Advertisement

ಡಿಸ್‌ಎಪಿಯರ್‌ ಮೆಸೇಜ್‌ಸೇವ್‌ ಮಾಡಲು ಹೊಸ ಆಯ್ಕೆ

08:53 PM Jan 07, 2023 | Team Udayavani |

ನವದೆಹಲಿ : ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರಿಗಾಗಿ ಡಿಸ್‌ ಎಪಿಯಪ್‌ ಆಗುವ ಸಂದೇಶವನ್ನೂ ಸೇವ್‌ ಮಾಡುವ ಆಯ್ಕೆಯನ್ನು ನೀಡಲಿದೆ. ಅದು ಇನ್ನೂ ಪ್ರಯೋಗದ ಹಂತದಲ್ಲಿ ಇದ್ದು, ಶೀಘ್ರವೇ ಲಭ್ಯವಾಗಲಿದೆ. ಅದಕ್ಕೆ “ಕೆಪ್ಟ್’ ಎಂಬ ಹೆಸರನ್ನೂ ನೀಡಲಾಗಿದೆ.

Advertisement

ಕೆಲವೊಮ್ಮೆ ಬೇಕಿರುವ ಸಂದೇಶಗಳು ಡಿಲೀಟ್‌ ಆಗುತ್ತಿರುವ ಹಿನ್ನೆಲೆಯಲ್ಲಿ ಬಳಕೆದಾರರಿಗೆ ಬೇಕಿರುವ ಸಂದೇಶಗಳನ್ನು ಮಾತ್ರ ಸೇವ್‌ ಮಾಡಲು ಇದರಿಂದ ಸಾಧ್ಯವಾಗಲಿದೆ. ಸದ್ಯಕ್ಕೆ “ಡಿಸ್‌ ಎಪಿಯರ್‌’ ಎನ್ನುವ ಆಯ್ಕೆ ಇದ್ದು, ಚಾಟ್‌ ವಿಂಡೋದಲ್ಲಿ ಈ ಆಯ್ಕೆ ಅನುಸರಿಸಿ ಕಳುಹಿಸುವ ಸಂದೇಶಗಳು ನಿರ್ದಿಷ್ಟ ಅವಧಿಯ ಬಳಿಕ ಸ್ವಯಂಚಾಲಿತವಾಗಿ ಡಿಲೀಟ್‌ ಆಗುತ್ತವೆ .

ಕೆಪ್ಟ್ ಆಯ್ಕೆಯನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆಯಾದರೂ, ಇನ್ನೂ ಬಿಡುಗಡೆಗೊಳಿಸಲಾಗಿಲ್ಲ. ಆ ಆಯ್ಕೆಯಿಂದ ಡಿಸಪಿಯರ್‌ ಚಾಟಿಂಗ್‌ ಮೋಡ್‌ ಇದ್ದರೂ, ಸಂದೇಶಗಳು ಅವಧಿ ಮುಗಿದ ಬಳಿಕವೂ ಚಾಟ್‌ವಿಂಡೋನಲ್ಲಿ ಉಳಿದಿರುತ್ತವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next