Advertisement

ಟ್ಯಾಬ್‌ನಲ್ಲಿ ವಾಟ್ಸ್‌ಆ್ಯಪ್‌2 ಪ್ಯಾನೆಲ್‌ ಫೇಸ್‌ ಶೀಘ್ರ

06:23 PM Mar 05, 2023 | Team Udayavani |

ನವದೆಹಲಿ:ಮೆಸೇಜಿಂಗ್‌ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್‌ ತನ್ನ ಸೇವಾ ಚಟುವಟಿಕೆ ನವೀಕೃತಗೊಳಿಸುತ್ತಿದ್ದು, ಆ್ಯಂಡ್ರಾಯ್ಡ ಟ್ಯಾಬ್ಲೆಟ್‌ ಬಳಕೆದಾರರಿಗೆ 2 ಪ್ಯಾನೆಲ್‌ ಇಂಟರ್‌ಫೇಸ್‌ ಸೇವೆಯನ್ನು ಒದಗಿಸಲು ಸಜ್ಜಾಗಿದೆ.

Advertisement

ಈ ವರೆಗೆ ವಾಟ್ಸ್‌ಆ್ಯಪ್‌ನಲ್ಲಿ ಕಾಂಟ್ಯಾಕ್ಟ್,ಚಾಟ್‌ ಹಾಗೂ ಸ್ಟೇಟಸ್‌ ಎನ್ನುವ ಮೂರು ವಿಭಾಗವಿದ್ದವು. ಚಾಟ್ಸ್‌ ಫೇಸ್‌ನಲ್ಲಿ ಇರುವಾಗಲೇ ಕಾಂಟ್ಯಾಕ್ಟ್ಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ.

ಬ್ಯಾಕ್‌ಬಟನ್‌ ಮೂಲಕ ಮತ್ತೆ ಕಾಂಟ್ಯಾಕ್ಟ್ ಫೇಸ್‌ಗೆ ಹಿಂದಿರುಗಬಹುದಾಗಿತ್ತು. ಆದರೆ,ಇನ್ನು ಮುಂದೆ ಆ್ಯಂಡ್ರಾಯ್ಡ ಟ್ಯಾಬ್‌ಗಳಲ್ಲಿ 2 ಫೇಸ್‌ ಅಂದರೆ, ವಾಟ್ಸ್‌ಆ್ಯಪ್‌ ಓಪನ್‌ ಮಾಡಿದಾಗ ಡಿಸ್‌ಪ್ಲೇನ ಅರ್ಧಭಾಗದಲ್ಲಿ ಚಾಟ್‌ಫೇಸ್‌ ಮತ್ತರ್ಧದಲ್ಲಿ ಕಾಂಟ್ಯಾಕ್ಟ್ ತೋರುವಂತೆ ಏಕಕಾಲದಲ್ಲಿ 2 ಪ್ಯಾನೆಲ್‌ ಕಾರ್ಯನಿರ್ವಹಿಸಲು ಸಾಹಯವಾಗುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next