಟ್ಸ್‌ಆ್ಯಪ್ ಗ್ರಾಹಕರಿಗೆ ಹೊಸ ವೈಶಿಷ್ಯಗಳನ್ನು ಪರಿಚಯಿಸಿದೆ.
ಒಂದು ಗುಂಪಿನಲ್ಲಿ ಏಕಕಾಲಕ್ಕೆ 32 ಜನರು ವಿಡಿಯೊ ಕಾಲಿಂಗ್ ಮಾಡಬಹುದಾಗಿದೆ. ಜತೆಗೆ ಒಂದು ಗುಂಪಿನಲ್ಲಿ ಗರಿಷ್ಠ 1024 ಬಳಕೆದಾರರು ಇರಬಹುದಾಗಿದೆ. ಈ ಮೂಲಕ 1024 ಜನರನ್ನು ಒಳಗೊಂಡ ಸಮುದಾಯ ವಾಟ್ಸ್‌ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಬಹುದಾಗಿದೆ. ಇದರ ಜತೆಗೆ ಎಮೊಜಿ ರಿಯಾಕ್ಷನ್, ದೊಡ್ಡ ಫೈಲ್ ಶೇರ್ ಮಾಡುವುದು ಮತ್ತು ಸಂದೇಶ ಅಥವಾ ಪೋಟೋ, ವಿಡಿಯೊ ಅನ್ನು ಗ್ರೂಪ್ ಅಡ್ಮಿನ್ ಡಿಲೀಟ್ ಮಾಡಬಹುದಾದ ಸೌಲಭ್ಯ ಮುಂದುವರಿಯಲಿದೆ.
ಈ ಸೌಲಭ್ಯ ಪಡೆಯಲು ವಾಟ್ಸ್‌ಅಪ್ ಸಾಫ್ಟ್ವೇರ್ ಅಪಡೇಟ್ ಮಾಡಿಕೊಳ್ಳಬೇಕಾಗುತ್ತದೆ. ವಾಟ್ಸ್‌ಅಪ್ ಗ್ರೂಪ್‌ಗ್ಳನ್ನು ಹೆಚ್ಚು ಉಪಯುಕ್ತಗೊಳಿಸುವ ನಿಟ್ಟಿನಲ್ಲಿ 15 ದೇಶಗಳ 50ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಮೆಟಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.