Advertisement

30ರಿಂದ 15 ಸೆಕೆಂಡುಗಳಿಗೆ ವಾಟ್ಸಪ್ ಸ್ಟೇಟಸ್ ಸೀಮಿತ

10:14 AM Mar 31, 2020 | sudhir |

ಮಣಿಪಾಲ: ಕೋವಿಡ್ 19 ವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 21 ದಿನಗಳ  ಲಾಕ್ ಡೌನ್ ನಿಂದಾಗಿ ವಾಟ್ಸಪ್ ಬಳಕೆದಾರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟಾರೆ ಬಳಕೆಯೂ ಹೆಚ್ಚಾಗಿದೆ. ಇದು ಸರ್ವರ್ ಗಳಲ್ಲಿ ಹೊರೆಯಾಗುತ್ತಿದೆ.

Advertisement

ಇದನ್ನು ನಿಗ್ರಹಿಸಲು ವಾಟ್ಸಾಪ್ ಸ್ಟೇಟಸ್ ವೀಡಿಯೊಗಳ ಸಮಯವನ್ನು ಸೀಮಿತಗೊಳಿಸಿದೆ. ಭಾರತದಲ್ಲಿ 30ರಿಂದ 15 ಸೆಕೆಂಡುಗಳಿಗೆ ಮಾತ್ರ ಅಪ್ಲೋಡ್ ಮಾಡಬಹುದು.

ಭಾರತೀಯ ಬಳಕೆದಾರರಿಗೆ ಜಾರಿಯಲ್ಲಿರುತ್ತದೆ. ಕೆಲವು ದಿನಗಳ ಹಿಂದೆಯಷ್ಟೇ ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್, ಕೋವಿಡ್ 19 ವೈರಸ್ ಸಾಂಕ್ರಾಮಿಕ ಪೀಡಿತ ದೇಶಗಳಲ್ಲಿ ವಾಟ್ಸಾಪ್ ವಿಡಿಯೋ ಕರೆಗಳಲ್ಲಿ ಭಾರಿ ಏರಿಕೆ ಕಾಣುತ್ತಿದೆ ಎಂದಿದ್ದರು. WABetaInfo ಪ್ರಕಾರ, ವೈರಸ್ ಹಾನಿ ಮುಗಿಯುವ ವರೆಗೆ ಇದು ಜಾರಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಬಳಿಕ ಮುಂದುವರೆಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ವಾಟ್ಸಾಪ್ ಇನ್ನೂ ಬಿಡುಗಡೆ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next