Advertisement

ನಾಮ ನಿರ್ದೇಶನದ ಉದ್ದೇಶವೇನು?

08:42 PM Oct 06, 2019 | Sriram |

ಪ್ರಭಾಕರ ವಾಣಿಜ್ಯ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಭವಿಷ್ಯ ನಿಧಿಯಲ್ಲಿ(ಪ್ರಾವಿಡೆಂಟ್‌ ಫ‌ಂಡ್‌) ಕಡ್ಡಾಯವಾಗಿ ಪ್ರತಿ ತಿಂಗಳೂ ಹಣ ಕೂಡಿಸುತ್ತಿದ್ದಾನೆ. ಭವಿಷ್ಯ ನಿಧಿಯ ತನ್ನ ಖಾತೆಯಲ್ಲಿ ಜಮೆ ಆಗುತ್ತಿರುವ šಣವನ್ನು ತನ್ನ ನಂತರ ತನ್ನ ತಾಯಿಗೆ ಕೊಡಬೇಕೆಂದು ತಿಳಿವಳಿಕೆ ಕೊಟ್ಟ. ಆದರಂತೆ, ತನಗೆ ಸಂದಾಯವಾಗಬೇಕಾದ ಉಪದಾನದ
(ಗ್ರಾಚ್ಯುಟಿ) ಹಣವನ್ನು ಸಹ ತನ್ನ ತಾಯಿಗೆ ಕೊಡಬೇಕೆಂದು ರೆದುಕೊಟ್ಟ. ಈ ರೀತಿ ಜೀವವಿಮೆ, ಭವಿಷ್ಯನಿಧಿ, ಉಪದಾನ ಇವುಗಳಿಂದ ತನಗೆ ಬರಬೇಕಾದ ಹಣವನ್ನು ತನ್ನ ನಂತರ ಯಾರಿಗೆ ಪಾವತಿ ಮಾಡಬೇಕೆಂದು ಸೂಚಿಸುವ ತಿಳಿವಳಿಕೆಗೆ ನಾಮ ನಿರ್ದೇಶನ ಎನ್ನುತ್ತಾರೆ. ನಾಮ ನಿರ್ದೇಶನ ಮಾಡುವುದು ಕಡ್ಡಾಯವೇ? ಹೌದು, ಕಡ್ಡಾಯವಾಗಿ ನಾಮ ನಿರ್ದೇಶನ ಮಾಡಲೇಬೇಕು. ಜೀವ ವಿಮಾ ಕಾಯಿದೆ ಮತ್ತು ಉಪದಾನ ಸಂದಾಯ ಕಾಯಿದೆ, ಈ ಅಧಿನಿಯಮಗಳು ನಾಮನಿರ್ದೇಶನವನ್ನು ಕಡ್ಡಾಯ ಮಾಡುತ್ತವೆ: ಹಾಗೆಯೇ ಯೂನಿಟ್‌ ಟ್ರಸ್ಟ್‌ ಆಫ್ ಇಂಡಿಯಾದ ಸರ್ಟಿಫಿಕೇಟ್‌, ಪೋಸ್ಟ್‌ ಆಫೀಸಿನವರು ಕೊಡುವ ರಾಷ್ಟ್ರೀಯ ಉಳಿತಾಯ ಯೋಜನೆ ಸರ್ಟಿಫಿಕೇಟುಗಳು, ಇವುಗಳಿಗೂ ಕೂಡಾ ಕಡ್ಡಾಯವಾಗಿ ನಾಮ ನಿರ್ದೇಶನ ಮಾಡಲೇಬೇಕು. ಈಗ ಕೆಲವು ವರ್ಷಗಳ ಹಿಂದೆ “ಬ್ಯಾಂಕಿಂಗ್‌ ಕಂಪನಿಗಳ ವಿನಿಮಯ ಕಾಯಿದೆ’ ತಿದ್ದುಪಡಿ ಮಾಡಿ ಬ್ಯಾಂಕಿನಲ್ಲಿ ತೊಡಗಿಸುವ ಹಣಕ್ಕೂ (ಅಂದರೆ ಉಳಿತಾಯ ಖಾತೆ, ಸಾವಧಿ ಇಡುಗಂಟು) ನಾಮ ನಿರ್ದೇಶನ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. (ಬ್ಯಾಂಕ್‌ ಲಾಕರ್‌ಗಳಿಗೂ ನಾಮ ನಿರ್ದೇಶನ ಮಾಡಬಹುದು). ಇಲ್ಲಿ ನಾಮ ನಿರ್ದೇಶನ ಐಚ್ಛಿಕ. ಅಂದರೆ, ಸ್ವಂತ ಇರಾದೆಯ ಮೇರೆಗೆ ನಾಮ ನಿರ್ದೇಶನ ಮಾಡಬಹುದು.

