Advertisement

ಯುವಕನ ಚಿಕಿತ್ಸಗೆ ಲಕ್ಷಕ್ಕೂ ಅಧಿಕ ಹಣದ ಸಹಾಯ ಹಸ್ತ ನೀಡಿದ ವಾಟ್ಸಾಪ್ ಗೆಳೆಯರು

09:53 AM Jun 08, 2021 | Team Udayavani |

ಬನಹಟ್ಟಿ : 26 ವರ್ಷದ ಯುವಕನೋರ್ವ ಅಪಘಾತದಲ್ಲಿ ತೀವ್ರ ಗಾಯಗೊಂಡ ಪರಿಣಾಮ ಬಾಗಲಕೋಟೆ ಆಸ್ಪತ್ರೆಯಲ್ಲಿ ಸಾವು ಗೆದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಆಗುವದಿತ್ತು. ಆದರೆ ಕಿತ್ತು ತಿನ್ನುವ ಬಡತನದಲ್ಲಿ ಕಿಂಚಿತ್ತೂ ದುಡ್ಡು ಇಲ್ಲದ ಕಾರಣ ವಾಟ್ಸಾಪ್ ಗುಂಪೊಂದು ಸಹಾಯಕ್ಕೆ ಧಾವಿಸಿದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿಯಲ್ಲಿ ನಡೆದಿದೆ.

Advertisement

ಹೌದು, ಕಳೆದ ತಿಂಗಳು ಮುಧೋಳದ ಬಸ್ ನಿಲ್ದಾಣ ಬಳಿ ಚೇತನ ಹೊಸಮನಿ(26 ವ) ಎಂಬ ಖಾಸಗಿ ಕಂಪನಿ ಉದ್ಯೋಗಿ ಬೈಕ್‌ ನಲ್ಲಿ ಸಂಚರಿಸುವ ಸಂದರ್ಭ ಅಪಘಾತದಲ್ಲಿ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಬಾಗಲಕೋಟೆ ಆಸ್ಪತ್ರೆಗೆ ಸಂಪೂರ್ಣ ಖರ್ಚು ಭರಿಸಲು ಸಾಧ್ಯವಾಗದ ಸಂದರ್ಭ ಆತನ ಗೆಳೆಯರು ಆರ್ಥಿಕ ಸಹಾಯ ಮಾಡಿದ್ದಾರೆ.

ಇನ್ನೂ 1.5 ಲಕ್ಷ ರೂ. ಹಣ ಒದಗಿಸುವುದು ಸಮಸ್ಯೆಯಾದಾಗ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗೋಣವೆಂದು ಹೇಳಿದ ಕೇವಲ ಮೂರು ಗಂಟೆಗಳಲ್ಲಿಯೇ ಒಂದು ಲಕ್ಷ ರೂ. ಕ್ಕೂ ಅಧಿಕ ಹಣವನ್ನು ಫೋನ್ ಪೇ ಹಾಗು ಗೂಗಲ್ ಪೇ ಮೂಲಕ ತಕ್ಷಣದಲ್ಲಿಯೇ ಖಾತೆಯೊಂದಕ್ಕೆ ಹಣ ಜಮಾ ಮಾಡಿ ನಂತರ ಆತನ ಕುಟುಂಬಕ್ಕೆ ಹಣ ಒದಗಿಸುವ ಮೂಲಕ ಮಾನವೀಯತೆಯನ್ನು ಮೆರೆಯುವಲ್ಲಿ ಸಾಮಾಜಿಕ ಜಾಲತಾಣ ಯಶಸ್ವಯಾಗಿರುವುದು ನಿಜಕ್ಕೂ ಶ್ಲಾಘನೀಯ.

ರಬಕವಿ-ಬನಹಟ್ಟಿ ಪಟ್ಟಣದ `ಮಾಧ್ಯಮ’ ನಾಮದಡಿ ವ್ಯಾಟ್ಸಾಪ್ ಸಮೂಹದ ಎಲ್ಲರೂ ಸೇರಿ ಸುಮಾರು ಒಂದುವರೆ ಲಕ್ಷದವರೆಗೆ ಹಣ ಸಂಗ್ರಹಿಸಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ತಂದೆ ಅಶೋಕ ಹೊಸಮನಿ ಅವರಿಗೆ ಸಲ್ಲಿಸಿ ಮಾನವೀಯತೆ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next