Advertisement

ಟಿ20 ಕ್ರಿಕೆಟ್ ಗೆ ಬಂದಿದೆ ಮತ್ತೊಂದು ನಿಯಮ; ಏನಿದು ಸೂಪರ್ ಸಬ್?

04:53 PM Sep 17, 2022 | Team Udayavani |

ಮುಂಬೈ: ಕಳೆದೆರಡು ದಶಕದಲ್ಲಿ ಕ್ರಿಕೆಟ್ ಹಲವಾರು ಬದಲಾವಣೆಗಳನ್ನು ಕಂಡಿದೆ. ಅದರಲ್ಲೂ ಟಿ20 ಕ್ರಿಕೆಟ್ ನ ಉಗಮದ ಬಳಿಕ ಅತಿ ವೇಗದಲ್ಲಿ ಹಲವು ರೀತಿ ಬದಲಾವಣೆಗಳು ಆಗುತ್ತಿವೆ. ಇದೀಗ ಮತ್ತೊಂದು ನಿಯಮ ಬಂದಿದ್ದು, ಅದೇ ಸೂಪರ್ ಸಬ್ ಅಥವಾ ಇಂಪಾಕ್ಟ್ ಪ್ಲೇಯರ್.

Advertisement

2005ರಲ್ಲಿ ಐಸಿಸಿ ಏಕದಿನ ಕ್ರಿಕೆಟ್ ನಲ್ಲಿ ಈ ನಿಯಮವನ್ನು ಪರಿಚಯಿಸಿತ್ತು. ಒಂದು ವರ್ಷದ ಬಳಿಕ ಈ ನಿಯಮವನ್ನು ತೆಗೆದು ಹಾಕಲಾಗಿತ್ತು.

ಶುಕ್ರವಾರ ಆರಂಭವಾದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಸೂಪರ್-ಸಬ್ ನಿಯಮವನ್ನು ಪರಿಚಯಿಸಲಾಗಿದೆ. ಈಡನ್ ಗಾರ್ಡನ್ಸ್‌ನಲ್ಲಿ ಇಂಡಿಯಾ ಮಹಾರಾಜಸ್ ಮತ್ತು ಟೀಮ್ ವರ್ಲ್ಡ್ ಜೈಂಟ್ಸ್ ನಡುವಿನ ವಿಶೇಷ ಪಂದ್ಯದಲ್ಲಿ ಬಿಸಿಸಿಐ ಈ ನಿಯಮ ಪರಿಚಯಿಸಿದೆ. ಇದನ್ನು ದೇಶಿಯ ಟಿ20 ಲೀಗ್ ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲೂ ಬಿಸಿಸಿಐ ಅಳವಡಿಸಲಿದೆ.

ಏನಿದು ಸೂಪರ್ ಸಬ್:

ಸೂಪರ್ ಸಬ್ ಎಂದರೆ ಬದಲಿ ಆಟಗಾರ ಎಂದರ್ಥ. ತಂಡವು ತನ್ನ ಆಡುವ 11 ಆಟಗಾರರ ಪಟ್ಟಿ ಮತ್ತು ನಾಲ್ವರು ಬದಲಿ ಆಟಗಾರರ ಹೆಸರನ್ನು ಟಾಸ್ ವೇಳೆ ಸೂಚಿಸಬೇಕು. ಪಂದ್ಯದ ಆರಂಭದ ನಂತರ ತಂಡಗಳು ಈ 4 ಆಟಗಾರರಲ್ಲಿ ಯಾರನ್ನಾದರೂ ಪ್ಲೇಯಿಂಗ್ ಇಲೆವೆನ್​ನಲ್ಲಿ ಸೇರಿಸಿಕೊಳ್ಳಬಹುದು. ಆದರೆ ಇನಿಂಗ್ಸ್​ನ 14ನೇ ಓವರ್​ಗೂ ಮೊದಲು ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು.

Advertisement

ಇದನ್ನೂ ಓದಿ:ನಾನು ಬಾಲಿವುಡ್‌ ಗೆ ಬರಲು ಇವರೇ ಕಾರಣ: ರಶ್ಮಿಕಾ ಹೇಳಿದ್ದು ಯಾರ ಬಗ್ಗೆ?

ಬದಲಿ ಆಟಗಾರ​ನನ್ನು ಕಣಕ್ಕಿಳಿಸಿದರೆ, ಒಬ್ಬ ಆಟಗಾರ ಹೊರ ಹೋಗಬೇಕು. ಆದರೆ ಹೊರಹೋದ ಆಟಗಾರ ಆ ಬಳಿಕ ಯಾವುದೇ ರೂಪದಲ್ಲಿ ಪಂದ್ಯದ ಭಾಗವಾಗಲು ಸಾಧ್ಯವಾಗುವುದಿಲ್ಲ. ಅಂದರೆ ಬದಲಿ ಫೀಲ್ಡರ್ ಆಗಿಯೂ ಕೂಡ ಅಡಲು ಅವಕಾಶ ಇರುವುದಿಲ್ಲ.

ಬ್ಯಾಟಿಂಗ್ ತಂಡವು, ವಿಕೆಟ್ ಪತನದ ಸಮಯದಲ್ಲಿ ಅಥವಾ ಇನ್ನಿಂಗ್ಸ್ ವಿರಾಮದ ವೇಳೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಪರಿಚಯಿಸಬಹುದು. ಒಂದು ವೇಳೆ ಫೀಲ್ಡಿಂಗ್ ತಂಡವು ಬೌಲರ್ ಅನ್ನು ಕಣಕ್ಕಿಳಿಸಲು ಬಯಸಿದರೆ, ಸಂಪೂರ್ಣ ಓವರ್​ ಎಸೆಯುವ ಅವಕಾಶ ಕೂಡ ಇರಲಿದೆ. ಅಂದರೆ ಒಂದಕ್ಕಿಂತ ಹೆಚ್ಚು ಓವರ್‌ ಗಳನ್ನು ಬೌಲ್ ಮಾಡದಿದ್ದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುವ ಆಟಗಾರನಿಗೆ ಪೂರ್ಣ ನಾಲ್ಕು ಓವರ್‌ ಗಳನ್ನು ಬೌಲ್ ಮಾಡಲು ಅನುಮತಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next