Advertisement
ಬೆಂಗಳೂರು:ಈ ವರ್ಷ ಕಲಿಕಾವಿಧಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಹೋದರೆ ಇನ್ನೊಂದು ಶೈಕ್ಷಣಿಕ ವರ್ಷ ನಷ್ಟವಾಗಬಹುದೆಂಬ ಆತಂಕವನ್ನು ರಾಜ್ಯದ ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. “ಉದಯವಾಣಿ’ ನಡೆಸಿದ ಅಭಿಮತ ಸಂಗ್ರಹದಲ್ಲಿ ನೂರಕ್ಕೂ ಹೆಚ್ಚು ಮಂದಿ ಪರಿಣಿತರು, ಸರಕಾರಕ್ಕೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
Related Articles
Advertisement
ಸರಕಾರವೇ ಪರಿಕರ ನೀಡಲಿ :
ಆನ್‌ಲೈನ್ ಪರ್ಯಾಯ ಎಂಬುದಾದರೆ ಬೇಕಾದ ಪರಿಕರವನ್ನು ಸರಕಾರವೇ ಮಕ್ಕಳಿಗೆ ನೀಡಬೇಕು. ಹಳ್ಳಿ ಅಥವಾ ನಗರ ಪ್ರದೇಶದಲ್ಲಿ ಸ್ಥಳೀಯ ಪದವೀಧ ರರು ಅಥವಾ ಶೈಕ್ಷಣಿಕ ವಿಷಯ ತಿಳಿದು,ಅರ್ಥೈಸಿಕೊಂಡು, ಮಕ್ಕಳಿಗೆ ಕಲಿಸುವವ ರನ್ನು ಸೇರಿಸಿ, ಮಕ್ಕಳ ಪಠ್ಯ ಪುಸ್ತಕ ನೀಡಿ, ಐದಾರು ಮಕ್ಕಳಂತೆ ಹಂಚಿಕೆ ಮಾಡಿ, ಕಲಿಕೆ ನಿರಂತರತೆ ಕಾಪಾಡಿಕೊಳ್ಳಬಹುದು. ಕೋವಿಡ್ ಇಲ್ಲದ ಕಡೆಗಳಲ್ಲಿ ಶಾಲೆಗೆ ಮಕ್ಕಳನ್ನು ಕರೆಸಿ, ಪಾಠ ಮಾಡಬಹುದು.– ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ
ಪ್ರಾಕ್ಟಿಕಲ್ ಸಹ ಮನೆಯಲ್ಲೇ! :
ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಕಲಿಕೆ ಹಾಗೂ ನಿರಂತರ ಮೌಲ್ಯಾಂಕನ ಪದ್ಧತಿ ಅತ್ಯವಶ್ಯ. ಮನೆ ಯಲ್ಲಿಯೇ ಲಭ್ಯವಿರುವ ವಸ್ತುಗಳ ಆಧಾರದಲ್ಲಿ ವಿದ್ಯಾರ್ಥಿಗಳು ಚಟುವಟಿಕೆ, ವಿನ್ಯಾಸದಲ್ಲಿ ತೊಡಗುವಂತಾಗಬೇಕು. ಎಂಜಿನಿಯರಿಂಗ್‌ನ ಕೆಲವು ವಿಭಾಗದಲ್ಲಿ ಪ್ರಯೋಗದ ವಿದ್ಯಾರ್ಥಿಗಳು ಮನೆಯ ಲ್ಲಿಯೇ ಮಾಡುವ ವ್ಯವಸ್ಥೆ ರೂಪಿಸಿದ್ದೇವೆ. ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಬೇಕಾದ ಕಿಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. – ಡಾ| ಅಶೋಕ ಶೆಟ್ಟರ, ಕುಲಪತಿ, ಕೆಎಲ್ಇ ತಾಂತ್ರಿಕ ವಿ.ವಿ., ಹುಬ್ಬಳ್ಳಿ
ಆನ್‌ಲೈನ್ ಶಿಕ್ಷಣವೇ ಸೂಕ್ತ :
ಸುರಕ್ಷಿತವಾಗಿರುವ ಕಲಿಕೆ ಈ ಸಂದ ರ್ಭಕ್ಕೆ ಅತ್ಯಂತ ಸಮಂಜಸವಾದ ವಿಧಾನ. ತಾವಿದ್ದಲ್ಲಿಯೇ ಕಲಿಯಬೇಕು, ತಾವಿದ್ದಲ್ಲಿಯೇ ಬೋಧಿಸಬೇಕು ಎನ್ನುವಂತಹ ಪದ್ಧತಿ ಇಂದಿನ ಪರಿಸ್ಥಿತಿಗೆ ಅನ್ವರ್ಥಕವಾ ಗುತ್ತದೆ. ಆನ್‌ಲೈನ್ ಶಿಕ್ಷಣ ಈಗ ಅತ್ಯಂತ ಸೂಕ್ತ. ಪರಿಸ್ಥಿತಿನೋಡಿಕೊಂಡು ಮುಂದಿನ ದಿನಗಳಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್ ಶಿಕ್ಷಣದ ಬಗ್ಗೆ ತಜ್ಞರು, ಸರಕಾರ, ಸಂಘ-ಸಂಸ್ಥೆಗಳು ಸಮಾಲೋಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. – ಡಾ| ಶಿವಮೂರ್ತಿ ಮುರುಘಾ ಶರಣರು, ಜಮುರಾ ವಿ.ವಿ. ಕುಲಾಧಿಪತಿ