Advertisement

ಕ್ಯಾಶ್‌ಲೆಸ್‌ ಎಟಿಎಂ ಕಾರಣವೇನು?

02:41 PM May 14, 2018 | Team Udayavani |

ಕಳೆದ ಒಂದೆರಡು ವಾರಗಳಿಂದ ಎಟಿಎಂನಲ್ಲಿ ಕ್ಯಾಶ್‌ ಇಲ್ಲದೇ  ಜನಸಾಮಾನ್ಯರು ಹೈರಾಣಾಗಿ¨ªಾರೆ. ಎಟಿಎಂನಲ್ಲಿ ಕಾಸಿಲ್ಲ ಎಂಬ ದೂರು ದೇಶಾದ್ಯಂತ ಕೇಳಿ ಬರುತ್ತಿದ್ದರೂ,  ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಗಳಲ್ಲಿ ಜನರಿಗೆ  ಭಾರೀ ತೊಂದರೆ ಉಂಟುಮಾಡಿದೆ. ಇದು  ನಗದು ತುರ್ತು ಪರಿಸ್ಥಿತಿಯೇ? ಅಪನಗದೀಕರಣದ ಪರಿಣಾಮವೇ?

Advertisement

   ಬ್ಯಾಂಕುಗಳು ತಮ್ಮ ಕ್ಯಾಶ್‌ ಅಗತ್ಯತೆಯನ್ನು ಮೂರು ವಿಧದಲ್ಲಿ  ಪೂರೈಸಿಕೊಳ್ಳುತ್ತವೆ.  ಖಾತೆಗೆ ಜಮಾಮಾಡುವ ನಗದು ಠೇವಣಿಯಿಂದ, ರಿಸರ್ವ್‌ ಬ್ಯಾಂಕ್‌ನಿಂದ ಮತ್ತು ಅವಶ್ಯಕತೆ ಬಿ¨ªಾಗ  ಬೇರೆ ಬ್ಯಾಂಕ್‌ಗಳಿಂದ ತರಿಸಿಕೊಳ್ಳುತ್ತವೆ.  ಪ್ರಚಲಿತ ಕಾನೂನಿನ ಪ್ರಕಾರ ನೋಟುಗಳನ್ನು ಹಲವು ಹತ್ತು ನಿಯಮಾವಳಿ ಮತ್ತು ನಿಬಂಧನೆಯಡಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಮಾತ್ರ ಮುದ್ರಿಸಬಹುದು. ಬ್ಯಾಂಕ್‌ಗಳ ಅವಶ್ಯಕತೆಗಳಿಗೆ ಅನುಗುಣವಾಗಿ ನಗದನ್ನು ರಿಸರ್ವ್‌ಬ್ಯಾಂಕ್‌ ಪೂರೈಸುತ್ತದೆ. ಹೀಗಿದ್ದರೂ ಬ್ಯಾಂಕುಗಳಲ್ಲಿ ಕ್ಯಾಶ್‌ ಕೊರತೆಯಾಗುವುದಕ್ಕೆ ಕಾರಣವೇನು?

  ರಿಸರ್ವ್‌ ಬ್ಯಾಂಕ್‌ ಪ್ರಕಾರ, ಕಳೆದ ಮೂರು ತಿಂಗಳಿನಲ್ಲಿ ಎಟಿಎಂಗಳಿಂದ ನಗದು ಹಿಂಪಡೆಯುವ ಪ್ರಕ್ರಿಯೆಯಲ್ಲಿ ನಿರೀಕ್ಷೆ ಮೀರಿ ಹೆಚ್ಚಳವಾಗಿದೆ. ಇದಕ್ಕೆ ಕಾರಣ, ಚುನಾವಣೆ, ಹಬ್ಬಗಳು, ಮದುವೆ ಸೀಸನ್‌ಗಳು, ಸಾಲು ಸಾಲು ರಜೆಗಳು. 

 ರಿಸರ್ವ್‌ ಬ್ಯಾಂಕ್‌ ಮಾಹಿತಿಯ ಪ್ರಕಾರ ಈ ಹಣಕಾಸು ವರ್ಷದ (2018 ರ)  ಎರಡನೇ ಅರ್ಧ ಭಾಗದಲ್ಲಿಯೇ 15,291 ಬಿಲಿಯನ್‌ ಹಣವನ್ನು  ಎಟಿಎಂ  ಮೂಲಕ  ಹಿಂಪಡೆಯಲಾಗಿದೆ.  ಕೆಲವು ಮೂಲಗಳ ಪ್ರಕಾರ 2000 ಮುಖಬೆಲೆಯ ನೋಟುಗಳು  ಪ್ರಸರಣದಲ್ಲಿ ಇದ್ದರೂ, ಅವು ಮರಳಿ ಬ್ಯಾಂಕುಗಳಿಗೆ ಬರುತ್ತಿಲ್ಲ. ಹಾಗೆಯೇ ಬ್ಯಾಂಕುಗಳಲ್ಲಿ ನಗದು ಸ್ವೀಕೃತಿ  ಕೌಂಟರ್‌ಗಳಲ್ಲಿ ದಟ್ಟಣೆ ಕಡಿಮೆ ಇದೆ. ರಿಸರ್ವ್‌ ಬ್ಯಾಂಕ್‌ ಈವರೆಗೆ  ದಿನಂಪ್ರತಿ 500 ಮುಖ ಬೆಲೆಯ 2,500 ಕೊಟಿ ಮೌಲ್ಯದ ನಗದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆಯಂತೆ.  ಇದು ಮಾಮೂಲಿಗಿಂತ ಸುಮಾರು ಐದು ಪಟ್ಟು ಹೆಚ್ಚು. 

