ಎನ್ನುವ ಸಂಸ್ಕೃತಿಯೇಗೊತ್ತಿಲ್ಲ. ಹೈದ್ರಾಬಾದ ಕರ್ನಾಟಕಕ್ಕೆ ನಾವು ಏನು ಮಾಡಿದ್ದೇವೆ ಎನ್ನುವುದಕ್ಕಿಂತ ಅನಂತಕುಮಾರ ಹೆಗಡೆ ಅವರ ಕೊಡುಗೆ ಏನು ಎನ್ನುವುದನ್ನು ಮೊದಲು ಹೇಳಲಿ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.
Advertisement
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆಗಡೆಗೆ ಕನಿಷ್ಠ ಸಂಸ್ಕೃತಿಯೂ ಇಲ್ಲ. ಅಂತಹವರಿಂದ ದೇಶದ ಜನರು ಕಲಿಯಬೇಕಾದದ್ದು ಏನೂ ಇಲ್ಲ. ಅಶಿಸ್ತಿನಿಂದ ವರ್ತಿಸುವ ಹೆಗಡೆ ಅವರಿಗೆ ಕೇಂದ್ರ ಸಚಿವರಾಗಿರಲು ನೈತಿಕತೆಯೂ ಇಲ್ಲ. ಹೆಗಡೆ ಹೈಕಕ್ಕೆ ಏನು ಕೊಡುಗೆ ನೀಡಿದ್ದಾರೆ.
ರಾಜ್ಯದ ಜನತೆ ತಿಳಿಸಿ, ನಂತರ ವೀರಾವೇಶದಿಂದ ಮಾತನಾಡಿ ಎಂದರು. ನಾನು ಅಧಿಕಾರದಲ್ಲಿದ್ದಾಗ ಹೈಕ ಭಾಗಕ್ಕೆ ಮತ್ತು ರಾಜ್ಯಕ್ಕೆ ಒಟ್ಟು ನಾಲ್ಕು ಕಂಪನಿಗಳನ್ನು ತಂದಿದ್ದೇನೆ. ಇದು ನನ್ನ ಕೊಡುಗೆ. ಆದರೆ, ಇವರೇನು ಮಾಡಿದ್ದಾರೆ. ಮನುವಾದದ ಮೂಲಕ ಸಮಾಜ ಒಡೆಯುವ ಇವರಿಂದ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಇವರೆಲ್ಲ ಸಂವಿಧಾನ ಬದಲಾವಣೆಗೆ ಮಾಡೋದಕ್ಕೆ ಅಧಿಕಾರಕ್ಕೆ ಬಂದವರು. ಇವರಿಂದ ಪ್ರಜಾಪ್ರಭುತ್ವ, ಸಮಾನತೆ ಮತ್ತು
ಸಮಾಜದ ಸೌಖ್ಯ ಕಾಪಾಡಲು ಸಾಧ್ಯವಿಲ್ಲ ಎಂದರು.
Related Articles
Advertisement
ರಾಜ್ಯಕ್ಕೆ ರಾಹುಲ್‌ಗಾಂಧಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಫೆಬ್ರುವರಿಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಫೆ. 12, 13 ಮತ್ತು 14ನೇ ತಾರೀಖೀನಂದು ಬರುವ ಅವರು, ಕಲಬುರಗಿ ಜಿಲ್ಲೆಗೂ ಭೇಟಿ ನೀಡಲಿದ್ದಾರೆ. ಅಂದು ಬಹಿರಂಗ ಸಭೆ, ರೋಡ್ ಶೋ ನಡೆಯಲಿದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕಾಶಿನಾಥ ನಿಧನಕ್ಕೆ ಸಂತಾಪ ಕನ್ನಡ ಚಿತ್ರೋದ್ಯಮ ಕಂಡ ಯಶಸ್ವಿ ನಾಯಕ ಹಾಗೂ ನಿರ್ದೇಶಕ ತಮ್ಮದೇ ಮ್ಯಾನರಿಸಂನಿಂದ ಖ್ಯಾತಿಗಳಿಸಿದ್ದ ಕಾಶಿನಾಥ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಶ್ರೇಷ್ಠ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂಸದಡಾ| ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.