Advertisement

ಚಂಪಾ ಭಾಷಣದಲ್ಲಿ ತಪ್ಪೇನಿದೆ: ಸಿಎಂ

08:33 AM Nov 29, 2017 | |

ಮೈಸೂರು: ಜಾತ್ಯತೀತ ಪಕ್ಷಕ್ಕೆ ಮತ ನೀಡಿ ಎಂದು ಪ್ರೊ.ಚಂದ್ರಶೇಖರ ಪಾಟೀಲರು ಹೇಳಿದ್ದರಲ್ಲಿ ತಪ್ಪೇನಿದೆ? ಎಂದು ಸಿಎಂ ಸಿದ್ದರಾಮಯ್ಯ ಅವರು ಚಂಪಾ ಭಾಷಣವನ್ನು ಸಮರ್ಥಿಸಿಕೊಂಡಿದ್ದಾರೆ. 

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಯವರಿಗೆ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲ. ಅದಕ್ಕೇ ಚಂಪಾ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ತಾವು ಕೋಮುವಾದಿಗಳು ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹರಿಹಾಯ್ದರು. ಮೈಸೂರು ರಾಜಮನೆತನದವರನ್ನು ಸಮ್ಮೇಳನಕ್ಕೆ ಕರೆಯಬೇಕಿದ್ದುದು ಕಸಾಪ ಜವಾಬ್ದಾರಿ. ಸಮ್ಮೇಳನಕ್ಕೆ ಸರ್ಕಾರ ಅನುದಾನ ಕೊಟ್ಟಿರುವುದನ್ನು ಬಿಟ್ಟರೆ, ಅದು ಸರ್ಕಾರಿ ಕಾರ್ಯಕ್ರಮ ಅಲ್ಲ ಎಂದರು.

ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಚರ್ಚೆಗಿಂತ ರಾಜಕೀಯ ಚರ್ಚೆಗಳೇ ಜೋರಾಗಿದ್ದವು. ಹೀಗಾಗಿ, ಅದನ್ನು ರಾಜಕೀಯ ಸಮ್ಮೇಳನ ಅನ್ನುವುದೇ ಸರಿ. 
 ●ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next