Advertisement

ಹೈದರಾಬಾದ್ ನಲ್ಲಿ ಬ್ಲಾಕ್ ಟಿಕೆಟ್ ಮಾರಾಟ?: ಅಜರುದ್ದೀನ್ ಹೇಳಿದ್ದೇನು?

10:38 PM Sep 23, 2022 | Team Udayavani |

 ಹೈದರಾಬಾದ್ : ಜನರು ಏನೇ ಹೇಳುತ್ತಿದ್ದರೂ ಅದು ಸುಳ್ಳಾಗಿದೆ, ನನ್ನ ಬಳಿ ಮಾರಾಟವಾದ ಎಲ್ಲಾ ಟಿಕೆಟ್‌ಗಳ ಪಟ್ಟಿ ಇದೆ. ಎಲ್ಲವನ್ನೂ ದಾಖಲಿಸಲಾಗಿದೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೆಷನ್ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಹೇಳಿಕೆ ನೀಡಿದ್ದಾರೆ.

Advertisement

ಹೈದರಾಬಾದ್ ನಲ್ಲಿ ಬ್ಲಾಕ್ ಟಿಕೆಟ್ ಮಾರಾಟ ಮಾಡಲಾಗಿರುವುದು ಘರ್ಷಣೆಗೆ ಕಾರಣವಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಮರೆಮಾಡಲು ಏನೂ ಇಲ್ಲ. ಟಿಕೆಟ್ ಸಮಸ್ಯೆಗೆ ಸಂಬಂಧಿಸಿದಂತೆ, ಬ್ಲಾಕ್ ಟಿಕೆಟ್ ಮಾರಾಟವಾಗಿದೆ ಎಂದು ಜನರು ಹೇಳುವುದು ತಪ್ಪು ಕಲ್ಪನೆ ಎಂದಿದ್ದಾರೆ.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25 ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಟಿ 20 ಪಂದ್ಯದ ಟಿಕೆಟ್ ಪಡೆಯಲು ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ ನಂತರ ಜಿಮ್ಖಾನಾ ಮೈದಾನದಲ್ಲಿ ಗುರುವಾರ ಕಾಲ್ತುಳಿತ ಸಂಭವಿಸಿತ್ತು. ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು .ಕನಿಷ್ಠ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next