ನವದೆಹಲಿ: ಭಾರತದಲ್ಲಿ ಮೇ ತಿಂಗಳಲ್ಲಿ 19 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್‌ಆ್ಯಪ್ ಸಂಸ್ಥೆ ಶುಕ್ರವಾರ ವರದಿ ಕೊಟ್ಟಿದೆ.
Advertisement
2022ರ ಮೇ 1ರಿಂದ 31ರವರೆಗೆ 528 ಕುಂದು ಕೊರತೆ ಅರ್ಜಿಗಳು ಬಂದಿವೆ. ಅದರಲ್ಲಿ 303 ಅರ್ಜಿಗಳು ಖಾತೆ ನಿಷೇಧಿಸಲು ಕೋರಿ ಬಂದ ಅರ್ಜಿಗಳಾಗಿವೆ.
ಒಟ್ಟಾರೆಯಾಗಿ ಸಂಸ್ಥೆ 24 ಅರ್ಜಿಗಳ ಬಗ್ಗೆ ಕ್ರಮ ತೆಗೆದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಾಟ್ಸ್‌ಆ್ಯಪ್ ಸಂಸ್ಥೆಯು ಏಪ್ರಿಲ್‌ನಲ್ಲಿ 18 ಲಕ್ಷ ಭಾರತೀಯರ ವಾಟ್ಸ್‌ಆ್ಯಪ್ ಖಾತೆಗಳಿಗೆ ನಿಷೇಧ ಹೇರಿತ್ತು.
Related Articles
ಆ ತಿಂಗಳಲ್ಲಿ ಸಂಸ್ಥೆಗೆ 844 ಕುಂದು ಕೊರತೆ ಅರ್ಜಿಗಳು ಬಂದಿದ್ದವು.
Advertisement