Advertisement

ಕವಿ ಕಂಡದ್ದು, ಇತರರಿಗೂ ಕಾಣಬೇಕೆಂದಿಲ್ಲ: ಪ್ರೊ|ನಿಂಗಣ್ಣ

03:55 PM Aug 11, 2022 | Team Udayavani |

ಕಲಬುರಗಿ: ಯಾವುದು ದೃಢವಾಗಿರುತ್ತದೋ, ಯಾವುದು ಪ್ರತಿಫಲನ ಶಕ್ತಿ ಹೊಂದಿರುತ್ತದೆಯೋ ಮತ್ತು ಯಾವುದು ಪ್ರಕೃತಿದತ್ತವಾಗಿರುತ್ತದೋ ಅದು ಮಾತ್ರವೇ ಹಚ್ಚ ಹಸಿರಿನಿಂದ ಕೂಡಿ ತನ್ನೊಂದಿಗೆ ಇತರರನ್ನು ಹಸಿರಾಗಿಸಿ ಮಟ್ಟಸ ವಾಗಿಡುತ್ತದೋ ಅದು ಖುಷಿ ವಿಚಾರ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಇಂಗ್ಲಿಷ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ| ನಿಂಗಣ್ಣ. ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಹೊರವಲದಯಲ್ಲಿರುವ ಶ್ರೀನಿವಾಸ ಸರಡಗಿ ಚಿನ್ನದ ಕಂತಿ ಚಿಕ್ಕವಿರೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸ ಎಸ್‌.ಎಸ್‌. ಪಾಟೀಲರ ವಯೋನಿವೃತ್ತಿ ಪ್ರಯುಕ್ತ “ಬಿಸಿಲೂರಿನ ಹಸಿರು’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ಸಾಹಿತ್ಯ ಎರಡೂ ಬೇರೆಯಾಗಿವೆ. ವಿಜ್ಞಾನ ಎಂದರೆ ಒಂದು ವಿಷಯ, ವಸ್ತು ಮತ್ತು ಘಟನೆಯನ್ನು ಸಂಶೋಧನೆ ಮಾಡಿ ಅರ್ಥ ಮಾಡಿಕೊಳ್ಳುವುದು. ಸಾಹಿತ್ಯ ಹಾಗಲ್ಲ. ಅದು ಕವಿ ಕಂಡದ್ದು, ಅದು ಇತರರಿಗೂ ಕಾಣಬೇಕೆಂದಿಲ್ಲ. ಆದರೆ, ಅದನ್ನು ಆಸ್ವಾದಿಸಬಹುದು. ಊಹಾತ್ಮಕವೂ ಮತ್ತು ಅನುಭಾವಾತ್ಮಕವೂ ಇರಬಹುದು. ಅದು ತಿಳಿಯಬೇಕಷ್ಟೆ ಎಂದರು.

ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ಸಂಸ್ಕಾರ ನೀಡುವ ಯಾವುದಾದರೂ ಕಾಲೇಜು ಇದ್ದರೆ ಅದು ಶ್ರೀನಿವಾಸ ಸರಡಗಿಯ ಸರ್ಕಾರಿ ಪದವಿಪೂರ್ವ ಕಾಲೇಜು. ಪಾಟೀಲರು ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ. ಆದರೆ ಜೀವನದಿಂದ ನಿವೃತ್ತಿ ಆಗಿಲ್ಲ ಎಂದು ಹೇಳಿದರು.

ಶ್ರೀನಿವಾಸ ಸರಡಗಿಯ ಚಿನ್ನದ ಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ| ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಶಿಕ್ಷಕರು, ವಿದ್ಯಾರ್ಥಿಗಳನ್ನು ಸುಂದರ ಮೂರ್ತಿಯಾಗಿ ರೂಪಿಸಿ, ಅಕ್ಷರದೊಂದಿಗೆ ಸಂಸ್ಕಾರ ನೀಡಿ ಒಳ್ಳೆಯ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತಾರೆ ಎಂದು ಹೇಳಿದರು.

Advertisement

ನಿವೃತ್ತ ಪ್ರಾಂಶುಪಾಲ ವೈಜನಾಥ ಕೊಳಾರ ಮತ್ತು ವಯೋನಿವೃತ್ತಿ ಹೊಂದುತ್ತಿರುವ ಉಪನ್ಯಾಸಕ ಎಸ್‌. ಎಸ್‌.ಪಾಟೀಲ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಶೇಖರಯ್ಯ ರುಮಾಲ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ವಿದ್ಯಾರ್ಥಿಗಳಾದ ಜಲೀಲ್‌ ಮತ್ತು ಕಾಶಿಬಾಯಿ ಗುತ್ತೇದಾರ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಹಾಗೂ ವಿದ್ಯಾರ್ಥಿ ಸಂಘದ ಸಲಹೆಗಾರ ರಾಜೇಂದ್ರ ರಂಗದಾಳ ನಿರೂಪಿಸಿದರು. ಉಪನ್ಯಾಸಕಿ ಜ್ಯೋತಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಮಾಜಿ ವಿದ್ಯಾರ್ಥಿನಿ ನಾಗರತ್ನ ಪ್ರಾರ್ಥಿಸಿದರು. ಉಪನ್ಯಾಸಕ ಶಿವಶರಣಪ್ಪ ತಮ್ಮಗೋಳ ಸ್ವಾಗತಿಸಿದರು.

ಗುರೂಜಿ ಡಿಗ್ರಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ವೈದ್ಯರಾದ ಡಾ| ಪ್ರವೀಣ ಕಡಾಳೆ, ನಿವೃತ್ತ ಪ್ರಾಂಶುಪಾಲ ಕೆ . ಶರಣಪ್ಪ, ಡಾ| ಮಲ್ಲಿಕಾರ್ಜುನ ವಡ್ಡನಕೇರಿ, ನಿವೃತ್ತ ಪ್ರಾಂಶುಪಾಲ ಅನಂತರಾವ್‌ ಕುಲಕರ್ಣಿ, ಶ್ರಿನಿವಾಸ ಸರಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣಕುಮಾರ ಆಡೆ, ಮಾಜಿ ಅಧ್ಯಕ್ಷ ಸಂಗಯ್ಯ ಸ್ವಾಮಿ ಹಿರೇಮಠ, ಸಂತೋಷ ಆಡೆ, ನಂದ ಆಡೆ, ಚಂದ್ರಕಲಾ ಪಾಟೀಲ, ಡಾ| ಜಯಶ್ರೀ ಪಾಟೀಲ, ಪ್ರಿಯಾಂಕಾ ಪಾಟೀಲ, ಡಾ| ಸಾಗರ ಪಾಟೀಲ , ಮಹಾರುದ್ರ ಲಕ್ಕಾ, ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸುವರ್ಣಾ, ಧರ್ಮರಾಯ ಜವಳಿ, ಶಿವಯ್ಯ ಸ್ವಾಮಿ, ಶಿವರಾಯ ಮಾಲಿಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next