Advertisement

ಈ ನಾಮನಿರ್ದೇಶನದ ಉದ್ದೇಶ ಏನು? ಇದರ ಅವಶ್ಯಕತೆ ಇದೆಯೇ ಎಂಬುದನ್ನು ನೋಡೋಣ. ಜೀವವಿಮೆ, ಭವಿಷ್ಯ ನಿಧಿ ಹಾಗೂ ಉಪದಾನ, ಇವುಗಳಿಂದ ಬರಬೇಕಾದ ಹಣ ಒಬ್ಬ ವ್ಯಕ್ತಿಯ ಸಂಸಾರಕ್ಕೆ ಅಥವಾ ಅವಲಂಬಿಗಳಿಗೆ ಅಪದ್ಧನ ಸ್ವರೂಪದ್ದು, ಕಷ್ಟಕಾಲದಲ್ಲಿ ಕೂಡಲೇ ಬೇಕಾಗುವ ಹಣ. ಈ ಹಣ ಸಂದಾಯವಾಗುವಲ್ಲಿ ವಿಳಂಬವಾದರೆ ಅತೀವ ತೊಂದರೆಯಾಗುತ್ತದೆ. ಸಂಸಾರ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿಹಾಕಿಕೊಂಡು ತತ್ತರಿಸುತ್ತದೆ. ಒಬ್ಬ ವ್ಯಕ್ತಿಯು ಮೃತನಾದರೆ, ಕಾನೂನಿನನ್ವಯ ಅವನ ವಾರಸುದಾರರು ಯಾರು? ಅವರಲ್ಲಿ ಯಾರಿಗೆ ಹಣ ಕೊಡಬೇಕು? ವಾರಸುದಾರರಲ್ಲಿ ವ್ಯಾಜ್ಯ ಅಥವಾ ಭಿನ್ನಾಭಿಪ್ರಾಯ ಉಂಟಾದರೆ ಅದನ್ನು ಹೇಗೆ ಪರಿಹರಿಸಬೇಕು? ಎಂಬ ಸಮಸ್ಯೆಗಳು ಉಂಟಾಗುತ್ತವೆ. ಈ ತೊಡಕಿನ ಪ್ರಶ್ನೆಗಳಿಗೆ ಉತ್ತರ ಸಿಗುವುದು ಸುಲಭವಲ್ಲ. ಆದುದರಿಂದ ಹಣ ಸಂದಾಯ ಮಾಡುವಲ್ಲಿ ವಿಪರೀತ ವಿಳಂಬವಾಗುತ್ತದೆ. ಈ ಜಗಳ ಪರಿಹಾರದಲ್ಲೇಸಂಸ್ಥೆಯ ಬಹುಪಾಲು ಸಮಯ ವ್ಯರ್ಥವಾಗುತ್ತದೆ. ಕುಟುಂಬಗಳಿಗೂ ಹಾನಿ ಉಂಟಾಗುತ್ತದೆ. ಆದ ಕಾರಣ, ಜೀವ ವಿಮಾ ಅಧಿನಿಯಮ, ಭವಿಷ್ಯ ನಿಧಿ ಅಧಿನಿಯಮ, ಉಪದಾನ ಅಧಿನಿಯಮ, ಯೂನಿಟ್‌ ಟ್ರಸ್ಟ್‌ ಆಫ್ ಅಧಿನಿಯಮ, ಅಂಚೆ ಉಳಿತಾಯ ಯೋಜನೆಗಳು ನಾಮ ನಿರ್ದೇಶನದಲ್ಲಿ ಸೂಚಿಸಿದ ವ್ಯಕ್ತಿಗೆ ಕೊಡಬೇಕಾದ ಹಣವನ್ನು ಕೊಟ್ಟು, ಅವನಿಂದ ಪಾವತಿ ಪಡೆದು, ಈ ಸಂಸ್ಥೆಗಳು ಕೈತೊಳೆದುಕೊಳ್ಳುತ್ತವೆ. ಇದರಿಂದಾಗಿ ಕ್ಲೇಮುಗಳು(ಕೇಳಿಕೆಗಳು) ಶೀಘ್ರವಾಗಿ ಇತ್ಯರ್ಥಗೊಂಡು, ಎಲ್ಲರ ಮೇಲಿನ ಜವಾಬ್ದಾರಿ ಮತ್ತು ಒತ್ತಡ ನಿವಾರಣೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next