Advertisement
ಏನಿದು ಸಾಂವಿಧಾನಿಕ ಪೀಠ?ಪ್ರಮುಖ ವಿಷಯ ಅಥವಾ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ನ 5, 7, 9, 11, 13 ನ್ಯಾಯಮೂರ್ತಿಗಳ ಪೀಠ ರಚನೆಯಾಗುತ್ತದೆ. ಈ ಪೀಠವನ್ನು ರಚಿಸುವುದು ಸಿಜೆಐ. ಆದರೆ ಈ ಸಾಂವಿಧಾನಿಕ ಪೀಠದ ನೇತೃತ್ವವನ್ನು ಇವರೇ ವಹಿಸಬೇಕು ಎಂದೇನಿಲ್ಲ. ಇವರ ಅನಂತರದ ಹಿರಿಯ ನ್ಯಾಯಮೂರ್ತಿಗಳೂ ನೇತೃತ್ವ ವಹಿಸಬಹುದು.
ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ದ್ವಿಸದಸ್ಯ ಪೀಠ ಮತ್ತು ತ್ರಿಸದಸ್ಯ ಪೀಠಗಳಲ್ಲಿ ಹೆಚ್ಚಿನ ಪ್ರಕರಣಗಳ ವಿಚಾರಣೆ ನಡೆಯುತ್ತಿರುತ್ತದೆ. ಒಂದು ವೇಳೆ ಈ ಪೀಠಗಳ ನ್ಯಾಯಾಧೀಶರು ಭಿನ್ನ ಭಿನ್ನವಾಗಿ ತೀರ್ಪು ನೀಡಿದರೆ ಅಥವಾ ವಿಸ್ತರಿತ ಪೀಠವೇ ಈ ಬಗ್ಗೆ ನಿರ್ಧರಿಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದಾಗ, ಇಂಥ ಸಾಂವಿಧಾನಿಕ ಪೀಠಗಳು ರಚನೆಯಾಗುತ್ತವೆ. ಅಲ್ಲದೆ, ಸಂವಿಧಾನದ ಪ್ರಮುಖ ವಿಚಾರವೊಂದರ ಕುರಿತು ವಿಚಾರಣೆಗಾಗಿಯೇ ರಚನೆಯಾಗುತ್ತದೆ. ಸದ್ಯ ಎಷ್ಟು ಸಾಂವಿಧಾನಿಕ ಪೀಠಗಳಿವೆ?
488 ಪ್ರಕರಣಗಳ ಸಂಬಂಧ ಸುಪ್ರೀಂ ಕೋರ್ಟ್‌ನ 25 ಸಾಂವಿಧಾನಿಕ ಪೀಠಗಳು ವಿಚಾರಣೆ ನಡೆಸುತ್ತಿವೆ. ಅಂದರೆ ಐವರನ್ನೊಳಗೊಂಡ ಪೀಠವು 388, ಏಳು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು 15, ಒಂಬತ್ತು ನ್ಯಾಯಮೂರ್ತಿಗಳ ಪೀಠವು 135 ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿದೆ. ಅಂದರೆ ಸದ್ಯ ಇಷ್ಟು ಕೇಸ್‌ಗಳು ಪೆಂಡಿಂಗ್‌ನಲ್ಲಿವೆ.