Advertisement

ದೋಸೆ ಅಂದ್ರೆ ಏನು? ಅದು ಹೇಗಿರುತ್ತೆ?

07:46 PM Nov 12, 2019 | mahesh |

ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು ನಿಮ್ಮಿಂದಾಗಿ ಸ್ಕೂಲ್‌ ಬಸ್ಸೂ ಮಿಸ್ಸಾಯ್ತು…ಆ ಮಗುವಿನ ಅಮ್ಮ ಹೀಗೆಲ್ಲಾ ಹೇಳುತ್ತಲೇ ಹೋದಳು.

Advertisement

ಬೆಳಗ್ಗೆ ಗಂಡ ಮಕಿÛಗೆ ಮೆಂತ್ಯದ ದೋಸೆ, ಕಡಲೆಕಾಯಿ ಚಟ್ನಿ ಮಾಡಿ ಲಂಚ್‌ ಬಾಕ್ಸ್ ಗೆ ತುಂಬಿಸ್ತಾ ಇದ್ದೆ. ಬೆಳಗ್ಗೆ ಎಷ್ಟು ಬೇಗ ಟೈಮ್‌ ಹೋಗಿºಡುತ್ತೆ ಗೊತ್ತಲ್ಲಾ…ಅಡುಗೆಮನೆ ಪೂರ್ತಿ ದೊಂಬಿ ಆಗಿರುತ್ತೆ. ಎಷ್ಟು ಧಾವಂತಪಟ್ರೂ ಒಮ್ಮೊಮ್ಮೆ ಯಾರಾದರೂ ಒಬ್ಬರಿಗೆ ಲೇಟ್‌ ಆಗ್ಬಿಡುತ್ತೆ. ಅವತ್ತೂ ಅಷ್ಟೆ; ಒಂದು ದೋಸೆ ಕಾವಲಿ ಮೇಲೆ ಹಾಕಿ ಸಣ್ಣ ಉರಿಗಿಟ್ಟು, ಗೇಟಾಚೆ ಗುಡಿಸಿ ಹೊಸ್ತಿಲಿಗೆ ನೀರು ಹಾಕಿ, ಕಸದವನು ಬಂದಾಂತ ಕಸದ ಬಕೆಟ್‌ ಹಿಡಿದು ಆಚೆಗೆ ಓಡಿ… ಹೊರಗೂ ಒಳಗೂ ದಡಾಬಡಿ ಮಾಡ್ತಾ ಇದ್ದಾಗಲೇ ಪಕ್ಕದ್ಮನೆ ಪುಟ್ಟ ಬಂದ. (ಸಣ್ಣ ಮಗನನ್ನು ಮಾತನಾಡಿಸಲು ಆಗಾಗ ಬರುತ್ತಿರುತ್ತಾನೆ)

