Advertisement
ಈಗ ಚಾಲ್ತಿಯಲ್ಲಿರುವ ಹೆಚ್ಚಿನ ಯೋಗಶಾಲೆಗಳು ಯೋಗಾಭ್ಯಾಸ ಮಾಡಲು ಉತ್ತಮ ಸಮಯವಾದ ಸೂರ್ಯೋದಯವನ್ನು ಆರಿಸಿಕೊಂಡಿವೆ. ಆದರೆ ಇದು ತಡವಾಗಿ ಮಲಗುವ ಅಥವಾ ಬೆಳಗ್ಗೆ ಬೇಗ ಇರುವ ಕೆಲಸದವರಿಗೆ ಇದು ಯೋಗ್ಯವಾಗುವುದಿಲ್ಲ.
ಬೆಳಿಗ್ಗೆ ಯೋಗ ಮಾಡುವುದರಿಂದ ದೇಹದಲ್ಲಿರುವ ನೋವುಗಳಿಗೆ ಮುಕ್ತಿ ನೀಡುವುದಲ್ಲದೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಇಚ್ಛಿಸುವವರು ಬೆಳಗ್ಗೆ ಯೋಗ ಮಾಡುವುದು ಉತ್ತಮ. ಬೆಳಗ್ಗಿನ ಯೋಗ ಮಾನಸಿಕ ತೀಕ್ಷ್ಣತೆಯನ್ನು ಖಾತ್ರಿಗೊಳಿಸುತ್ತದೆ. ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸು, ದೇಹವನ್ನು ಶಾಂತವಾಗಿರಿಸುತ್ತದೆ. ಸಂಜೆ ಯೋಗದ ಅನುಕೂಲ
ಸಂಜೆಯ ಹೊತ್ತು ವಿಶ್ರಾಂತ ಸ್ಥಿತಿಯಲ್ಲಿರುತ್ತೀರಿ. ಇದು ನಿಮಗೆ ಯಾವುದೇ ರೀತಿಯ ಭಂಗಿಗಳನ್ನು ಅಭ್ಯಾಸ ಮಾಡಲು ಅನುವ ುಮಾಡಿಕೊಡುತ್ತದೆ. ಹೆಚ್ಚಿನ ಜನರು ಬೆಳಗ್ಗೆಗೆ ಹೋಲಿಸಿದರೆ ಸಂಜೆಯ ಹೊತ್ತು ಉಲ್ಲಾಸದಾಯಕವಾಗಿರುತ್ತಾರೆ. ಇದರಿಂದ ಯೋಗ ಮಾಡಿ ಆರಾಮವಾಗಿ ನಿದ್ರೆ ಮಾಡಲು ಸುಲಭವಾಗುತ್ತದೆ. ಸಂಜೆ ಯೋಗ ಮಾಡಿದಾಗ ಆಲೋಚನೆಗಳು ಹೈಪರ್ ಆಕ್ಟಿವ್ ಆಗುತ್ತದೆ ಇದರಿಂದ ಆಲೋಚನಾ ಕ್ರಮಗಳು ಜಾಸ್ತಿಯಾಗುತ್ತವೆ.
Related Articles
Advertisement
ಉತ್ತಮ ಸಮಯಯೋಗಾಭ್ಯಾಸಕ್ಕೆ ತಪ್ಪು ಸಮಯವೆಂದಿಲ್ಲ. ಪ್ರತಿಯೊಬ್ಬರು ವಿಭಿನ್ನ ಜೀವನ ಶೈಲಿಯಲ್ಲಿ ಬದುಕುತ್ತಾರೆ. ನೀವು ನಿಮ್ಮ ಸಮಯವನ್ನು ಸರಿಯಾಗಿ ಹೊಂದಿಸಿಕೊಂಡು ಬೆಳಗ್ಗೆ ಅಥವಾ ಸಂಜೆ ಅಭ್ಯಾಸ ಮಾಡಬಹುದು. ಇವೆರಡೂ ಅದರದ್ದೆ ಸಾಧಕ-ಭಾದಕಗಳನ್ನು ಹೊಂದಿರುತ್ತದೆ. -ಪ್ರೀತಿ ಭಟ್ ಗುಣವಂತೆ