Advertisement
ಆ ಅಂಕಿ ಅಂಶಗಳನ್ನು ನೋಡಿ ದಂಗು ಬಡಿಯಿತು! ನಮ್ಮ ದೇಶದಲ್ಲಿ ಪ್ರತಿ ಗಂಟೆಗೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಾನಂತೆ! ಇದು ಯಾರೋ ಅಂದಾಜಿನಲ್ಲಿ ಬರೆದ ಲೆಕ್ಕ ವಲ್ಲ. ಸ್ವತಃ NCRB(National crime record bureau) ಹೊರಹಾಕಿದ ವರದಿಯ ಸತ್ಯ. ದೇಶಕ್ಕೆ ಆಸ್ತಿಯಾಗಬಲ್ಲ ಒಂದು ಜೀವ ಮಣ್ಣಾಗುತ್ತದೆ. ಒಂದು ಮನೆ ಅನಾಥವಾಗುತ್ತದೆ. ಪೋಷಕರ ಕನಸುಗಳು ನುಚ್ಚುನೂರಾಗುತ್ತವೆ.
Related Articles
ಕೈಗೆ ಏನು ಸಿಗಬಾರದೋ ಅವೆಲ್ಲ ಸಿಗುತ್ತಿವೆ. ಮೊಬೈಲ್ ಅವರ ಕೈಗೆ ಈಗ ಅನಾಯಾಸವಾಗಿ ಸಿಗುತ್ತಿದೆ. ಒಂದು ಪ್ಲೇಟ್ ಇಡ್ಲಿ ವಡೆಯ ಬೆಲೆಗೆ ಇಂಟರ್ನೆಟ್ ಸಿಗುತ್ತಿದೆ. ಕಾದು ಕುಳಿತ ಯೌವ್ವನ. ಇಷ್ಟು ಸಾಕಲ್ಲವೇ ಹಾದಿ ತಪ್ಪಲು? ಅಷ್ಟೇ ಅಲ್ಲದ ನಾವೇನು ಕಡಿಮೆ ಅಂತ ಟಿವಿ ಮಾಧ್ಯಮಗಳು, ಆಧುನಿಕ ವಿದ್ಯಮಾನಗಳು ಮಕ್ಕಳ ಹಾದಿ ತಪ್ಪಿಸುವಲ್ಲಿ ತಮ್ಮ ಪಾಲನ್ನು ನೀಡುತ್ತವೆ.
Advertisement
ಇನ್ನು ಈ ದೇಶದಲ್ಲಿ ಬಡತನ ಯಾವತ್ತಿಂದಲೂ ಅನೇಕರನ್ನು ಕಾಡುತ್ತಲೇ ಬಂದಿದೆ. ಬಡ ಕುಟುಂಬದಿಂದ ಶೈಕ್ಷಣಿಕ ಲೋಕಕ್ಕೆ ಬರುವ ಮಕ್ಕಳು ಸಾಕಷ್ಟು ನಿರೀಕ್ಷೆ ಹೊತ್ತುಕೊಂಡೆ ಬರುತ್ತವೆ.ಆದರೂ ಓದಲು ಅವರ ಆರ್ಥಿಕತೆ ಅವರಿಗೆ ಅಡ್ಡಗಾಲು ಹಾಕು ತ್ತದೆ. ಮನಸ್ಸು ಬಡತನ-ಶಿಕ್ಷಣದ ಒತ್ತಡದ ನಡುವೆ ಹೆಣಗ ಬೇಕಾ ಗುತ್ತದೆ. ಮನೆಯ ಜವಾಬ್ದಾರಿಗಳು, ಓದು, ಕೀಳರಿಮೆ…ಇವೆಲ್ಲದರ ಒತ್ತಡ ವಿದ್ಯಾರ್ಥಿಯನ್ನು ಹಿಂಡಿ ಹಾಕುತ್ತವೆ.
