Advertisement
ವಿದ್ಯೆಯ ಪಿತಾಮಹ ಈ ಶುಕ್ರಾಚಾರ್ಯ. ರಾಕ್ಷಸರನ್ನು ಕ್ರೌರ್ಯ ಕಳೆಸಿ ಸನ್ಮಾರ್ಗಕ್ಕೆ ಹಚ್ಚುವುದೇ ಶುಕ್ರನ ಕೆಲಸವಾಗಿತ್ತು. ಇಂಥ ಅಪರೂಪದ ಸಂಜೀನಿ ವಿದ್ಯೆಗಾಗಿ ಸಹಜವಾಗಿಯೇ ಅಮೃತತ್ವದಿಂದ ಶಕ್ತರಾಗಿದ್ದ ದೇವತೆಗಳು ಬೃಹಸ್ಪತಿಯ ಮಗ ಕಚನನ್ನು ಶುಕ್ರಾಚಾರ್ಯರ ಬಳಿ ಅಟ್ಟುತ್ತಾರೆ. ತದನಂತರದ ಕಚದೇವಯಾನಿ ಕತೆ ಎಲ್ಲರಿಗೂ ತಿಳಿದದ್ದೇ. ಸಂಜೀನಿ ವಿದ್ಯೆ ದಕ್ಕದೆಹೋಗಲೆಂಬ ಶಾಪಕ್ಕೆ ಕಚ ಗುರಿಯಾಗುತ್ತಾನೆ.
Related Articles
Advertisement
ಮುಖ್ಯವಾಗಿ ಶನೈಶ್ಚರಸ್ವಾಮಿ ಹಾಗೂ ಬುಧ ಗ್ರಹಗಳು ಶುಕ್ರನ ಗೆಳೆಯರು. ಈ ಗೆಳೆಯರ ಸಂಗಾತಿ ಯುಕ್ತವಾಗಿ ದೊರೆತಾಗ ರಾಜಯೋಗದ ಪ್ರಾಪ್ತಿಯನ್ನು ಶುಕ್ರಗ್ರಹ ಒದಗಿಸುತ್ತಾನೆ. ಅದೇ ಸೂರ್ಯ ಹಾಗೂ ಚಂದ್ರರು ಪರಮ ಶತೃಗಳಾಗಿದ್ದಾರೆ. ಗುರು ಹಾಗೂ ಮಂಗಳರು ತಟಸ್ಥರಾದರೂ ಕುಜ ಸಂಪರ್ಕ ಮಾತ್ರ ಘಾತಕರೀತಿಯಲ್ಲಿ ಒದಗಿದಾಗ, ಕ್ರೌರ್ಯ, ಅನೈತಿಕ ಸಂಬಂಧ,ಲವಲವಿಕೆ ಕಳೆದುಕೊಂಡ ಮನೋಸ್ಥಿತಿ, ಅಪಯಶಸ್ಸು ಅಪಕೀರ್ತಿಗಳು, ಒದಗಿ ಬರುತ್ತದೆ. ಆದರೆ ಈ ವಿಚಾರದಲ್ಲಿ ಅವಸರದ ನಿರ್ಣಯ ಸಲ್ಲ. ಕುಜಶುಕ್ರರ ಅಪರೂಪದ ಮಧುರ ವೈವಾಹಿಕ ಜೀವನದ ಸಾಫಲ್ಯತೆಯನ್ನು ಒದಗಿಸಿದ ಅನೇಕ ಉದಾಹರಣೆಗಳಿದೆ. ಮಹಾತ್ಮಾ ಗಾಂಧಿ ಹಾಗೂ ಕಸ್ತೂರಬಾ ನಡುವಣ ದಾಂಪತ್ಯದಲ್ಲಿ ಸಾಫಲ್ಯತೆ ಇತ್ತು. ಹಿಟ್ಲರನ ಜೀವನದಲ್ಲಿ ಕುಜಶುಕ್ರರು ಜೀವನದ ಮೌಲ್ಯದ ವಿಚಾರದಲ್ಲಿ ಅವನನ್ನು ಕೆಳಹಂತಕ್ಕಿಳಿಸಿದ ಉದಾಹರಣೆಯೂ ಇದೆ. ದೇವಾನಂದ್ ಭಾರತೀಯ ಚಲನಚಿತ್ರರಂಗದ ಅಪರೂಪದ ಯಶಸ್ವೀ ನಟ. ಅವರ ಜಾತಕದ ಶುಕ್ರಗ್ರಹ ಅವರನ್ನು ಚಲನಚಿತ್ರರಂಗದ ಯಶಸ್ವೀ ನಟನನ್ನಾಗಿ ರೂಪಿಸಿತು. ಆದರೆ ಸೂರ್ಯನ ಉಪಸ್ಥಿತಿಯಿಂದಾಗಿ ಶುಕ್ರ ಬಾಧೆಗೊಳಗಾಗಿದ್ದು ದೇವಾನಂದರನ್ನು ಅವರ ಜೀವನದಲ್ಲಿ ಬಂದು ಹೋದ ಗೆಳತಿಯರ ವಿಷಯದಲ್ಲಿ ಪರದಾಡಿಸಿದ್ದು ಇದೆ. ಇದನ್ನು ಸ್ವತಃ ದೇವಾನಂದರೇ ತಮ್ಮ ತಮ್ಮ ಆತ್ಮ ಚರಿತ್ರೆಯ ಪುಟಗಳಲ್ಲಿ ಶ್ರುತಪಡಿಸಿದ್ದಾರೆ. ಶುಕ್ರ ಕುಜರ ಬಲೆಯಲ್ಲಿ ಮೀನಾಕುಮಾರಿ ಮತ್ತು ಸಂಜಯ್‌ದತ್ ವಾಸ್ತವ ಯಾವಾಗಲೂ ಜಟಿಲ. ಅಂತೆಯೇ ಆಶ್ಚರ್ಯಕಾರಕ, ಕತೆಗಳಿಗಿಂತ ಬದುಕು ಹೆಚ್ಚು ರೋಚಕ. ಚಲನಚಿತ್ರರಂಗದಲ್ಲಿ ಮೀನಾಕುಮಾರಿ ಹಾಗೂ ಸಂಜಯ್ ದತ್ತರನ್ನೇ ಗಮನಿಸಿ , ಅಭಿನೇತ್ರಿಯಾಗಿ ಮೀನಾಕುಮಾರಿ ಜಾಗತಿಕ ಮಟ್ಟದ ಅಪರೂಪದ ಪ್ರತಿಭೆ. ಅನುಮಾನವೇ ಇಲ್ಲ. ಮಹಾನ್ ತಾರಾ ದಂಪತಿಗಳಾದ ಸುನಿಲ್‌ದತ್ ಹಾಗೂ ನರ್ಗೀಸ್ ದತ್ತರ ಪುತ್ರ ಸಂಜಯ್‌ದತ್ ಈಗಲೂ ಬಾಕ್ಸ್ ಆಫೀಸಿನ ದೃಷ್ಟಿಯಿಂದ ಅದಮ್ಯ ಚೇತನ. ಆದರೆ ಯಶಸ್ಸು ಮತ್ತು ಪ್ರತಿಭೆಗಳಿಂದಲೇ ಮಾನಸಿಕ ಶಾಂತಿ ಲಭಿಸದೆಂಬುದಕ್ಕೆ ನಮ್ಮ ಕಣ್ಣಮುಂದೆಯೇ ಹರಳುಗಟ್ಟಿರುವ ಇವರುಗಳ ಜೀವನದ ಏರಿಳಿತಗಳನ್ನು ಗಮನಿಸಿದರೆ ಚಲನಚಿತ್ರರಂಗದಲ್ಲಿ ಶುಕ್ರನ ಪಾತ್ರ ಪೂರ್ತಿ ಸಾಬೀತು. ನಮ್ಮ ಕನ್ನಡ ಚಿತ್ರರಂಗದ ನಟಿಯೊಬ್ಬಳ ಜೀವ®ದ ಯಶಸ್ಸು ಹತಾಶೆಗಳಿಗೆ ಶುಕ್ರ ಕಾರಣನಾಗಿದ್ದಾನೆ. ಚಂದ್ರ ಖಳನಾಯಕನಾಗಿದ್ದಾನೆ. ಶುಕ್ರಗ್ರಹದ ಸಿದ್ಧಿಯನ್ನು ವೃದ್ಧಿಪಡಿಸುವುದು ಹೇಗೆ? ಶುಕ್ರನ ಸಂಬಂಧವಾದ ಶಕ್ತಿ ದೇವತೆಗಳು ಶುಕ್ರಗ್ರಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ.