ಪುಟ್ಟ:ಆಂಟಿ…ಹರಿ ಎದ್ದಿದಾನಾ?
ನಾನು: ಇಲ್ಲ ಕಣೋ, ಆಮೇಲೆ ಬಾ. ಬೆಳಗ್ಗೆ ವಾಕಿಂಗ್‌ ಮುಗಿಸಿ, ಆಟ ಆಡಿ, ಈಗ ನಿದ್ದೆ ಮಾಡ್ತಾ ಇದಾನೆ.
ಪು: ಪರ್ವಾಗಿಲ್ಲ ಬಿಡಿ, ನಿಮ್‌ ಹತ್ರ ಮಾತಾಡ್ತೀನಿ.
ನಾ: ನಂಗೆ ಟೈಂ ಇಲ್ಲಪ್ಪ, ನಾನು ದೋಸೆ ಮಾಡ್ತಾ ಇದೀನಿ. ನೀನು ತಿಂಡಿ ತಿಂದ್ಯಾ?
ಪು: ಇಲ್ಲ ಆಂಟಿ, ಅಮ್ಮ ಏನೂ ಮಾಡೇ ಇಲ್ಲ ಇನ್ನೂ.. ತುಂಬಾ ಹಸಿವು..
ನಾ: ಮಾಡ್ತಾ ಇಬೋìದು ಈಗ, ಹೇಗೂ ನಿಂಗೆ ಸ್ಕೂಲ್‌ ಇನ್ನೂ ಲೇಟ್‌ ಅಲ್ವಾ..
ನನ್ನ ಮಾತು ಅರ್ಧಕ್ಕೇ ಕತ್ತರಿಸಿ..
ಪು: ಆಂಟಿ, ದೋಸೆ ಅಂದ್ರೇನು, ಅದು ಹೇಗಿರುತ್ತೆ?
ನಾ : ಆಹಾಹಾ.. ಗೊತ್ತಿಲ್ವೇನೋ ನಿನಗೆ? ಮನೇಲಿ ನಿಮ್ಮಮ್ಮ ಮಾಡಲ್ವಾ?
ಪು : ಇಲ್ಲ. ನಂಗೆ ಲೇಸ್‌, ಕುರ್‌ಕುರೆ, ಸ್ಯಾಂಡ್‌ವಿಚ್‌ ಚೆನ್ನಾಗಿ ಗೊತ್ತು. ಅಮ್ಮ ಬಾಕÕ…ಗೂ ಅದನ್ನೇ ಕೊಡೋದು.
ಈಗಿನ ಕಾಲದ ಮಕ್ಕಳ ಸ್ಥಿತಿ ಕಂಡು “ಅಯ್ಯೋ ಪಾಪ’ ಅನಿಸಿಬಿಟ್ಟಿತು. ಕೆಲಸಕ್ಕೆ ಹೋಗುವ ಈ ಮಗುವಿನ ಅಮ್ಮ, ಬಗೆಬಗೆಯ ಅಡುಗೆ ಮಾಡುವುದು ಕಷ್ಟ ಅಂತ ಹೊರಗಿನ ತಿಂಡಿಯನ್ನೇ ತಿನ್ನಿಸುತ್ತಿದ್ದಾರೇನೋ ಅಂದುಕೊಂಡೆ. ಮಧ್ಯಮ ವರ್ಗದವರಾದರೂ ನಮ್ಮ ಬಾಲ್ಯ ಸಮೃದ್ಧವಾಗಿತ್ತು. ಹೊತ್ತೂತ್ತಿಗೆ ತಿಂಡಿ ತೀರ್ಥಗಳು, ಹಬ್ಬ ಹರಿದಿನಗಳಲ್ಲಿ ಥರಾವರಿ ವ್ಯಂಜನಗಳು, ಜೊತೆಗೆ ಅಕ್ಕ-ತಮ್ಮಂದಿರೊಡನೆ ಜಗಳವಾಡಿಕೊಂಡು ತಿಂದ ಸೀಬೆಕಾಯಿ, ಮಾವಿನ ಹಣ್ಣು, ಕಬ್ಬು, ಕಡಲೆಕಾಯಿ, ಜೋಳ, ಕಲ್ಲಂಗಡಿ ಹಣ್ಣು…ಒಂದೇ ಎರಡೇ…. ಈಗಿನ ಮಕ್ಕಳು ಇವೆಲ್ಲವಿಂದ ಬಿಡಿ, ಅಮ್ಮನ ಕೈಯಡುಗೆಯಿಂದಲೇ ವಂಚಿತರಾಗುತ್ತಿದ್ದಾರಲ್ಲಾ ಅನಿಸಿ ನೋವಾಯಿತು.
ಪುಟ್ಟನಿಗಾಗಿ ಒಂದು ದೋಸೆ ಮಾಡಿ, ತುಪ್ಪದಲ್ಲಿ ಬಳಿದು ತಟ್ಟೆಗೆ ಹಾಕಿಕೊಟ್ಟೆ. ಖುಷಿಯಾಗಿ ಪೂರ್ತಿ ತಿಂದು, “ಸೂಪರ್‌ ಆಗಿದೆ ಆಂಟಿ’ ಅಂತ ಶಭಾಷ್‌ಗಿರಿ ಕೊಟ್ಟ.
ನಾ : ಆಯ್ತು, ಚೆನ್ನಾಗಿ ಕೈತೊಳೆದುಕೊಂಡು ಹೋಗು. ಒಂಬತ್ತು ಗಂಟೆಗೆ ನಿನ್‌ ಸ್ಕೂಲ್‌ ಬಸ್‌ ಬರುತ್ತಲ್ವಾ ..
ಪು : ಹೂಂ..ಬಾಯ್‌ ಆಂಟಿ..
ಹತ್ತು ನಿಮಿಷ ಕೂಡ ಆಗಿಲ್ಲ. ಪುಟ್ಟನ ಅಮ್ಮ ಕೈಬಾಯಿ ತಿರುಗಿಸಿಕೊಂಡು ಬಂದ್ಲು. “ಏನು ನಿಮಗೆ ಅಷ್ಟೂ ಬುದ್ಧಿ ಬೇಡ್ವಾ? ಬೆಳಗ್ಗೆ ತಾನೇ ಎರಡೂವರೆ ದೋಸೆ, ಆಲೂಗಡ್ಡೆ ಪಲ್ಯ ತಿಂದಿದ್ದ. ಅವನು ಬೇಡ ಬೇಡ ಅಂತ ಎಷ್ಟು ಕೇಳ್ಕೊಂಡ್ರೂ “ತಿನ್ನು ತಿನ್ನು’ ಅಂತ ಬಲವಂತವಾಗಿ ದೋಸೆ ತಿನ್ನಿಸಿದಿರಂತಲ್ಲ! ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ಮಾಡೋದೂ.. ನಿಮ್ಮಿಂದ ಅನ್ಯಾಯವಾಗಿ ಇವತ್ತು ಸ್ಕೂಲ್‌ ಬಸ್ಸೂ ಮಿಸ್ಸಾಯ್ತು!’ ಅಂತೆಲ್ಲಾ ಹೇಳಿ ಕಣ್ಣು, ಮುಖ ಇಷ್ಟು ದಪ್ಪ ಮಾಡಿಕೊಂಡು ನನ್ನ ಸಮಜಾಯಿಷಿ ಕೂಡ ಕೇಳಿಸಿಕೊಳ್ಳದೆ ಗುರುವಾರದ ಅರ್ಚನೆ, ಅಭಿಷೇಕ ಮಾಡಿ ಹೋದಳು!
ಏನೋ ಮಗು ಕೇಳ್ತಲ್ಲಾ ಅಂತ ದೋಸೆ ಮಾಡಿಕೊಟ್ರೆ ಹೀಗಾ ಆಡೋದು? “ಆಂಟೀ, ದೋಸೆ ಹೇಗಿರುತ್ತೆ? ನಮ್ಮನೇಲಿ ದೋಸೇನೇ ಮಾಡಲ್ಲ’ ಅಂತ ಅವನು ತಾನೇ ಹೇಳಿದ್ದು? ಆರು ವರ್ಷದ ಮಗು ಕೂಡಾ ಸುಳ್ಳು ಹೇಳುತ್ತೆ ಅನ್ನೋದು ನನಗೆ ಹೇಗೆ ಗೊತ್ತಾಗ್ಬೇಕು! ಏನ್ಮಾಡ್ತೀರಾ, ಎಲ್ಲಾ ನನ್ನ ಗ್ರಹಚಾರ.

-ಜಲಜಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next