ಚಿಕ್ಕ ಚಿಕ್ಕ ವಿಷಯಗಳಿಗೆ ಸಾವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳ ಮನಸ್ಸನ್ನು ನಾವೆಷ್ಟು ನಾಜೂಕುಗೊಳಿಸುತ್ತಿದ್ದೇವೆ ಅನ್ನು ವುದು ಮುಖ್ಯ. ನಾವು ಬೆಳೆಸುವಲ್ಲಿ ಎಲ್ಲೋ ಎಡವಿದ್ದೇವೆ ಎಂಬುದು ಕೂಡ ಇದಕ್ಕೆಲ್ಲ ಒಂದು ಕಾರಣ. ಕಷ್ಟವೇ ಇಲ್ಲದಂತೆ ಬೆಳೆಸಿ, ಬೆಳೆದು ನಿಂತ ಮೇಲೆ ಒಂದೇ ಸಾರಿಗೆ ಕಷ್ಟದ ಸುರಿ ಮಳೆಯಾದರೆ ಅವರಾದರೂ ಹೇಗೆ ತಡೆದುಕೊಂಡಾರು? ನಾವು ಮಕ್ಕಳ ಮನಸ್ಸನ್ನು ದುರ್ಬಲಗೊಳಿಸುತ್ತಾ ಸಾಗಿದ್ದೇವೆ. ಅವರನ್ನು ಗಟ್ಟಿಗರನ್ನಾಗಿ ಮಾಡುವ, ಏನೇ ಬರಲಿ ಜಯಿಸುವೆ, ಇದಿಲ್ಲದಿದ್ದರೆ ಮತ್ತೂಂದು ಅನ್ನುವ ಮನೋಭಾವವನ್ನು ಅವ ರಲ್ಲಿ ಬಿತ್ತಲು ಸೋತಿದ್ದೇವೆ. ಶಿಕ್ಷಣ ಮತ್ತು ಅದು ಹಾಕಿ ಕೊಡುತ್ತಿರುವ ಮಾರ್ಗ ಯಾವುದೂ ಕೂಡ ವಿದ್ಯಾರ್ಥಿಯ ಸಹಾಯಕ್ಕೆ ಬರುತ್ತಿಲ್ಲ.
ವಿದ್ಯಾರ್ಥಿಗಳೇ…ಸಮಸ್ಯೆ ಏನೇ ಇರಲಿ, ಆತ್ಮಹತ್ಯೆ ಯಾವ ತ್ತಿಗೂ ಒಂದು ಪರಿಹಾರವಲ್ಲ. ಅದೊಂದು ಪರಿಹಾರವೇ ಆಗಿದ್ದರೆ ಇಂದು ಭೂಮಿಯ ಮೇಲೆ ಯಾರೂ ಇರುತ್ತಿರಲಿಲ್ಲ. ಜೀವನದಲ್ಲಿ ನೂರೊಂದು ಪರೀಕ್ಷೆ ಬರೆಯಬಹುದು. ಗೆಲುವು ಯಾವತ್ತೂ ಒಬ್ಬರ ಸ್ವತ್ತಲ್ಲ! ಶ್ರಮ ಪಟ್ಟವರ ಸ್ವತ್ತು. ಶ್ರಮ ಪಡಿ ಗೆಲುವು ಪಡೆಯಿರಿ. ಸೋಲುಗಳು ನಿಮ್ಮನ್ನು ಪರೀಕ್ಷೆ ಮಾಡಲು ಬರುತ್ತವೆ. ಅದರಲ್ಲಿ ಪಾಸಾಗಿ. ಪ್ರೀತಿ ಹೊರಟು ಹೋದರೆ ಹೋಗಲಿ ನಾಳೆ ಮತ್ತೆಲ್ಲೋ ಹೊಸ ಚಿಗುರು ಮೂಡುತ್ತದೆ. ಬದುಕು ಬಂಜೆಯಲ್ಲ, ಛಲವಿರುವವನ ಪಾಲಿಗೆ ಅದು ಕಾಮ ಧೇನು. ನಿಮಗೆ ಆತ್ಮಸ್ಥೈರ್ಯಬೇಕು. ಮನೆಯಲ್ಲಿ ಬಡತನ
ವಿದೆ ನಿಜ, ಆದರೆ ಆ ಬಡತನವನ್ನು ನೀವು ಸೋಲಿಸಬೇಕೆ ಹೊರೆತು ಅದು ನಿಮ್ಮನ್ನು ಸೋಲಿಸಬಾರದು. ಓದುವ ಸಮ ಯದಲ್ಲಿ ಮೊಬೈಲ್ ಹುಚ್ಚೇಕೆ? ಮಾಧ್ಯಮಗಳ ತೀವ್ರ ಅವಲಂಬನೆ ಏಕೆ? ಯಾವುದರಲ್ಲೇ ಆಗಲಿ ಒಳ್ಳೆಯದನ್ನು ಹಂಸದಂತೆ ಹೀರಿಕೊಳ್ಳಬೇಕು. ಸೆಟೆದು ನಿಂತರೆ ಸವಾಲುಗಳು ಸೋತು ನಿಮ್ಮ ಸೇವಕನಾಗುತ್ತವೆ. ಅಂತಹ ಅವಕಾಶಗಳಿದ್ದಾ ಗಿಯೂ ಬದುಕಿನಿಂದಲೇ ಓಡಿ ಹೋಗುವ ಹೇಡಿತನ ಬೇಡ.
ಸದಾಶಿವ್ ಸೊರಟೂರು, ಶಿಕ್ಷಕ