Advertisement
ಏನಿದು ಗೂಗಲ್ ಸ್ಟ್ರೀಟ್ ವ್ಯೂ? 360 ಡಿಗ್ರಿಯಲ್ಲಿ ವಿಶೇಷ ಕೆಮೆರಾದಲ್ಲಿ ನಿಗದಿತ ಸ್ಥಳವೊಂದನ್ನು ಸೆರೆಹಿಡಿದು, ಗೂಗಲ್ ಮ್ಯಾಪ್‌ನ ಸ್ಟ್ರೀಟ್ ವ್ಯೂಗೆ ಸೇರಿಸಲಾಗುತ್ತದೆ. ಸ್ಥಳಗಳು ಅಥವಾ ಬೀದಿಗಳನ್ನು ಸೆರೆಹಿಡಿಯಲು ವಿಶೇಷ ವಾಹನದಲ್ಲಿ ಅಳವಡಿಸಲಾಗಿರುವ ಕೆಮೆರಾ ಅಥವಾ ಬ್ಯಾಕ್‌ಪ್ಯಾಕ್ ಕೆಮೆರಾ ಬಳಕೆ ಮಾಡಲಾಗುತ್ತದೆ.
ಭಾರತದಲ್ಲಿ ಇದುವರೆಗೆ ಗೂಗಲ್ ಸ್ಟ್ರೀಟ್ ವ್ಯೂಗೆ ಅವಕಾಶವಿರಲಿಲ್ಲ. 2011ರಲ್ಲಿ ಬೆಂಗಳೂರಿನಲ್ಲಿ ಗೂಗಲ್ ಸಂಸ್ಥೆಯ ವಾಹನಗಳು ಸ್ಟ್ರೀಟ್‌ವ್ಯೂ ಸೆರೆಹಿಡಿಯಲು ಹೋಗಿದ್ದಾಗ, ಪೊಲೀಸರೇ ತಡೆಹಿಡಿದಿದ್ದರು. ಈಗ ರಾಷ್ಟ್ರೀಯ ಭೌಗೋಳಿಕ ನೀತಿ 2021ರ ಪ್ರಕಾರವಾಗಿ ಭಾರತದ ಕಂಪೆನಿಗಳಿಗೆ ಇಂಥ ದೃಶ್ಯಗಳನ್ನು ಸೆರೆ ಹಿಡಿಯಲು ಅವಕಾಶ ನೀಡಲಾಗಿದೆ. ಸದ್ಯ ಗೂಗಲ್ ಟೆಕ್ ಮಹೀಂದ್ರಾ ಮತ್ತು ಮುಂಬಯಿಯ ಜೆನೆಸಿಸ್ ಇಂಟರ್‌ನ್ಯಾಶನಲ್ ಎಂಬ ಕಂಪೆನಿ ಜತೆಗೂಡಿ ಈ ಸೌಲಭ್ಯ ಒದಗಿಸುತ್ತಿದೆ. ಎಲ್ಲ ದತ್ತಾಂಶಗಳು ಭಾರತದಲ್ಲೇ ಸೇವ್ ಆಗಬೇಕು. ಎಲ್ಲ ಕಡೆ ಸಿಗುತ್ತದೆಯೇ?
ಇಲ್ಲ. ಸದ್ಯ ದೇಶದ 10 ನಗರಗಳಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ. ಹಾಗೆಯೇ, ಬೆಂಗಳೂರಿನಲ್ಲಿ ಈ ಸೌಲಭ್ಯವಿದ್ದರೂ, ರಕ್ಷಣ ಇಲಾಖೆಯ ಸ್ಥಳಗಳು, ಸರಕಾರಿ ಆಸ್ತಿಗಳು, ಮಿಲಿಟರಿ ಪ್ರದೇಶಗಳಲ್ಲಿ ಸ್ಟ್ರೀಟ್ ವ್ಯೂಗೆ ಅವಕಾಶವಿಲ್ಲ.
Related Articles
ಇದುವರೆಗೆ ಇದ್ದ ಅಪಾಯವೇ ಇದಾಗಿತ್ತು. ಅಂದರೆ ಸ್ಟ್ರೀಟ್ ವ್ಯೂ ವೇಳೆ ಸೆರೆಹಿಡಿಯುವಾಗ ಕಾರಿನ ನಂಬರ್‌ಗಳು, ಮನೆ ನಂಬರ್‌ಗಳು, ವ್ಯಕ್ತಿಯ ಚಹರೆಗಳು ಇದರಲ್ಲಿ ದಾಖಲಾಗುತ್ತವೆ. ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಎಂದೇ ಹೇಳಲಾಗುತ್ತಿತ್ತು.
Advertisement