ಆದರೂ  ಮಾರುಕಟ್ಟೆಯಲ್ಲಿ ಕ್ಯಾಶ್‌ ಬೇಕು ಎನ್ನುವ ಹಾಹಾಕಾರ ಕಡಿಮೆಯಾಗುತ್ತಿಲ್ಲ.   ಇದನ್ನೆಲ್ಲ ಗಮನಿಸಿದರೆ, ಎರಡು ವರ್ಷದ ಹಿಂದೆ, ಅಂದರೆ ನವೆಂಬರ್‌2016ರ ನೋಟು ರದ್ಧತಿ ಸಂದರ್ಭದಲ್ಲಿ ಎದುರಾಗಿದ್ದ ಸಂಕಷ್ಟವನ್ನು ಊಹಿಸಿ ಜನರು   ಹಣವನ್ನು ಎತ್ತಿಡುತ್ತಿರಬಹುದೇ ಎನ್ನುವ ಸಂದೇಹ  ಉಂಟಾಗಿದೆ. 

Advertisement

ಇನ್ನೊಂದು ಮೂಲದ ಪ್ರಕಾರ, ಸರ್ಕಾರ ಫೈನಾನ್ಷಿಯಲ… ರೆಸಲ್ಯೂಷನ್‌ ಅಂಡ್‌ ಡೆಪಾಸಿಟ್‌ ಇನುÒರೆನ್ಸ್‌  ಬಿಲ್‌ ಅನ್ನು ಅನುಷ್ಠಾನಗೊಳಿಸುವ ಯೋಜನೆ ಮಾಡಿದೆ. ಹೀಗಾದಲ್ಲಿ ಬ್ಯಾಂಕಿನಲ್ಲಿರುವ ತಮ್ಮ ಠೇವಣಿ ಸುರಕ್ಷಿತವಲ್ಲ ಎನ್ನುವ ಗಾಳಿ ಸುದ್ದಿ ಹರಡಿ, ಆಂಧ್ರ ಮತ್ತು ತೆಲಂಗಾಣದಲ್ಲಿ  ಭಾರೀ ನಗದು ಹಿಂತೆಗೆತ ಶುರುವಾಗಿದೆಯಂತೆ. ಇದರ ಜೊತೆಗೆ 200ರೂ. ನಂಥ ಹೊಸ ನೋಟುಗಳನ್ನು ನಮ್ಮಲ್ಲಿರುವ ಶೇ.40ರಷ್ಟು ಎಟಿಎಂಗಳಲ್ಲಿ ಡ್ರಾ ಮಾಡಲು ಆಗುತ್ತಿಲ್ಲ.  ಆ ನೋಟುಗಳನ್ನು ಹೊಸದಾಗಿ ವಿನ್ಯಾಸ ಮಾಡಿ, ಎಟಿಎಂ ಯಂತ್ರಕ್ಕೆ ಹೊಂದಿಕೆಯಾಗುವ ಅಳತೆಯಲ್ಲಿ ಮುದ್ರಣ ಮಾಡಬೇಕಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. 

ಎಟಿಎಂ ಹಣ ತುಂಬೋದು ಹೀಗೆ
ಬ್ಯಾಂಕಿಂಗ್‌ ಕಾನೂನು ಹೇಳುವ ಪ್ರಕಾರ- ಸಾಲು ಸಾಲು ರಜೆಗಳಿದ್ದರೆ ಎಟಿಎಂ ಅನ್ನು ಪೂರ್ತಿ ತುಂಬಿಸಬೇಕು. ಬ್ಯಾಂಕ್‌ ಪ್ರತಿ ಎಟಿಎಂ ಅನ್ನು ವಾಚ್‌ ಮಾಡುತ್ತಿರುತ್ತದೆ. ಅದರಲ್ಲಿ ಕಡಿಮೆ ಆದ ನಂತರ ತುಂಬಿಸುತ್ತದೆ. ಒಂದು ಎಟಿಎಂ ಯಂತ್ರದಲ್ಲಿ ಕನಿಷ್ಠ 10ರಿಂದ 15 ಲಕ್ಷ ಮೊತ್ತವನ್ನು ತುಂಬಿಸಬಹುದು. ಗರಿಷ್ಠ ಎಂದರೆ 35 ಲಕ್ಷ. ಎಟಿಎಂನ ಸಾಮರ್ಥಯ ನಿರ್ಧಾರವಾಗುವುದು ಆ ಪ್ರದೇಶದಲ್ಲಿ ಗ್ರಾಹಕರ ಯಾವ ಪ್ರಮಾಣದಲ್ಲಿ ಹಣ ಹಿಂಪಡೆಯುತ್ತಾರೆ ಎನ್ನುವುದರ ಮೇಲೆ. 

ಪ್ರತಿ ಎಟಿಎಂನಲ್ಲಿ 100, 200, 500 ಹೀಗೆ ಎಲ್ಲಾ ಡಿಜಿಟ್‌ ನೋಟುಗಳನ್ನೂ ಲೋಡ್‌ ಮಾಡಬಹುದು. 

– ರಮಾನಂದ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next