ಪ್ರಧಾನವಾಗಿ ಶುಕ್ರನ ನಕ್ಷತ್ರಗಳಾದ ಭರಣಿ, ಪುಬ್ಟಾ ಹಾಗೂ ಪೂರ್ವಾಷಾಢ ನಕ್ಷತ್ರಗಳು ಕುಜ ಚಂದ್ರ ಹಾಗೂ ಸೂರ್ಯರನ್ನು ಶುಕ್ರನ ಸಂಬಂಧವಾಗಿ ಹೇಗೆ ಎಷ್ಟು ಮೃದುಗೊಳಿಸಬಲ್ಲವು ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಸೂರ್ಯ ಹಾಗೂ ಕುಜರ ವಿಚಾರದಲ್ಲಿ ಇದು ಮುಖ್ಯವಾಗುತ್ತದೆ. ಚಂದ್ರನ ವಿಚಾರದಲ್ಲಿ ಇದು ಸೂರ್ಯನಿಂದ ಚಂದ್ರನ ದೂರ ಎಷ್ಟು ಎಂಬುದನ್ನು ಗ್ರಹಿಸಬೇಕಾಗುತ್ತದೆ. ಬೆಳ್ಳಿಯದೇ ಪ್ರತಿಮೆ, ಅವರೆ ಕಾಳು, ಬಿಳಿ ವಸ್ತ್ರ, ಶಾಸ್ತ್ರಬದ್ಧವಾಗಿ ಒಂದು ಸಂಪನ್ನವಾದ ಗುಂಪಾಗಿ ಶುಕ್ರನ ಶಕ್ತಿಯನ್ನು ವೃದ್ಧಿಸುತ್ತದೆ. ಬೇಕಾಬಿಟ್ಟಿ ವಜ್ರವನ್ನು ಧರಿಸುವುದು ಶುಕ್ರನ ಕ್ರೌರ್ಯವನ್ನು ವರ್ಧಿಸಬಹುದು. ಶುಕ್ರನ ಸಿದ್ಧಿಗೆ ಅನುಕೂಲವಾಗುವ ಹಾಗೆ ವಜ್ರದ ಬಳಕೆ ಆಗಬೇಕು. ಔದುಂಬರ ವೃಕ್ಷದ ಶಾಸ್ತ್ರ ರೀತ್ಯಾ ಪೂಜೆ ಶುಭವಾದುದು. ತುಪ್ಪದ ಅನ್ನದಿಂದ ಮಾಡಿದ ಭಕ್ಷ್ಯದಿಂದ ಶುಕ್ರನನ್ನು ಮಂತ್ರಸಾಂಗತ್ಯದಲ್ಲಿ ತೃಪ್ತಿ ಪಡಿಸಬೇಕು. ಬಿಳಿ ಕಮಲದ ಹೂಗಳ, ಧವಳಾಶ್ವಗಳು ಶುಕ್ರನನ್ನು ಪುಷ್ಟಿಗೊಳಿಸುತ್ತದೆ. ಶುಕ್ರವಾರಕ್ಕೂ ಜೇಷ್ಠಾ ನಕ್ಷತ್ರಕ್ಕೂ ಶುಕ್ರನನ್ನು ಸಂಪ್ರೀತ ಗೊಳಿಸುವ ಶಕ್ತಿ ಇದೆ. ಅನಂತಶಾಸಿŒ